Advertisement

ದೀಪಕ್‌ ಚಹರ್‌ ಟಿ20 ವಿಶ್ವದಾಖಲೆ ವೀರ

08:04 PM Nov 15, 2019 | Lakshmi GovindaRaju |

ಯುವ ಕ್ರಿಕೆಟಿಗ ದೀಪಕ್‌ ಚಹರ್‌ ಬಾಂಗ್ಲಾದೇಶ ವಿರುದ್ಧದ ಟಿ20 ಕ್ರಿಕೆಟ್‌ ಕೂಟದಲ್ಲಿ ಜೀವನಶ್ರೇಷ್ಠ ಬೌಲಿಂಗ್‌ ನಿರ್ವಹಣೆ ನೀಡಿದ್ದರು. ಜತೆಗೆ ಇದು ದೀಪಕ್‌ ಚಹರ್‌ರಿಂದ ದಾಖಲಾದ ವಿಶ್ವ ದಾಖಲೆಯ ಬೌಲಿಂಗ್‌. ನಾಗ್ಪುರದ ವಿದರ್ಭ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 3.2 ಓವರ್‌ ಎಸೆದ ವೇಗಿ ದೀಪಕ್‌ ಚಹರ್‌ 7 ರನ್‌ಗೆ ಪ್ರಮುಖ 6 ವಿಕೆಟ್‌ ಕಬಳಿಸಿದ್ದರು.

Advertisement

ಈ ಮೂಲಕ 2012ರಲ್ಲಿ ಶ್ರೀಲಂಕಾದ ಖ್ಯಾತ ಸ್ಪಿನ್‌ ಬೌಲರ್‌ ಅಜಂತಾ ಮೆಂಡಿಸ್‌ 8ಕ್ಕೆ6 ವಿಕೆಟ್‌ ವಿಶ್ವ ದಾಖಲೆಯನ್ನು ದೀಪಕ್‌ ಮುರಿದರು. ಮಾತ್ರವಲ್ಲ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ಕೂಟದಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಪಡೆದ ಭಾರತದ ಮೊದಲ ಬೌಲರ್‌ ಎನಿಸಿಕೊಂಡರು. ಚಹರ್‌ ಸಾಧನೆ ಅಲ್ಲಿಗೇ ನಿಲ್ಲಲಿಲ್ಲ. ಮಂಗಳವಾರ ನಡೆದ ಸೈಯದ್‌ ಮುಷ್ತಾಕ್‌ ಅಲಿ ಟಿ20 ಕ್ರಿಕೆಟ್‌ ಕೂಟದಲ್ಲೂ ಮುಂದುವರಿಯಿತು.

ದೀಪಕ್‌ ಚಹರ್‌ ಅಲ್ಲೂ ಹ್ಯಾಟ್ರಿಕ್‌ ವಿಕೆಟ್‌ ಪಡೆದರು. ವಿಶೇಷವೆಂದರೆ ಒಟ್ಟಾರೆ 48 ಗಂಟೆಯೊಳಗೆ ಅವರು ದಾಖಲಿಸಿದ ಎರಡನೇ ಹ್ಯಾಟ್ರಿಕ್‌ ಇದಾಗಿತ್ತು. ರಾಜಸ್ಥಾನ ತಂಡವನ್ನು ಪ್ರತಿನಿಧಿಸಿದ್ದ ದೀಪಕ್‌ ಚಹರ್‌ ತನ್ನ ಅಂತಿಮ ಓವರ್‌ನಲ್ಲಿ ಮಾರಕ ದಾಳಿ ನಡೆಸಿ ವಿದರ್ಭ ವಿರುದ್ಧ ಮೆರೆದರು. ಒಟ್ಟಾರೆ 18 ರನ್‌ಗೆ 4 ವಿಕೆಟ್‌ ಉರುಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next