Advertisement
ಬೆಳ್ತಂಗಡಿಪೊಲೀಸರು ಆಳುವ ಪಕ್ಷದ ಗುಲಾಮರಾಗಬಾರದು. ನ್ಯಾಯನಿಷ್ಠರಾಗಿರಬೇಕು ಎಂದು ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ ಹೇಳಿದರು. ಅವರು ಗುರುವಾರ ಇಲ್ಲಿನ ಮೂರು ಮಾರ್ಗ ಬಳಿ ತಾ| ಬಿಜೆಪಿ ವತಿಯಿಂದ ದೀಪಕ್ ರಾವ್ ಹತ್ಯೆ ಖಂಡಿಸಿ ನಡೆದ ಪ್ರತಿಭಟನೆ, ರಸ್ತೆ ತಡೆಯಲ್ಲಿ ಮಾತನಾಡಿದರು.
ಅವಕಾಶ ಕೊಡದ ಸರಕಾರದ ಶವಯಾತ್ರೆ ನಡೆಸಬೇಕು ಎಂದರು. ತಾ| ಬಿಜೆಪಿ ಅಧ್ಯಕ್ಷ ರಂಜನ್ ಜಿ. ಗೌಡ, ಹಿಂದೂಗಳ ಹತ್ಯೆ ನಿರಂತರವಾಗಿ ನಡೆಯುತ್ತಿದೆ. ಇದು ಸರಕಾರದ ಕಾನೂನು ಸುವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ನಿದರ್ಶನ ಎಂದರು. ಜಿಲ್ಲಾ ಬಿಜೆಪಿ ಸಹಪ್ರಭಾರಿ ಪ್ರತಾಪಸಿಂಹ ನಾಯಕ್ ಮಾತ ನಾಡಿ, ಜಾತ್ಯತೀತರು ಎಂದು ಹೇಳಿಕೊಳ್ಳುವವರು ಜಾತಿಗಳನ್ನು ವಿಭಜಿಸಿ ಹಿಂದೂಗಳು ಹಾಗೂ ಅಲ್ಪಸಂಖ್ಯಾಕರ ನಡುವೆ ತಾರತಮ್ಯ ಮಾಡುವುದೇಕೆ. ಹಿಂದೂಗಳ ಹತ್ಯೆಗೆ ಕುಮ್ಮಕ್ಕು ಕೊಡುವುದೇಕೆ. ಇದನ್ನೆಲ್ಲ ಹಿಂದೂ ಸಮಾಜ ನೋಡುತ್ತಾ ಕೂರಬೇಕೆ ಎಂದರು.
Related Articles
Advertisement
ಬಂಟ್ವಾಳಬಿ.ಸಿ. ರೋಡ್ ಬಸ್ ನಿಲ್ದಾಣದಲ್ಲಿ ಬಂಟ್ವಾಳ ಬಿಜೆಪಿ ಆಶ್ರಯದಲ್ಲಿ ಪ್ರತಿಭಟನೆ ನಡೆಯಿತು. ಕುಟುಂಬದ ನಿರ್ವಹಣೆಯನ್ನು ಮಾಡುತ್ತಿದ್ದ ದೀಪಕ್ ಕೊಲೆಯಾದುದರಿಂದ ಆ ಕುಟುಂಬ ನಿರ್ಗತಿಕವಾಗಿದೆ. ಈ ಕೃತ್ಯಕ್ಕೆ ನೇರ ಕಾರಣರಾದ ಪಿಎಫ್‌ಐ ಮತ್ತು ಎಸ್‌ಡಿಪಿಐ ಸಂಘಟನೆಯನ್ನು ಸರಕಾರ ನಿಷೇಧಿಸಬೇಕು ಎಂದು ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ. ದೇವದಾಸ ಶೆಟ್ಟಿ ಆಗ್ರಹಿಸಿದರು. ಜಿ.ಪಂ. ಸದಸ್ಯ ತುಂಗಪ್ಪ ಬಂಗೇರ, ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ಚೆನ್ನಪ್ಪ ಆರ್. ಕೋಟ್ಯಾನ್, ದಿನೇಶ್ ಅಮ್ಟೂರು, ಜಿ. ಆನಂದ, ರಾಮ್‌ದಾಸ ಬಂಟ್ವಾಳ, ಮತ್ತಿತರರಿದ್ದರು. ಪುತ್ತೂರು
ಬಿಜೆಪಿ ವತಿಯಿಂದ ನಗರದ ಬಸ್ ನಿಲ್ದಾಣದ ಸಮೀಪ ಮುಖ್ಯ ರಸ್ತೆಯನ್ನು ಗುರುವಾರ ಬೆಳಗ್ಗೆ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು. ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಎಂ.ಟಿ. ರಸ್ತೆ, ಬಸ್ ನಿಲ್ದಾಣ ಸಂಪರ್ಕ ರಸ್ತೆ ಹಾಗೂ ದರ್ಬೆ, ಬೊಳುವಾರು ರಸ್ತೆಗೆ ಅಡ್ಡಲಾಗಿ ಕುಳಿತು, ಕಾಂಗ್ರೆಸ್ ಸರಕಾ ರದ ವಿರುದ್ಧ ಧಿಕ್ಕಾರ ಕೂಗಿದರು. ಪೊಲೀಸ್ ಇಲಾಖೆಯ ನಿರ್ಲಕ್ಷದ ಕುರಿತು ಆಕ್ರೋಶ ವ್ಯಕ್ತಪಡಿಸಿ, ಮುಖ್ಯ ಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ, ಗೃಹ ಸಚಿವರು ರಾಜೀನಾಮೆ ನೀಡುವಂತೆ ಆಗ್ರಹಿಸಿದರು. ತೆರವಿಗೆ ಯತ್ನ
ಹಠಾತ್ ರಸ್ತೆ ತಡೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ನಗರ ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ಮಹೇಶ್ ಪ್ರಸಾದ್, ರಸ್ತೆಯಿಂದ ಪ್ರತಿಭಟನೆ ತೆರವುಗೊಳಿಸುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಮಂಡಲ ಸಮಿತಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಅವರ ಮನವೊಲಿಸಲು ಯತ್ನಿಸಿದರು. ಇದಕ್ಕೆ ಬಗ್ಗದ ಪ್ರತಿಭಟನಕಾರರು, ನಮಗೆ ನ್ಯಾಯ ಸಿಗಬೇಕು. ಸರಕಾರ ಉತ್ತರ ಕೊಡಬೇಕು. ಅಲ್ಲಿಯ ತನಕ ನಮ್ಮ ಧ್ವನಿಯನ್ನು ಅಡಗಿ ಸಲು ಸಾಧ್ಯವಿಲ್ಲ ಎಂದು ಘೋಷಣೆ ಮುಂದುವರಿಸಿದರು. ಕೆಲ ಕಾಲ ಪೊಲೀಸರು ಮತ್ತು ಪ್ರತಿಭಟನಕಾರರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಸುಳ್ಯ
ರಾಜ್ಯದಲ್ಲಿ ಹಿಂದೂ ವಿರೋಧಿ ಸರಕಾರ ಅಧಿಕಾರದಲ್ಲಿದೆ. ಜಿಲ್ಲಾ ಉಸ್ತುವಾರಿಗಳೂ ನೀಚ ರಾಜಕೀಯ ಮಾಡು ತ್ತಾರೆ ಎಂದು ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಆರೋಪಿಸಿದ್ದಾರೆ. ಹಿಂದೂ ಕಾರ್ಯಕರ್ತ ದೀಪಕ್ ರಾವ್ ಅವರ ಹತೆ ಖಂಡಿಸಿ ಸುಳ್ಯದಲ್ಲಿ ಬಿಜೆಪಿ ಮತ್ತು ಸಂಘ ಪರಿವಾರಗಳ ವತಿಯಿಂದ ಗುರುವಾರ ಏರ್ಪಡಿಸಿದ್ದ ಪ್ರತಿಭಟನ ಸಭೆಯಲ್ಲಿ ಮಾತನಾಡಿದ ಅವರು, ಹಿಂದುಗಳ ವಿರುದ್ಧ ನಡೆಯುವ ಆಕ್ರಮಣಕ್ಕೆ ಪ್ರತಿಭಟನೆ ಸಲ್ಲಿಸಲು ಯಾವುದೇ ಕಾಲಕ್ಕೂ ಸಿದ್ದರಾಗಿರಬೇಕು ಎಂದು ಕರೆ ನೀಡಿದರು.