Advertisement

500 ಹಣತೆ ಬೆಳಗಿ ಸೌಹಾರ್ದ ದೀಪಾವಳಿ

03:10 AM Nov 13, 2018 | Team Udayavani |

ಮಹಾನಗರ : ತಿರುವೈಲು ದ.ಕ.ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಚಿಣ್ಣರ ಅಂಗಳ ಉದ್ಯಾನವನದಲ್ಲಿ ಸೌಹಾರ್ದ ದೀಪಾವಳಿಯನ್ನು ಆಚರಿಸಲಾಯಿತು. ಸಮಾರಂಭದಲ್ಲಿ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ತಿರುವೈಲು ವಾರ್ಡ್‌ನ ಕಾರ್ಪೊರೇಟರ್‌ ಹೇಮಲತಾ ರಘು ಸಾಲ್ಯಾನ್‌, ಮಕ್ಕಳ ಪೋಷಕ ಹಸನಬ್ಬ ಅಮೃತನಗರ ಮತ್ತು ಹಳೆ ವಿದ್ಯಾರ್ಥಿ ಹಾಗೂ ಉದ್ಯಮಿ ಸ್ಟ್ಯಾನಿ ಕುಟಿನ್ಹೊ ಅವರು ಹಣತೆಯನ್ನು ಬೆಳಗಿಸುವುದರ ಮೂಲಕ ದೀಪಾವಳಿ ಆಚರಣೆಗೆ ಚಾಲನೆ ನೀಡಿದರು. ಭಾಗವಹಿಸಿದ್ದ ಎಲ್ಲರೂ ಸೇರಿ ಒಟ್ಟು ಸುಮಾರು 500 ಹಣತೆಗಳನ್ನು ಬೆಳಗಿಸಿ ಬೆಳಕಿನ ಹಬ್ಬದ ಸಂತೋಷದಲ್ಲಿ ಸಂಭ್ರಮಿಸಿದರು.

Advertisement

ಶಾಲೆಯ ಮುಖ್ಯೋಪಾಧ್ಯಾಯ ಶಂಕರ್‌ ಎ., ಎಸ್‌ಡಿಎಂಸಿ ಅಧ್ಯಕ್ಷ ಜನಾರ್ದನ ಸುವರ್ಣ, ವಿದ್ಯಾಬೋಧಿನಿ ಟ್ರಸ್ಟ್‌ನ ಅಧ್ಯಕ್ಷ ರಘು ಸಾಲ್ಯಾನ್‌, ಪ್ರಧಾನ ಕಾರ್ಯದರ್ಶಿ ರಾಜೀವ ಎಸ್‌. ಕೊಳಕೆಬೈಲು ಮೊದಲಾದವರು ಉಪಸ್ಥಿತರಿದ್ದರು. ಆಕರ್ಷಕ ಸುಡುಮದ್ದು ಪ್ರದರ್ಶನ ನಡೆಯಿತು. ಶಾಲಾ ಮಕ್ಕಳು ಹಾಗೂ ವಿವಿಧ ಧರ್ಮಗಳ ನೂರಾರು ಜನರು ಭಾಗವಹಿಸಿ ಪರಸ್ಪರ ದೀಪಾವಳಿ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

Advertisement

Udayavani is now on Telegram. Click here to join our channel and stay updated with the latest news.

Next