Advertisement

ಮಾನನಷ್ಟ ಮೊಕದ್ದಮೆ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾಗುವಂತೆ ಮನೇಕಾಗೆ ಕೋರ್ಟ್‌ ಸೂಚನೆ

07:32 PM Feb 07, 2021 | Team Udayavani |

ಮೈಸೂರು: ಮಾನನಷ್ಟ ಮೊಕದ್ದಮೆ ಪ್ರಕರಣ ಸಂಬಂಧ ಮಾಜಿ ಕೇಂದ್ರ ಸಚಿವೆ ಮನೇಕಾ ಗಾಂಧಿಗೆ ಮೈಸೂರಿನ ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ನೋಟಿಸ್‌ ಜಾರಿ ಮಾಡಿದ್ದು, ಮಾರ್ಚ್‌ 1 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

Advertisement

ಮೈಸೂರಿನ ನಿವಾಸಿ, ಅನಿಮಲ್‌ ವೆಲ್ಫೆರ್‌ ಬೋರ್ಡ್‌ ಆಫ್ ಇಂಡಿಯಾದ ಸದಸ್ಯ ಡಾ.ಎಸ್‌.ಕೆ. ಮಿತ್ತಲ್‌, ತಮಗೆ ಮಾನಹಾನಿ ಮಾಡಲಾಗಿದೆ ಎಂದು ಕೋರ್ಟ್‌ ಮೊರೆ ಹೋಗಿದ್ದರು. ಈ ಸಂಬಂಧ ಶನಿವಾರ ವಿಚಾರಣೆ ನಡೆಸಿದ ನ್ಯಾಯಾಧೀಶರು, ಮನೇಕಾ ಗಾಂಧಿವರಿಗೆ ಹಾಜರಾಗುವಂತೆ ನೋಟಿಸ್‌ ಜಾರಿ ಮಾಡಿದರು.

ಏನಿದು ಪ್ರಕರಣ?:
ಮಿತ್ತಲ್‌ ಅನಿಮಲ್‌ ವೆಲ್ಫೆರ್‌ ಬೋರ್ಡ್‌ ಆಫ್ ಇಂಡಿಯಾದ ಸದಸ್ಯರಾಗಿದ್ದು, ಕರ್ನಾಟಕ ಮತ್ತು ಕೇರಳ ರಾಜ್ಯ ಉಸ್ತುವಾರಿ ಹೊತ್ತಿದ್ದರು. ಈ ವೇಳೆ ಕಸಾಯಿಖಾನೆ ಭೇಟಿ ಸೇರಿದಂತೆ ಸಾಕಷ್ಟು ಕಾರ್ಯಗಳಲ್ಲಿ ಮಿತ್ತಲ್‌ ಸಮರ್ಪಕವಾಗಿ ಕಾರ್ಯ ನಿರ್ವಹಿಸಿಲ್ಲ ಎಂದು ಮನೇಕಾ ಗಾಂಧಿ ಆರೋಪ ಮಾಡಿದ್ದರು. ಅಲ್ಲದೆ ಈ ಸಂಬಂಧ “ಮಂಡಳಿಯ ಸದಸ್ಯರ ವಿರುದ್ಧ ಆರೋಪ ಮಾಡಿ’ ಅಂದಿನ ಕೇಂದ್ರದ ಪರಿಸರ ಸಚಿವರಾಗಿದ್ದ ಡಾ.ಹರ್ಷವರ್ಧನ್‌ ಅವರಿಗೆ ಪತ್ರವನ್ನೂ ಬರೆದಿದ್ದರು. ಈ ಆರೋಪಗಳಿಗೆ ಸಂಬಂಧಿಸಿದಂತೆ ಎಸ್‌.ಕೆ.ಮಿತ್ತಲ್‌, ಮನೇಕಾ ಅವರಿಗೆ ಪತ್ರ ಬರೆದು ಸ್ಪಷ್ಟನೆ ನೀಡಿದ್ದರು. ಆದರೂ ಇದಕ್ಕೆ ಕಿವಿಗೊಡದೆ, ಮನೇಕಾ ಆರೋಪ ಮಾಡುವುದನ್ನು ಮುಂದುವರಿಸಿದ್ದರು.

ಇದನ್ನೂ ಓದಿ:ಪ.ಬಂಗಾಳದಲ್ಲಿ ಬದಲಾವಣೆ ತರಲು ಬಿಜೆಪಿಯಿಂದ ಮಾತ್ರ ಸಾಧ್ಯ: ಮಮತಾ ವಿರುದ್ಧ ಮೋದಿ ವಾಗ್ದಾಳಿ

ಇದರಿಂದ ಬೇಸರಗೊಂಡ ಮಿತ್ತಲ್‌ ಅವರು ಮೈಸೂರಿನ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಆದರೆ ನ್ಯಾಯಾಲಯವು ಅವರ ಅರ್ಜಿಯನ್ನು ವಜಾ ಮಾಡಿತ್ತು. ಮತ್ತೆ ಒಂದನೇ ಜಿಲ್ಲಾ ಮತು ¤ಸತ್ರ ನ್ಯಾಯಾಲಯದ ಮೊರೆ ಹೋಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next