Advertisement

Udayavani ರೇಷ್ಮೆ ಜತೆ ದೀಪಾವಳಿ; ಸ್ಪರ್ಧೆಗೆ ಫೋಟೋ ಕಳುಹಿಸಲು ನ.6 ಕೊನೆಯ ದಿನ

10:25 AM Nov 02, 2024 | Team Udayavani |

ಮಣಿಪಾಲ: ಉದಯವಾಣಿ ಪತ್ರಿಕೆ ಹಬ್ಬದ ಸಂಭ್ರಮ ಹೆಚ್ಚಿಸಲೆಂದು ಪ್ರತೀ ವರ್ಷದಂತೆ ಈ ವರ್ಷವೂ ಪ್ರತಿಷ್ಠಿತ “ರೇಷ್ಮೆ ಜತೆ ದೀಪಾವಳಿ’ ವಿಶೇಷ ಸ್ಪರ್ಧೆಯನ್ನು ಆಯೋಜಿಸಿದೆ. ಹಬ್ಬದ ಸಡಗರದಲ್ಲಿ ಫೋಟೋ ಕಳುಹಿಸಲು ಸಮಸ್ಯೆಯಾಗದಿರಲಿ ಎಂದು ಫೋಟೋ ಕಳುಹಿಸಲು ಅವಧಿಯನ್ನು ಎರಡು ದಿನ ವಿಸ್ತರಿಸ ಲಾಗಿದೆ. ಹಾಗಾಗಿ ಕೊನೆಯ ದಿನ ನ. 6 ಆಗಿರುತ್ತದೆ.

Advertisement

ರೇಷ್ಮೆ ಸೀರೆ- ಉಡುಪುಗಳನ್ನು ದೀಪಾ ವಳಿ ಸಂದರ್ಭ ತೊಟ್ಟು ಸಂಭ್ರಮಿಸುವು ದಷ್ಟೇ ಅಲ್ಲ; ಅವುಗಳ ಉತ್ತಮ ಫೋಟೋಗಳನ್ನು ಕಳುಹಿಸಿ ಬಹು ಮಾನವನ್ನೂ ಗೆಲ್ಲಲು ಅವಕಾಶವಿದೆ.

ಉದಯವಾಣಿ ಪತ್ರಿಕೆಯು ತನ್ನ ಮಹಿಳಾ ಓದುಗರಿಗೆ ಉಡುಪಿ ಬನ್ನಂಜೆಯ ಜವುಳಿ ಮಳಿಗೆ ಜಯ ಲಕ್ಷ್ಮೀ ಸಿಲ್ಕ್$Õ ಅವರ ಸಹಭಾಗಿತ್ವದಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಿದೆ.

ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತು ಕಾಸರಗೋಡು ಜಿಲ್ಲೆಯ ಹಲವಾರು ಮಂದಿ ಮಹಿಳೆಯರು ಈಗಾಗಲೇ ಫೋಟೋಗಳನ್ನು ಕಳು ಹಿಸಿದ್ದು, ನೀವು ಕಳುಹಿಸಿಲ್ಲವಾದರೆ ಕೂಡಲೇ ಕಳುಹಿಸಿ.

ಉತ್ತಮ ಫೋಟೋಗಳಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಪ್ರೋತ್ಸಾಹಕ ಬಹುಮಾನಗಳನ್ನು ನೀಡಲಾಗುವುದು.
ಪ್ರಥಮ ಬಹುಮಾನ 25 ಸಾವಿರ ರೂ. ಮೌಲ್ಯದ ರೇಷ್ಮೆ ಸೀರೆ, ದ್ವಿತೀಯ ಬಹುಮಾನ 15 ಸಾವಿರ ರೂ. ಮೌಲ್ಯದ ರೇಷ್ಮೆ ಸೀರೆ, ತೃತೀಯ ಬಹುಮಾನ 10 ಸಾವಿರ ರೂ. ಮೌಲ್ಯದ ರೇಷ್ಮೆ ಸೀರೆ ಹಾಗೂ 10 ಮಂದಿಗೆ ಪ್ರೋತ್ಸಾಹಕ ಬಹುಮಾನಗಳಿವೆ.

Advertisement

ತಾಲೂಕುವಾರು ಪ್ರಶಂಸಾಪತ್ರ
ತಾಲೂಕುವಾರು ತಲಾ ಮೂರು ಮೆಚ್ಚುಗೆ ಗಳಿಸಿದ ಚಿತ್ರಗಳನ್ನು ಆಯ್ಕೆ ಮಾಡಿ ವಿಶೇಷ ಸ್ಮರಣಿಕೆ ಮತ್ತು ಪ್ರಮಾಣ ಪತ್ರ ನೀಡಿ ಅಭಿನಂದಿಸಲಾಗುವುದು.

ರೇಷ್ಮೆ ಜತೆಗೆ ದೀಪದ ನಾರಿಯರ ದೀಪಾವಳಿ

ಈ ವರ್ಷದ ಥೀಮ್‌ “ರೇಷ್ಮೆ ಜತೆಗೆ ದೀಪದ ನಾರಿಯರ ದೀಪಾವಳಿ’ ಆಗಿದ್ದು, ಇದನ್ನು ಬಿಂಬಿಸುವಂತೆ ಚಿತ್ರ ತೆಗೆಯಿರಿ. ಕುಟುಂಬ ಸದಸ್ಯೆಯರು, ಗೆಳತಿಯರು ಹೀಗೆ ಗುಂಪಾಗಿ ಎಲ್ಲರೂ ಸಾಂಪ್ರದಾಯಿಕವಾಗಿ ರೇಷ್ಮೆ ಸೀರೆ ಉಟ್ಟು ದೀಪಾವಳಿ ಆಚರಿಸುವ ಫೋಟೋಗಳನ್ನು ಕಳುಹಿಸಿ. ಗುಂಪಿನಲ್ಲಿ ಕನಿಷ್ಠ ಮೂರು ಮಂದಿ ಇರಬೇಕು. ಉತ್ತಮ ರೆಸೊಲ್ಯೂಶನ್‌ ಹೊಂದಿರುವ, ಕಲಾತ್ಮಕವಾಗಿರುವ, ನೈಜತೆಯಿಂದ ಕೂಡಿರುವ ವಿಶಿಷ್ಟ ಪರಿಕಲ್ಪನೆಯ ಫೋಟೋಗಳಿಗೆ ಹೆಚ್ಚಿನ ಪ್ರಾಶಸ್ತ್ಯ . ಹಳೆಯ ಫೋಟೋಗಳನ್ನು ಪರಿಗಣಿಸಲಾಗುವುದಿಲ್ಲ. ಫೋಟೋದ ಮೇಲೆ ಯಾವುದೇ ಹೆಸರು, ಲೋಗೋ, ಸ್ಟುಡಿಯೋ ಹೆಸರು ಇದ್ದರೆ ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.

ಫೋಟೋ ಕಳುಹಿಸುವ ರೀತಿ

ವಾಟ್ಸ್‌ ಆ್ಯಪ್‌ ಸಂಖ್ಯೆ 6364888901ಗೆ ಚಿತ್ರವನ್ನು ಕಳುಹಿಸಿಕೊಡಿ. ಈ ಸಂಖ್ಯೆಯನ್ನು ನಿಮ್ಮ ಮೊಬೈಲ್‌ನಲ್ಲಿ ಉಳಿಸಿಕೊಳ್ಳಿ. ಅನಂತರ ಈ ಸಂಖ್ಯೆಗೆ ನಮಸ್ತೆ ಅಥವಾ ಜಜಿ ಎಂಬ ಸಂದೇಶ ಕಳುಹಿಸಿ. ಬಳಿಕ ಅದರಲ್ಲಿ ಬರುವ ಸಂದೇಶದ ಸೂಚನೆಯಂತೆ ಮುಂದುವರಿಯಿರಿ. ಕೊನೆಯಲ್ಲಿ ಚಿತ್ರ ಕಳುಹಿಸಿರುವುದಕ್ಕೆ ಧನ್ಯವಾದ ಸಂದೇಶ ನಿಮ್ಮನ್ನು ತಲುಪುತ್ತದೆ.
ಇದಲ್ಲದೆ 6362906068 ಸಂಖ್ಯೆಗೆ ಕೂಡ ವಾಟ್ಸ್ಆ್ಯಪ್‌ ಮಾಡ ಬಹುದು, ಫೋಟೋಗಳನ್ನು ಇ-ಮೇಲ್‌ ಮೂಲಕವೂ ಕಳುಹಿಸಬಹುದು. ಇ-ಮೇಲ್‌ ವಿಳಾಸ ri@udayavani.com

Advertisement

Udayavani is now on Telegram. Click here to join our channel and stay updated with the latest news.

Next