Advertisement
ಎಸ್. ಅಂಗಾರ (ಉಡುಪಿ) ಮತ್ತು ಕೋಟ ಶ್ರೀನಿವಾಸ ಪೂಜಾರಿ (ಉತ್ತರ ಕನ್ನಡ) ಅವರು ತಿಳಿಸಿದ್ದಾರೆ.
Related Articles
Advertisement
ಕುಮ್ಕಿ , ಬಾಣೆ, ಕಾಣೆ: 2 ತಿಂಗಳಲ್ಲಿ ಪರಿಹಾರಉಡುಪಿ, ದ.ಕ., ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕುಮ್ಕಿ, ಬಾಣೆ, ಕಾಣೆ ಭೂಮಿಗಳ ಕುರಿತು ಇದುವರೆಗೆ ಇದ್ದ ಸಮಸ್ಯೆ ಎರಡು ತಿಂಗಳಲ್ಲಿ ಪರಿಹಾರವಾಗಲಿದೆ. ಈ ಭೂಮಿಯನ್ನು ಅನುಭವಿಸುತ್ತಿದ್ದ ಕೃಷಿಕರಿಗೆ ಅದನ್ನು ನೀಡಲಾಗುವುದು. ಆದರೆ ಎಷ್ಟು ಪಟ್ಟಾ ಭೂಮಿ ಹೊಂದಿದ ಕೃಷಿಕರಿಗೆ ಎಷ್ಟು ಕುಮ್ಕಿ, ಬಾಣೆ, ಕಾಣೆ ಭೂಮಿ ಎನ್ನುವುದನ್ನು ಇನ್ನಷ್ಟೇ ನಿರ್ಧರಿಸಬೇಕಾಗಿದೆ. ಇದು ಚರ್ಚೆಯ ಹಂತದಲ್ಲಿದೆ. ಡೀಮ್ಡ್- ಕುಮ್ಕಿ ಸಮಸ್ಯೆ ಬಗೆಹರಿದಾಗ 53-57 ನಮೂನೆ ಅಕ್ರಮ -ಸಕ್ರಮ ಅರ್ಜಿಗಳ ವಿಲೇವಾರಿ ಆಗುತ್ತದೆ. ಅಂಕೋಲದಲ್ಲಿ ವಿಮಾನ ನಿಲ್ದಾಣ
ಅಂಕೋಲದಲ್ಲಿ ವಿಮಾನ ನಿಲ್ದಾಣಕ್ಕೆ ಸದ್ಯವೇ ಶಿಲಾನ್ಯಾಸ ನಡೆಯಲಿದೆ. ಕುಮಟಾದಲ್ಲಿ ವೈದ್ಯಕೀಯ ಕಾಲೇಜು ಆರಂಭಿಸುವ ಪ್ರಸ್ತಾವವಿದೆ. ಈಗಾಗಲೇ ಮುಖ್ಯಮಂತ್ರಿಗಳು ಯಲ್ಲಾಪುರದಲ್ಲಿ ಟ್ರೋಮಾ ಸೆಂಟರ್ ಆರಂಭಿಸುವ ಭರವಸೆ ನೀಡಿದ್ದಾರೆ. “ಅಮೃತಭಾರತಿ-ಕನ್ನಡದಾರತಿ’
ಕಳೆದ ವರ್ಷ ಕರ್ನಾಟಕ ರಾಜ್ಯೋತ್ಸವ ದಂದು “ಮಾತಾಡ್ ಮಾತಾಡ್ ಕನ್ನಡ’ ಅಭಿಯಾನ ನಡೆಸಿದೆವು. ಈ ಬಾರಿ “ಅಮೃತ ಭಾರತಿ – ಕನ್ನಡದಾರತಿ’ ಎಂಬ ಅಭಿಯಾನವನ್ನು ಆಯೋಜಿಸಲಿದ್ದೇವೆ. ಜಿಲ್ಲೆಗೊಂದು ಉತ್ಸವ ವನ್ನು ಆಯೋಜಿಸಿ ಕನ್ನಡ ಸಂಸ್ಕೃತಿಯನ್ನು ನೆನಪಿಸುವ ಅಭಿಯಾನವನ್ನು ನಡೆಸಲಾಗುವುದು. 9/11 ಸಮಸ್ಯೆಗೆ ಪರಿಹಾರ
ಗ್ರಾಮೀಣ ಭಾಗದಲ್ಲಿ 9/11 ನೀಡುವ ಅಧಿಕಾರವನ್ನು ಗ್ರಾ.ಪಂ.ಗೆ ಮತ್ತೆ ನೀಡಲಾಗುವುದು. ಇದರಿಂದ ಜನರ ಸಮಸ್ಯೆ ನಿವಾರಣೆಯಾಗಲಿದೆ. ಯಕ್ಷ ರಂಗಾಯಣದ ಸಭೆ
ಕಾರ್ಕಳದಲ್ಲಿ ಆರಂಭಿಸಲಾಗುವ ಯಕ್ಷ ರಂಗಾಯಣ ಯೋಜನೆಗೆ 2 ಕೋ.ರೂ. ನೀಡಲಾಗಿದೆ. ಇದು ಯಕ್ಷಗಾನ, ನಾಟಕಗಳ ಬಗೆಗೆ ಹೊಸ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಲಿದೆ. ಇದರ ಸ್ವರೂಪ ಹೇಗಿರಬೇಕೆಂಬ ಬಗೆಗೆ ಮೇ 15ರ ಬಳಿಕ ಪ್ರಸಿದ್ಧ ಕಲಾವಿದರನ್ನು ಸೇರಿಸಿ ಸಮಾಲೋಚನ ಸಭೆ ಕರೆಯಲಾಗುವುದು. ಕಡಲ್ಕೊರೆತಕ್ಕೆಡೆಕ್‌ಫೂಟ್ ಪ್ರಯೋಗ ಕಡಲ್ಕೊರೆತವನ್ನು ತಡೆಯಲು “ಡೆಕ್‌ಫೂಟ್’ ಎಂಬ ವಿನೂತನ ಯೋಜನೆಯನ್ನು ಪ್ರಾಯೋಗಿಕವಾಗಿ ಮರವಂತೆಯಲ್ಲಿ ಆರಂಭಿಸಲಾಗುವುದು. ಇದರಲ್ಲಿ ಎರಡು ರೀತಿಯ ನೆಟ್ ಇದ್ದು, ಸಮುದ್ರದಲ್ಲಿ ಅಳವಡಿಸಲಾಗುವುದು. ಸಮುದ್ರದ ಅಲೆಗಳು ಬಂದು ವಾಪಸ್ ಹೋಗುವಾಗ ಮರಳನ್ನು ಕೊಂಡೊಯ್ಯುವುದಿಲ್ಲ. ಈ ಯೋಜನೆಗೆ ಟೆಂಡರ್ ಕರೆದಿದ್ದು, ಮಳೆಗಾಲಕ್ಕೆ ಮುನ್ನ ಪ್ರಾಯೋಗಿಕವಾಗಿ ಆರಂಭಿಸಲಾಗುವುದು. ಎಲೆಕ್ಟ್ರಿಕ್ ವಾಹನ ರೀಚಾರ್ಜಿಂಗ್ ಸೆಂಟರ್ ಅಭಿಯಾನ
ಎಲೆಕ್ಟ್ರಿಕ್ ವಾಹನಗಳಿಗೆ ಪ್ರೋತ್ಸಾಹ ನೀಡಲು ರೀಚಾರ್ಜಿಂಗ್ ಕೇಂದ್ರಗಳ ಅಭಿಯಾನವನ್ನು ಮೇ 7ರಂದು ಆರಂಭಿಸಲಾಗುತ್ತದೆ. ಮೂರು ತಿಂಗಳ ಹಿಂದೆ ಉತ್ಪಾದನ ಸಂಸ್ಥೆಗಳೊಂದಿಗೆ ವಿಚಾರ ಸಂಕಿರಣ ನಡೆಸಿದ್ದೆವು. ಡಿಸೆಂಬರ್ ಅಂತ್ಯದೊಳಗೆ ಒಂದು ಸಾವಿರ ರೀಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸುವ ಗುರಿ ಇದೆ. ಬೆಂಗಳೂರಿನಲ್ಲಿ ಈಗಾಗಲೇ 300 ಕೇಂದ್ರಗಳಿವೆ. ಮೊದಲು ಸರಕಾರಿ ಕಚೇರಿ, ಜಿಲ್ಲಾ ಕೇಂದ್ರಗಳಲ್ಲಿ, ರಾ.ಹೆ., ಪ್ರವಾಸೋದ್ಯಮ ಸ್ಥಳಗಳಲ್ಲಿ 3 ಹಂತಗಳಲ್ಲಿ ಆರಂಭಿಸಲಾಗುವುದು. ಬೆಸ್ತರ ಉಪಜಾತಿ ಗಳಿಗೆ ಎಸ್‌ಟಿ ಸ್ಥಾನ
ಬೆಸ್ತರ 28 ಉಪಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ಬೇಡಿಕೆ ಇದೆ. ಕಲಬುರಗಿಯಲ್ಲಿರುವ ತಳವಾರ- ಪರವಾರ ಈ ಉಪಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸರಕಾರ ಕ್ರಮ ಕೈಗೊಂಡಿದೆ. ಉಳಿದ ಉಪಜಾತಿಗಳ ಬಗೆಗೆ ಪರಿಶೀಲನೆ ಹಂತದಲ್ಲಿದೆ. ಇದಕ್ಕೆ ನಮ್ಮ ಧ್ವನಿ ಇದೆ.