Advertisement

Anubhava Mantapa ಡಿಸೆಂಬರ್‌ಗೆ ಲೋಕಾರ್ಪಣೆ: ಸಚಿವ ಈಶ್ವರ ಖಂಡ್ರೆ

07:55 PM Sep 17, 2024 | Team Udayavani |

ಬೀದರ: ಬಸವಕಲ್ಯಾಣದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಅನುಭವ ಮಂಟಪ ಕಾಮಗಾರಿ ಪ್ರಗತಿಯಲ್ಲಿದ್ದು 2025ರ ಡಿಸೆಂಬರ್‌ಗೆ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನುಭವ ಮಂಟಪಕ್ಕೆ ಈವರೆಗೆ 300 ಕೋಟಿ ರೂ. ಬಿಡುಗಡೆಯಾಗಿದ್ದು, ಅನುದಾನದ ಯಾವುದೇ ಕೊರತೆ ಇಲ್ಲ. ಅನುಷ್ಠಾನದ ಜವಾಬ್ದಾರಿ ಗುತ್ತಿಗೆದಾರರ ಮೇಲಿದೆ. ಶೇ.48ರಷ್ಟು ಕಾಮಗಾರಿ ಮುಗಿದಿದೆ. ಕಾಲಮಿತಿಯಲ್ಲಿ ಇನ್ನುಳಿದ ಕೆಲಸ ಮುಗಿಸಲು ನಿರ್ದೇಶನ ನೀಡಿದ್ದೇನೆ. ಮಂಟಪಕ್ಕೆ ಗುಣಮಟ್ಟದ ಕಲ್ಲುಗಳು ಸಿಗುತ್ತಿಲ್ಲ ಎನ್ನುತ್ತಿದ್ದಾರೆ. ಈ ಬಗ್ಗೆ ಹುಡುಕಾಟ ನಡೆದಿದೆ.

ಜಿಲ್ಲಾ ನ್ಯಾಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಪ್ರಯುಕ್ತ ಧ್ವಜಾರೋಹಣ ಮಾಡದಿರುವ ಬಗ್ಗೆ ಗಮನಕ್ಕೆ ಬಂದಿದೆ. ಈ ವಿಷಯದಲ್ಲಿ ಹೈಕೋರ್ಟ್‌ನಿಂದ ಆದೇಶ ಬರಬೇಕಾಗುತ್ತದೆ. ಸಿಎಂ ಮತ್ತು ಕಾನೂನು ಸಚಿವರ ಗಮನಕ್ಕೆ ತರುತ್ತೇನೆ, ಸರ್ಕಾರ ಪೂರಕ ಕೆಲಸ ಮಾಡಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next