Advertisement
ಶುಕ್ರವಾರದ ಪಂದ್ಯದಲ್ಲಿ ಚಹರ್ 13ಕ್ಕೆ 4 ವಿಕೆಟ್ ಉಡಾಯಿಸಿ ಪಂಜಾಬ್ ತಂಡವನ್ನು ಅಲ್ಪ ಮೊತ್ತಕ್ಕೆ ಕುಸಿಯುವಂತೆ ಮಾಡಿದ್ದರು. ಇದರಲ್ಲಿ 3 ವಿಕೆಟ್‌ಗಳನ್ನು ಪವರ್ ಪ್ಲೇ ಆವಧಿಯಲ್ಲೇ ಉಡಾಯಿಸಿದ್ದರು. ಅಗರ್ವಾಲ್, ಗೇಲ್ ಮತ್ತು ಪೂರಣ್ ಅವರ ಬಿಗ್ ವಿಕೆಟ್ ಇದರಲ್ಲಿ ಸೇರಿತ್ತು. ಒಂದು ಮೇಡನ್ ಓವರ್ ಸೇರಿದಂತೆ ಒಟ್ಟು 18 ಡಾಟ್ ಬಾಲ್ ಎಸೆದದ್ದು ಚಹರ್ ಸಾಧನೆ.
Related Articles
Advertisement
“ಒಬ್ಬ ಆಟಗಾರನ ವೈಫಲ್ಯವನ್ನು ಟೀಕಿಸುವ ಬದಲು ಆತನನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕು’ ಎಂದೂ ದೀಪಕ್ ಚಹರ್ ಈ ಸಂದರ್ಭದಲ್ಲಿ ವಿನಂತಿಸಿಕೊಂಡರು.
ಕಪ್ತಾನ ಧೋನಿ ಪ್ರಶಂಸೆದೀಪಕ್ ಚಹರ್ ಸಾಧನೆಯನ್ನು ನಾಯಕ ಎಂ.ಎಸ್. ಧೋನಿ ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ. “ಚಹರ್ ಅತ್ಯುತ್ತಮ ಡೆತ್ ಓವರ್ ಬೌಲರ್ ಆಗಿ ರೂಪುಗೊಳ್ಳುತ್ತಿದ್ದಾರೆ. ಆದರೆ ಇಲ್ಲಿ ಅವರಿಗೆ ಪಿಚ್ ಬಹಳ ಸಹಕರಿಸುತ್ತಿದ್ದುದರಿಂದ ಆರಂಭದಲ್ಲೇ ಸತತ 4 ಓವರ್ ನೀಡಲು ನಿರ್ಧರಿಸಲಾಯಿತು. ಚಹರ್ ಇದರ ಭರಪೂರ ಲಾಭವೆತ್ತಿದರು’ ಎಂದರು.