Advertisement

ವನಿತಾ ಪ್ರೀಮಿಯರ್‌ ಲೀಗ್‌: ಯುಪಿ ವಾರಿಯರ್ : ದೀಪ್ತಿ ಶರ್ಮ ಉಪನಾಯಕಿ

11:02 PM Feb 25, 2023 | Team Udayavani |

ಲಕ್ನೋ: ಚೊಚ್ಚಲ ವನಿತಾ ಪ್ರೀಮಿಯರ್‌ ಲೀಗ್‌ನಲ್ಲಿ ಟೀಮ್‌ ಇಂಡಿಯಾದ ಆಲ್‌ರೌಂಡರ್‌ ದೀಪ್ತಿ ಶರ್ಮ ಅವರನ್ನು ಯುಪಿ ವಾರಿಯರ್ ತಂಡದ ಉಪನಾಯಕಿಯನ್ನಾಗಿ ನೇಮಿಸಲಾಗಿದೆ. ಆಸ್ಟ್ರೇಲಿಯದ ಅಲಿಸ್ಸಾ ಹೀಲಿ ಈ ತಂಡದ ನಾಯಕಿಯಾಗಿದ್ದಾರೆ.

Advertisement

ಕಳೆದ ಹಾರಾಜಿನಲ್ಲಿ ದೀಪ್ತಿ ಶರ್ಮ ಅವರನ್ನು 2.6 ಕೋಟಿ ರೂ. ಮೊತ್ತಕ್ಕೆ ಯುಪಿ ವಾರಿಯರ್ ಖರೀದಿಸಿತ್ತು. ನಾಯಕತ್ವದ ರೇಸ್‌ನಲ್ಲೂ ದೀಪ್ತಿ ಮುಂದಿದ್ದರು. ಆದರೆ ಇದು ಹೀಲಿ ಪಾಲಾದಾಗ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದರು.

“ನಾಯಕಿ ಅಲಿಸ್ಸಾ ಹೀಲಿ ಹಾಗೂ ತಂಡದ ಇತರ ಹಿರಿಯ ಆಟಗಾರರ ಉಪಸ್ಥಿತಿಯಲ್ಲಿ ನಮ್ಮ ತಂಡ ಉತ್ತಮ ಪ್ರದರ್ಶನ ನೀಡಲಿದೆ ಎಂಬ ವಿಶ್ವಾಸವಿದೆ’ ಎಂಬುದಾಗಿ ದೀಪ್ತಿ ಶರ್ಮ ಹೇಳಿದ್ದಾರೆ.

ಯುಪಿ ತಂಡಕ್ಕೆ ಇಂಗ್ಲೆಂಡ್‌ನ‌ ಜಾನ್‌ ಲೂಯಿಸ್‌ ಕೋಚ್‌ ಆಗಿದ್ದಾರೆ. ಅಂಜು ಜೈನ್‌ ಸಹಾಯಕ ಕೋಚ್‌. ಆಸ್ಟ್ರೇಲಿಯದ ಮಾಜಿ ಆಟಗಾರರಾದ ಆ್ಯಶ್ಲಿ ನಾಫೆ ಬೌಲಿಂಗ್‌ ಕೋಚ್‌, 4 ಬಾರಿಯ ವಿಶ್ವಕಪ್‌ ವಿಜೇತ ತಂಡದ ಸದಸ್ಯೆಯೂ ಆಗಿರುವ ಲೀಸಾ ಸ್ಥಾಲೇಕರ್‌ ಮೆಂಟರ್‌ ಆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next