Advertisement

Udupi; ಹಿಂದೂ ಧಾರ್ಮಿಕತೆ ವಿಚಾರದಲ್ಲಿ ಅಪಪ್ರಚಾರ: ಚಕ್ರವರ್ತಿ ಸೂಲಿಬೆಲೆ

01:10 AM Jan 11, 2024 | Team Udayavani |

ಉಡುಪಿ: ಹಿಂದೂ ಧರ್ಮದ ನಾಶಕ್ಕೆ ಜಾಗತಿಕವಾಗಿ ದೊಡ್ಡ ಷಡ್ಯಂತರ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ದೊಡ್ಡ ಸಮ್ಮಳನವೂ ನಡೆದಿತ್ತು. ಹಿಂದೂ ಧರ್ಮವನ್ನು ನಾಶಪಡಿಸುವುದು ಅಷ್ಟು ಸುಲಭವಿಲ್ಲ. ಧರ್ಮ ಮತ್ತು ಮತ(ರಿಲಿಜನ್‌) ನಡುವೆ ಸಾಕಷ್ಟು ವ್ಯತ್ಯಾಸವಿದೆ. ಹಿಂದೂ ಧರ್ಮವೇ ಹೊರತು ಮತವಲ್ಲ. ಈ ಸ್ಪಷ್ಟತೆ ಹಿಂದೂಗಳಲ್ಲಿ ಇರಬೇಕು ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.

Advertisement

ಶ್ರೀ ಪುತ್ತಿಗೆ ವಿಶ್ವಗೀತಾ ಪರ್ಯಾಯೋತ್ಸವದ ಸಾಂಸ್ಕೃತಿಕ ಕಾರ್ಯ ಕ್ರಮದ ಭಾಗವಾಗಿ ಬುಧವಾರ ಆನಂದತೀರ್ಥ ಮಂಟಪದಲ್ಲಿ ನಡೆದ ಪ್ರತಿಮೆ ಪ್ರಾಂಗಣಗಳ ಯೋಜನೆ ಅನಿವಾರ್ಯವೇ? ಸಂವಾದದಲ್ಲಿ ಅವರು ಮಾತನಾಡಿದರು.

ಸರಕಾರದ ಆಡಳಿತದಲ್ಲಿರುವ ಮಂದಿರ ಬಿಟ್ಟುಕೊಡಿ ಎಂಬ ಅಭಿಯಾನ ವ್ಯಾಪಕವಾಗಿ ನಡೆಯುತ್ತಿದೆ ಮತ್ತು ಇನ್ನಷ್ಟು ವ್ಯಾಪಕವಾಗಿ ನಡೆಯ ಬೇಕಿದೆ. ಇದಕ್ಕೆ ಪೂರಕವಾಗಿ ಹಿಂದೂ ಸಮಾಜ ದಲ್ಲಿನ ಜಾತಿ ಭೇದಗಳನ್ನು ಕಿತ್ತೂಗೆಯಬೇಕು. ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರವು ಹಿಂದೂಗಳಲ್ಲಿ ಮಸುಕಾ ಗಿದ್ದ ಸ್ವಾಭಿಮಾನವನ್ನು ಪುನಃ ಸ್ಥಾಪಿಸಿದೆ. ನಮ್ಮ ಬೇರುಗಳಿಗೆ ವಾಪಸ್‌ ಹೋಗುವ ಮೂಲಕ ವಿಶ್ವಕ್ಕೆ ಸಿಹಿಯಾದ ಫ್ರೂಟ್ಸ್ ನೀಡಬೇಕು ಎಂದರು.

ಧರ್ಮಕ್ಕೆ ಒಂದು ದೇವರು, ಒಂದು
ಪುಸ್ತಕ, ಒಬ್ಬನೇ ಋಷಿ ಎನ್ನುವುದಿಲ್ಲ. ನಮ್ಮಲ್ಲಿ ಮಧ್ವಾಚಾರ್ಯ, ಶಂಕರಾಚಾರ್ಯ, ರಾಮಾನುಜಾ ಚಾರ್ಯರು, ಇತಿಹಾಸ, ಪುರಾಣ, ತಂತ್ರಶಾಸ್ತ್ರ ಹೀಗೆ ಒಂದು ಪುಸ್ತಕವಲ್ಲ ಗ್ರಂಥಾಲಯವೇ ಇದೆ. ಭಿನ್ನ ಭಿನ್ನ ಮಾರ್ಗವನ್ನು ತನ್ನೊಂದಿಗೆ ಸೇರಿಸಿಕೊಳ್ಳುವುದು ಧರ್ಮ. ತನ್ನದು ಮಾತ್ರ ಸತ್ಯ ಎನ್ನುವುದು ರಿಲಿಜನ್‌. ಹೀಗಾಗಿ ರಿಲಿಜನ್‌ ಎಂದಿಗೂ ಧರ್ಮಕ್ಕೆ ಸಮಾನವಲ್ಲ. ಧರ್ಮದಲ್ಲಿ ಯಾವುದು ಅಗತ್ಯವೂ ಇಲ್ಲ, ಅನಿವಾರ್ಯವೂ ಅಲ್ಲ. ರೂಪವಿಲ್ಲದ ಕಲ್ಲಿನಲ್ಲೂ ದೇವರ ರೂಪ ನೋಡುವವರು ನಾವು ಎಂದು ವಿಶ್ಲೇಷಿಸಿದರು. ಸುಮನಾ ಭಟ್‌ ಕುತ್ಪಾಡಿ ಸಂವಾದ ನಡೆಸಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next