ಬೆಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ಕಿರಣ್ ಮುಜಮ್ದಾರ್ ಶಾ ನೇತೃತ್ವದ ಬಿ. ಪ್ಯಾಕ್ ಸಂಸ್ಥೆ ವತಿಯಿಂದ ಕುರುಬರ ಹಳ್ಳಿಯ ಕಿರ್ಲೋಸ್ಕರ್ ಕಾಲೋನಿಯ ಪೌರ ಕಾರ್ಮಿಕರಿಗೆ ಸ್ಥಳೀಯ ಶಾಸಕ ಹಾಗೂ ಅಬಕಾರಿ ಸಚಿವ ಕೆ. ಗೋಪಾಲಯ್ಯ ಸಿಹಿ ಹಂಚಿದರು.
ಬಿ ಪ್ಯಾಕ್ ಸಂಸ್ಥೆಯ ಸ್ಥಳೀಯ ಪ್ರತಿನಿಧಿಗಳಾದ ಅವಿನ್ ಆರಾಧ್ಯರವರ ನೇತೃತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಗೋಪಾಲಯ್ಯ, ದೀಪಾವಳಿ ಹಬ್ಬ ನಾಡಿನ ಜನತೆಗೆ ನವಚೈತನ್ಯ ನೆಮ್ಮದಿ ಹರುಷ ಹಾಗೂ ಬೆಳಕು ನೀಡಲಿ.
ಇದನ್ನೂ ಓದಿ:- ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ : ಸಿಎಂ ಬೊಮ್ಮಾಯಿ
ನಮ್ಮ ನಾಡಿನ ಹೆಮ್ಮೆಯ ಮಹಿಳಾ ಉದ್ಯಮಿಗಳಾದ ಕಿರಣ್ ಮುಜುಮಾªರ್ ಶಾ ರವರು ಎಲ್ಲರಿಗೂ ಅವರ ಬಿ ಪ್ಯಾಕ್ ವತಿಯಿಂದ ಸಿಹಿ ಪೊಟ್ಟಣ ಕಳಿಸಿಕೊಟ್ಟಿದ್ದಾರೆ. ಬಿ ಪ್ಯಾಕ್ ಸಂಸ್ಥೆಯು ಸಾಮಾ ಜಿಕ ಕಳಕಳಿ ಹೊಂದಿರುವ ಇಂಥ ಜನಪರ ಕಾರ್ಯ ಕ್ರಮಗಳನ್ನು ರೂಪಿಸಿ ಮಾದರಿಯಾಗಿದೆ ಎಂದು ಹೇಳಿದರು.
ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಎನ್ ಜಯರಾಂ, ಉತ್ತರ ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷರಾದ ಬಿ.ಎಂ. ಶ್ರೀನಿವಾಸ್, ಮಂಡಲ ಪ್ರಧಾನ ಕಾರ್ಯದರ್ಶಿ ಜಯಸಿಂಹ, ಸಂಸ್ಥೆಯ ಸ್ಥಳೀಯ ಪ್ರತಿನಿಧಿಗಳಾದ ಅವಿನ್ ಆರಾಧ್ಯ, ರಾಘವೇಂದ್ರ ನಾಗರಾಜ್, ನಿಸರ್ಗ ಜಗದೀಶ್, ಬೋರೇಗೌಡ ಇತರರಿದ್ದರು.