Advertisement

ಸದ್ಯದಲ್ಲೇ ದೀಪಿಕಾ  ಮೇಣದ ಪ್ರತಿಮೆ

06:00 AM Jul 24, 2018 | Team Udayavani |

ಮುಂಬಯಿ: ಪ್ರತಿಷ್ಠಿತ ಮೇಡಂ ಟುಸ್ಸಾಂಡ್ಸ್‌ ಸಂಸ್ಥೆಯು ನಿರ್ಮಿಸುವ ಮೇಣದ ಪ್ರತಿಮೆಗಳ ಸಾಲಿಗೆ ಇದೀಗ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆಯ ಪ್ರತಿಮೆ ಸದ್ಯದಲ್ಲೇ ಸೇರ್ಪಡೆಗೊಳ್ಳಲಿದೆ. ಹೊಸದಾಗಿ ನಿರ್ಮಾಣಗೊಳ್ಳಲಿರುವ ಪ್ರತಿಮೆ ಲಂಡನ್‌ನಲ್ಲಿರುವ ಪ್ರಧಾನ ಸಂಗ್ರಹಾಲಯದ ಜತೆಗೆ ದೆಹಲಿಯಲ್ಲಿನ ಶಾಖಾ ಸಂಗ್ರಹಾಲಯದಲ್ಲೂ ಸ್ಥಾನ ಪಡೆಯಲಿರುವುದು ವಿಶೇಷ.

Advertisement

 ಪ್ರತಿಮೆ ನಿರ್ಮಾಣಕ್ಕಾಗಿ ಸಂಸ್ಥೆಯ ಕಲಾವಿದ ತಜ್ಞರು ಲಂಡನ್‌ನಲ್ಲಿ ಸೋಮವಾರ, ದೀಪಿಕಾ ಪಡುಕೋಣೆಯವರನ್ನು ಭೇಟಿಯಾಗಿ ಸುಮಾರು 200ಕ್ಕೂ ಹೆಚ್ಚು ಅಳತೆ ಪಡೆದಿದ್ದು, ಅವರ ಫೋಟೋಗಳನ್ನೂ ಸೆರೆಹಿಡಿದಿದ್ದಾರೆ. 2019ರ ಆರಂಭದಲ್ಲಿ ಮೊದಲ ಪ್ರತಿಮೆ ಲಂಡನ್‌ನಲ್ಲಿ ಅನಾವರಣಗೊಳ್ಳಲಿದ್ದು, ಕೆಲ ತಿಂಗಳ ನಂತರ ದೆಹಲಿಯಲ್ಲಿ ಅನಾವರಣ ಆಗಲಿದೆ. ಏಂಜೆಲೀನಾ ಜ್ಯೂಲಿ, ಹೆಲೆನ್‌ ಮಿರೆನ್‌ರಂಥ ಖ್ಯಾತ ತಾರೆಯರ ಮೇಣದ ಪ್ರತಿಮೆಗಳ ಪಕ್ಕದಲ್ಲೇ ದೀಪಿಕಾಳ ಪ್ರತಿಮೆಯೂ ತಲೆಎತ್ತಲಿದೆ ಎಂದು ಹೇಳಲಾಗಿದೆ. ಈ ವಿಚಾರ ತಿಳಿದು ಪುಳಕಿತಳಾಗಿದ್ದೇನೆ ಎಂದು ದೀಪಿಕಾ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next