Advertisement
ದೀಪಾವಳಿಗೆ ಸಂಪ್ರದಾಯ, ಧಾರ್ಮಿಕ, ಐತಿಹಾಸಿಕ ಪರಂಪರೆಯಿದೆ. ವಿಶೇಷವಾಗಿ ಮಣ್ಣಿನ ಹಣತೆಗಳು ಕಣ್ಮನ ಸೆಳೆಯುತ್ತಿದೆ. ನಗರದಲ್ಲಿ ಹಣತೆಗಳ ಖರೀದಿ ಜೋರಾಗಿನಡೆದಿದೆ.ಹತ್ತಾರುಮಾದರಿಯಹಣತೆಗಳು ಮಾರಾಟಕ್ಕಿಡಲಾಗಿದೆ. ಹಣತೆಗಳ ಬೆಲೆ ಹೆಚ್ಚಾಗಿದ್ದರೂ, ಹಬ್ಬ ಆಚರಿಸಲು ಜನ ಖರೀದಿಯಲ್ಲಿ ತೊಡಗಿದ್ದಾರೆ. ನಗರದ ವಿವಿಧ ಕಡೆಗಳಲ್ಲಿ ತಳ್ಳುವ ಗಾಡಿಗಳಲ್ಲಿ, ರಸ್ತೆಬದಿಗಳಲ್ಲಿ ಹಣತೆಗಳ ಮಾರಾಟ ಜೋರಾಗಿಯೇ ಇದೆ. ಸಾಮಾನ್ಯವಾಗಿ ಮಣ್ಣಿನ ದೀಪ, ಪಿಂಗಾಣಿದೀಪ ಹೆಚ್ಚಿನ ಬೇಡಿಕೆ ಇದ್ದು, ಮಣ್ಣಿನ ಅಲಂಕಾರಿಕ ವಸ್ತುಗಳು 5 ರೂ.ನಿಂದ 150 ರೂ. ವರೆಗೆ ವ್ಯಾಪಾರ ಮಾಡಲಾಗುತ್ತಿದೆ. ಈಗಾಗಲೇ ಜಿಲ್ಲಾಡಳಿತ ಪಟಾಕಿ ಮಾರಾಟ ಮತ್ತು ಸುಡುವುದನ್ನು ನಿಷೇಧಿಸಿದೆ. ಹಸಿರು ಪಟಾಕಿಗೆ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದೆ.
Related Articles
Advertisement
ಈ ಬಾರಿ ದೀಪಾವಳಿ ಹಬ್ಬವನ್ನು ಸರಳವಾಗಿ ಆಚರಿಸುತ್ತಿದ್ದೇವೆ.ಕೊರೊನಾ ಇಡೀ ವಿಶ್ವವನ್ನು ಬಿಟ್ಟು ತೊಲಗುವಂತೆ ಆಗಬೇಕು. –ರೂಪಾ, ಗ್ರಾಹಕರು
ಜಿಲ್ಲೆಯಲ್ಲಿ ಕೋವಿಡ್ ದಿಂದ ಪಟಾಕಿ ನಿಷೇಧ ಮಾಡಲಾಗಿದೆ. ದೀಪಾವಳಿ ಹಬ್ಬವನ್ನು ಸರಳವಾಗಿ ಆಚರಿಸಬೇಕು. ಹಸಿರು ಪಟಾಕಿ ಬಳಸಬೇಕು. ಸುರಕ್ಷತಾ ಕ್ರಮ ಪಾಲಿಸಿ, ಮಾಲಿನ್ಯ ರಹಿತ ದೀಪಾವಳಿ ಆಚರಿಸಬೇಕು. –ಪಿ.ಎನ್.ರವೀಂದ್ರ, ಜಿಲ್ಲಾಧಿಕಾರಿ.