Advertisement

Olympics:ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ ದೀಪಿಕಾ- ಆ.1 ಭಾರತದ ಇಂದಿನ ಸ್ಪರ್ಧೆಗಳ ವಿವರ…

10:22 AM Aug 01, 2024 | Team Udayavani |

ಬುಧವಾರ ಸತತ 2 ಸ್ಪರ್ಧೆಗಳಲ್ಲಿ ಜಯ ಸಾಧಿಸುವ ಮೂಲಕ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಪ್ರೀ
ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ. ಮೊದಲ ಸ್ಪರ್ಧೆಯಲ್ಲಿ ನೆದರ್ಲೆಂಡ್ಸ್‌ನ ಕ್ವಿಂಟಿ ರೋಫೆನ್‌ ವಿರುದ್ಧ 6-2 ಅಂತರದ ಜಯ ಸಾಧಿಸಿದ ದೀಪಿಕಾ ಕುಮಾರಿ, ಬಳಿಕ ಎಸ್ತೋನಿಯಾದ ರೀನಾ ಪರ್ನಾಟ್‌ ಅವರನ್ನು ಶೂಟ್‌ ಆಫ್ನಲ್ಲಿ 6-5ರಿಂದ ಹಿಮ್ಮೆಟ್ಟಿಸಿದರು.

Advertisement

2 ಪಂದ್ಯಗಳಲ್ಲಿ ನಿರ್ದಿಷ್ಟ ಗುರಿಯನ್ನು ಕರಾರುವಕ್ಕಾಗಿ ದೀಪಿಕ ತಲುಪಿದರು. ಶನಿವಾರದ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ದೀಪಿಕಾ
ಜರ್ಮನಿಯ ಮೈಕಲ್‌ ಕ್ರೋಪೆನ್‌ ವಿರುದ್ಧ ಸ್ಪರ್ಧಿಸಲಿದ್ದಾರೆ.

ಭಾರತದ ಇಂದಿನ ಸ್ಪರ್ಧೆಗಳು:
ರೇಸ್‌ ವಾಕ್‌:
ಪುರುಷರ 20 ಕಿ.ಮೀ. ವಿಭಾಗ: ಅಕ್ಷದೀಪ್‌ ಸಿಂಗ್‌, ವಿಕಾಸ್‌ ಸಿಂಗ್‌, ಪರಮ್‌ಜೀತ್‌ ಬಿಷ್ಟ್.
ಸಮಯ: ಬೆ. 11.30 ವನಿತಾ 20 ಕಿ.ಮೀ. ವಿಭಾಗ:
ಪ್ರಿಯಾಂಕಾ ಗೋಸ್ವಾಮಿ. ಸಮಯ: ಅ. 12.50

ಬ್ಯಾಡ್ಮಿಂಟನ್‌:
ಪುರುಷರ ಸಿಂಗಲ್ಸ್‌ ಪ್ರಿ ಕ್ವಾರ್ಟರ್‌ ಫೈನಲ್‌: ಲಕ್ಷ್ಯ ಸೇನ್‌.
ಸಮಯ: ಅ. 12.00 ಪುರುಷರ ಡಬಲ್ಸ್‌ ಕ್ವಾರ್ಟರ್‌ ಫೈನಲ್‌: ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌. ಸಮಯ: ಸಂಜೆ 4.30

Advertisement

ಗಾಲ್ಫ್:
ಪುರುಷರ ವೈಯಕ್ತಿಕ ಸ್ಟ್ರೋಕ್‌ ಪ್ಲೇ, ಮೊದಲ ಸುತ್ತು: ಗಗನ್‌ಜಿತ್‌ ಭುಲ್ಲಾರ್‌, ಶುಭಂಕರ್‌ ಶರ್ಮ.
ಸಮಯ: ಅ. 12.30

ಶೂಟಿಂಗ್‌:
ಪುರುಷರ 50 ಮೀ. ರೈಫ‌ಲ್‌ 3 ಪೊಸಿಶನ್‌ ಫೈನಲ್‌: ಸ್ವಪ್ನಿಲ್‌ ಕುಸಾಲೆ. ಸಮಯ: ಅ. 1.30

ಹಾಕಿ:
ಭಾರತ-ಬೆಲ್ಜಿಯಂ ಸಮಯ: ಅ. 1.30

ಬಾಕ್ಸಿಂಗ್‌:
ವನಿತೆಯರ 50 ಕೆಜಿ, 16ರ ಸುತ್ತು: ನಿಖಾತ್‌ ಜರೀನ್‌ -ವು ಯು. ಸಮಯ: ಅ. 2.30

ಆರ್ಚರಿ:
ಪುರುಷರ ವೈಯಕ್ತಿಕ 1/32 ಎಮಿಲಿನೇಶನ್‌ ಸುತ್ತು: ಪ್ರವೀಣ್‌ ಜಾಧವ್‌-ಕಾವೊ ವೆಂಕಾವೊ (ಚೀನಾ).
ಸಮಯ: ಅ. 1.00

ಶೂಟಿಂಗ್‌:
ವನಿತೆಯರ 50 ಮೀ. ರೈಫ‌ಲ್‌ 3 ಪೊಸಿಶನ್‌ ಅರ್ಹತಾ ಸುತ್ತು: ಸಿಫ್ನ ಕೌರ್‌ ಶರ್ಮ, ಅಂಜುಮ್‌ ಮೌದ್ಗಿಲ್‌. ಸಮಯ: ಅ. 3.30

ಸೈಲಿಂಗ್‌:
ವನಿತಾ ಡಿಂಗಿ ರೇಸ್‌ 1-2: ನೇತ್ರಾ ಕುಮಾನನ್‌. ಸಮಯ: ರಾತ್ರಿ 7.05

Advertisement

Udayavani is now on Telegram. Click here to join our channel and stay updated with the latest news.

Next