Advertisement

Deepfake Help Line: ಡೀಪ್‌ಫೇಕ್‌; 1930ಕ್ಕೆ ಕರೆ ಮಾಡಿ

11:07 AM Nov 19, 2023 | Team Udayavani |

ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ಡೀಪ್‌ಪೇಕ್‌ ವಿಡಿಯೋ ವೈರಲ್‌ ಬಳಿಕ ದೇಶಾದ್ಯಂತ ಡೀಪ್‌ಫೇಕ್‌ ಬಗ್ಗೆ ಭಾರೀ ಚರ್ಚಿಸುತ್ತಿದ್ದು, ಈ ಕುರಿತು ಪ್ರಧಾನಿ ನರೇಂದ್ರ ಕಳವಳ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ನಗರಪೊಲೀಸರು ಡೀಪ್‌ಫೇಕ್‌ ಸಂಬಂಧಿಸಿದಂತೆ ಸಹಾಯವಾಣಿ ಆರಂಭಿಸಿದ್ದಾರೆ. ‌

Advertisement

ನಟಿಯರಾದ ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್, ಕಾಜೋಲ್ ಸೇರಿ ಅನೇಕ ಕಲಾವಿದರ ಮತ್ತು ಸಾಮಾನ್ಯ ಮಹಿಳೆಯರ ಡೀಪ್‌ಫೇಕ್‌ ವಿಡಿಯೋ ವೈರಲ್ ಆಗುತ್ತಿದ್ದು, ಕಿಡಿಗೇಡಿಗಳ ಕಾಟಕ್ಕೆ ಬೇಸತ್ತ ಸಾರ್ವಜನಿಕರು ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

ಹೀಗಾಗಿ ನಗರ ಪೊಲೀಸರು ಒಂದು ವೇಳೆ ತಮ್ಮ ಡೀಪ್‌ಫೇಕ್‌ ವಿಡಿಯೋ ಕಂಡು ಬಂದರ ಕೂಡಲೇ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಸಹಾಯವಾಣಿ 1930(ರಾಷ್ಟ್ರೀಯ ಸೈಬರ್‌ ಕ್ರೈಂ ರಿಪೋರ್ಟಿಂಗ್‌ ಪೋರ್ಟಲ್‌)ಗೆ ಕರೆ ಮಾಡಿ ದೂರು ನೀಡುವಂತೆ ನಗರ ಪೊಲೀಸರು ಎಕ್ಸ್‌ನಲ್ಲಿ ಕೋರಿದ್ದಾರೆ. ‘ನೀವು ಅಥವಾ ನಿಮಗೆ ತಿಳಿದಿರುವ ಯಾರಾದರೂ ಡೀಪ್‌ ಫೇಕ್‌ಗೆ ಒಳಗಾಗಿದ್ದಲ್ಲಿ 1930 ಗೆ ಕರೆ ಮಾಡಿ ಬೆಂಗಳೂರು ನಗರ ಪೊಲೀಸರನ್ನು ಸಂಪರ್ಕಿಸಿ. ಡಿಜಿಟಲ್ ವಂಚನೆಯಿಂದ ನಿಮ್ಮನ್ನು ರಕ್ಷಿಸಲು ನಾವು ನಿಮ್ಮೊಂದಿಗಿದ್ದೇವೆ’ ಎಂಬ ಅಭಯವನ್ನು ನಗರ ಪೊಲೀಸರು ಜನರಿಗೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next