Advertisement

ಹಣವಿರುವ ದೇಗುಲದಲ್ಲಿ ನಿತ್ಯ ದಾಸೋಹಕ್ಕೆ ಸೂಚನೆ

07:00 AM Sep 15, 2017 | Team Udayavani |

ಹಾವೇರಿ: ಯಾವ ದೇವಸ್ಥಾನಗಳಲ್ಲಿ ಹಣ ಇದೆಯೋ ಆ ದೇವಸ್ಥಾನಗಳಲ್ಲೆಲ್ಲ ನಿತ್ಯ ದಾಸೋಹ ಮಾಡಲು ವ್ಯವಸ್ಥೆ ಮಾಡಿಕೊಳ್ಳುವಂತೆ ಆದೇಶಿಸಲಾಗಿದೆ ಎಂದು ಮುಜರಾಯಿ ಹಾಗೂ ಜವಳಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.

Advertisement

ತಾಲೂಕಿನ ಗಣಜೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಧರ್ಮಸ್ಥಳವನ್ನೇ ಮಾದರಿಯಾಗಿಟ್ಟುಕೊಂಡು ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ದಾಸೋಹ, ಸ್ವತ್ಛತೆ ಸೇರಿ ಇನ್ನಿತರ ಅಭಿವೃದ್ಧಿಗೆ ಯೋಜನೆ ಹಾಕಿಕೊಳ್ಳಲಾಗುತ್ತಿದೆ. ಹೀಗಾಗಿ ಹಣವಿರುವ ದೇಗುಲಗಳಲ್ಲಿ ದಾಸೋಹ ಭವನ ನಿರ್ಮಿಸಿ ನಿತ್ಯ ದಾಸೋಹ ಆರಂಭಿಸಲು ಸೂಚಿಸಲಾಗಿದೆ ಎಂದರು.

ಓಡುವ ಸ್ಥಿತಿ: ಮುಜರಾಯಿ ಖಾತೆ ಕಂಡರೆ ಎಲ್ಲರೂ ಓಡಿ ಹೋಗುತ್ತಾರೆ. ಮೊದ ಮೊದಲು ನನಗೆ ತಿಳಿದಿರಲಿಲ್ಲ. ಈಗ ನನಗೂ ಓಡಿ ಹೋಗುವ ಸ್ಥಿತಿ ಬಂದಿದೆ. ಏಕೆಂದರೆ ಇಲ್ಲಿ ದೇಗುಲ ಅಭಿವೃದ್ಧಿಗೆ ಒತ್ತಡ ಹೆಚ್ಚಿದ್ದು, ಅನುದಾನ ಕಡಿಮೆಯಿದೆ. ಮುಖ್ಯಮಂತ್ರಿಗಳು ಸಂಪುಟದರ್ಜೆಯ ಬಡ್ತಿ ನೀಡಿದ್ದಾರೆ. ಅನುದಾನದ ಬಡ್ತಿಯೂ ನೀಡುವಂತೆ ಕೇಳಿಕೊಂಡಿದ್ದೇನೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next