Advertisement
ಬುಧವಾರದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್ 6 ವಿಕೆಟಿಗೆ 118 ರನ್ ಗಳಿಸಿದರೆ, ಭಾರತ 18.1 ಓವರ್‌ಗಳಲ್ಲಿ 4 ವಿಕೆಟಿಗೆ 119 ರನ್ ಬಾರಿಸಿತು. ಇದು ವಿಂಡೀಸ್‌ಗೆ ಎದುರಾದ ಸತತ 2ನೇ ಸೋಲು.
Related Articles
Advertisement
ವಿಂಡೀಸ್ ಸಾಮಾನ್ಯ ಮೊತ್ತನಾಯಕಿ ಹ್ಯಾಲಿ ಮ್ಯಾಥ್ಯೂಸ್ (1) ಅವರನ್ನು ವಿಂಡೀಸ್ ಬೇಗನೇ ಕಳೆದುಕೊಂಡಿತು. ಪಂದ್ಯದ ದ್ವಿತೀಯ ಓವರ್‌ನ ಮೊದಲ ಎಸೆತದಲ್ಲೇ ಪೂಜಾ ಆಘಾತವಿಕ್ಕಿದರು. ಸ್ಕೋರ್ ಕೇವಲ 4 ರನ್ ಆಗಿತ್ತು. ಆದರೆ ದ್ವಿತೀಯ ವಿಕೆಟಿಗೆ ಜತೆಗೂಡಿದ ಸ್ಟಫಾನಿ ಟಯ್ಲರ್ ಮತ್ತು ಶಿಮೇನ್ 12 ಓವರ್‌ಗಳನ್ನು ಯಶಸ್ವಿಯಾಗಿ ನಿಭಾಯಿಸಿ 73 ರನ್ ಒಟ್ಟುಗೂಡಿಸಿದರು. ಈ ಜೋಡಿಯನ್ನು ಬೇರ್ಪಡಿಸಿದ್ದು ದೀಪ್ತಿ ಶರ್ಮ. ಕ್ರೀಸ್ ಆಕ್ರಮಿಸಿಕೊಂಡು ಇಬ್ಬರನ್ನೂ ಅವರು ಒಂದೇ ಓವರ್‌ನಲ್ಲಿ ಉಡಾಯಿಸಿ ಮೇಲುಗೈ ಒದಗಿಸಿದರು. 15 ರನ್ನಿಗೆ 3 ವಿಕೆಟ್ ಕಿತ್ತ ದೀಪ್ತಿ ಭಾರತದ ಯಶಸ್ವಿ ಬೌಲರ್. ಇದರೊಂದಿಗೆ ಅವರು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 100 ವಿಕೆಟ್ ಉರುಳಿಸಿದ ಸಾಧನೆಗೈದರು. 40 ಎಸೆತಗಳಿಂದ 42 ರನ್ ಮಾಡಿದ ಟಯ್ಲರ್ (6 ಬೌಂಡರಿ) ವಿಂಡೀಸಿನ ಟಾಪ್ ಸ್ಕೋರರ್. ಕ್ಯಾಂಬೆಲ್ 36 ಎಸೆತ ಎದುರಿಸಿ 30 ರನ್ ಮಾಡಿದರು (3 ಬೌಂಡರಿ). ಇವರಿಬ್ಬರ ನಿರ್ಗಮನದ ಬಳಿಕ ಶೆಡೀನ್ ನೇಶನ್ (21) ಮತ್ತು ಶಬಿಕಾ ಗಜ°ಬಿ (15) ಒಂದಿಷ್ಟು ಹೋರಾಟ ತೋರಿದರು. ಸಂಕ್ಷಿಪ್ತ ಸ್ಕೋರ್: ವೆಸ್ಟ್ ಇಂಡೀಸ್-6 ವಿಕೆಟಿಗೆ 118 (ಸ್ಟಫಾನಿ ಟಯ್ಲರ್ 42, ಶಿಮೇನ್ ಕ್ಯಾಂಬೆಲ್ 30, ಶೆಡೀನ್ ನೇಶನ್ ಔಟಾಗದೆ 21, ದೀಪ್ತಿ 15ಕ್ಕೆ 3, ಪೂಜಾ 21ಕ್ಕೆ 1, ರೇಣುಕಾ 22ಕ್ಕೆ 1). ಭಾರತ-18.1 ಓವರ್‌ಗಳಲ್ಲಿ 4 ವಿಕೆಟಿಗೆ 119 (ರಿಚಾ ಔಟಾಗದೆ 44, ಕೌರ್ 33, ಶಫಾಲಿ 28, ಮಂಧನಾ 10, ಕರಿಷ್ಮಾ ರಮರ್ಯಾಕ್ 14ಕ್ಕೆ 2).