Advertisement

ಕೇನ್ಸ್‌ ಚಲನಚಿತ್ರೋತ್ಸವದಲ್ಲಿ ದೀಪಿಕಾ ತೀರ್ಪುಗಾರ್ತಿ

08:25 PM Apr 27, 2022 | Team Udayavani |

ಮೇ 17-28ರವರೆಗೆ ಪ್ಯಾರಿಸ್‌ನಲ್ಲಿ ನಡೆಯಲಿರುವ 75ನೇ ಕೇನ್ಸ್‌ ಚಲನಚಿತ್ರೋತ್ಸವಕ್ಕೆ ಬಾಲಿವುಡ್‌ ತಾರೆ ದೀಪಿಕಾ ಪಡುಕೋಣೆ ತೀರ್ಪುಗಾರರಾಗಿ ಆಯ್ಕೆಯಾಗಿದ್ದಾರೆ.

Advertisement

ಒಟ್ಟು 8 ಸಿನಿ ತಾರೆಗಳನ್ನು ತೀರ್ಪುಗಾರರಾಗಿ ಮಾಡಲಾಗಿದ್ದು, ಅದನ್ನು ಫ್ರಾನ್ಸ್‌ನ ನಟ ವಿನ್ಸೆಟ್‌ ಲಿಂಡನ್‌ ಮುನ್ನಡೆಸಲಿದ್ದಾರೆ.

ಪ್ರತಿಷ್ಠಿತ ಪಲ್ಮೆ ಡಿ’ಒರ್‌ ಪ್ರಶಸ್ತಿಯನ್ನು ನಾಮಿನೇಟ್‌ ಆಗಿರುವ 21 ಸಿನಿಮಾಗಳಲ್ಲಿ ಯಾವ ಸಿನಿಮಾಕ್ಕೆ ಕೊಡಬೇಕು ಎನ್ನುವುದನ್ನು ಈ ತೀರ್ಪುಗಾರರು ನಿರ್ಧರಿಸಲಿದ್ದಾರೆ.

ಹಾಗಾಗಿ ದೀಪಿಕಾ ಅವರು ಚಲನಚಿತ್ರೋತ್ಸವದಲ್ಲಿ ಹತ್ತೂ ದಿನಗಳ ಕಾಲ ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next