ಸೋನೆಪತ್: ವಿಶ್ವದ ಮಾಜಿ ನಂ.1 ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಮುಂಬರುವ ಏಷ್ಯನ್ ಗೇಮ್ಸ್, ವಿಶ್ವಕಪ್ ಮತ್ತು ವಿಶ್ವ ಚಾಂಪಿಯನ್‌ಶಿಪ್ ಅರ್ಹತೆ ಗಳಿಸಲು ವಿಫಲರಾಗಿದ್ದಾರೆ.
ತಾಯ್ತನದ ರಜೆ ಬಳಿಕ ಸ್ಪರ್ಧೆಗೆ ಮರಳಿದ ದೀಪಿಕಾ ಕುಮಾರಿ, ಕಳೆದ ತಿಂಗಳು ಕೋಲ್ಕತಾದಲ್ಲಿ ನಡೆದ ಮೊದಲ ಹಂತದ ಟ್ರಯಲ್ಸ್ ನಲ್ಲಿ 7ನೇ ಸ್ಥಾನಿಯಾಗಿದ್ದರು. ಆದರೆ ಸೋನೆಪತ್‌ನಲ್ಲಿ ನಡೆದ 3 ದಿನಗಳ ಆಯ್ಕೆ ಟ್ರಯಲ್ಸ್‌ನ ವನಿತಾ ರಿಕರ್ವ್ ವಿಭಾಗದಲ್ಲಿ ಅಗ್ರ ಎಂಟರಾಚೆಯ ಸ್ಥಾನ ಪಡೆದು ನಿರಾಸೆ ಮೂಡಿಸಿದರು. ಇವರೊಂದಿಗೆ ಹಾಲಿ ಜೂನಿಯರ್ ವಿಶ್ವ ಚಾಂಪಿಯನ್ ಕೋಮಲಿಕಾ ಬಾರಿ, ಮಾಜಿ ರಾಷ್ಟ್ರೀಯ ಚಾಂಪಿಯನ್ ರಿಧಿ ಪೋರ್ ಕೂಡ ಟಾಪ್-8 ಸ್ಥಾನ ಕಾಯ್ದುಕೊಳ್ಳಲಾಗದೆ ಹೊರಬಿದ್ದರು.
ಆದರೆ ದೀಪಿಕಾ ಕುಮಾರಿ ಅವರ ಪತಿ ಅತನು ದಾಸ್ ಒಂದು ವರ್ಷದ ಬಳಿಕ ರೀಕರ್ವ್ ವಿಭಾಗಕ್ಕೆ ಮರಳಲು ಯಶಸ್ವಿಯಾಗಿದ್ದಾರೆ.
ಈ ವರ್ಷದ ಏಷ್ಯನ್ ಗೇಮ್ಸ್, 4 ಹಂತಗಳ ವಿಶ್ವಕಪ್ ಹಾಗೂ ವಿಶ್ವ ಚಾಂಪಿಯನ್‌ಶಿಪ್- ಈ ಮೂರು ಜಾಗತಿಕ ಸ್ಪರ್ಧೆಗಳಲ್ಲಿ ಸ್ಪರ್ಧಿಸುವ ಅವಕಾಶ ಪಡೆದವರೆಂದರೆ ಭಜನ್ ಕೌರ್, ಅದಿತಿ ಜೈಸ್ವಾಲ್, ಅಂಕಿತಾ ಭಕತ್ ಮತ್ತು ಸಿಮ್ರನ್‌ಜಿತ್ ಕೌರ್ ಮಾತ್ರ.