Advertisement

ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ವಯೋಮಿತಿ ಇಳಿಕೆ?

06:20 AM Dec 21, 2018 | |

ಹೊಸದಿಲ್ಲಿ: ಐಎಎಸ್‌, ಐಪಿಎಸ್‌ ಸೇರಿದಂತೆ ಅನೇಕ ಮಹತ್ವದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಸಾಮಾನ್ಯ ವರ್ಗದ ಅಭ್ಯರ್ಥಿಗಳ ಗರಿಷ್ಠ ವಯೋ ಮಿತಿಯನ್ನು ಸದ್ಯಕ್ಕಿರುವ 30 ವರ್ಷದಿಂದ 27 ವರ್ಷಕ್ಕೆ ಇಳಿಸುವಂತೆ ಕೇಂದ್ರ ಸರಕಾರಕ್ಕೆ ನೀತಿ ಆಯೋಗ ಸಲಹೆ ನೀಡಿದೆ. 

Advertisement

ಅಲ್ಲದೆ ಇದನ್ನು 2022-23ರೊಳಗೆ ಹಂತಹಂತ ವಾಗಿ ಜಾರಿಗೊಳಿಸುವಂತೆ ತನ್ನ “ಸ್ಟ್ರಾಟೆಜಿ ಫಾರ್‌ ನ್ಯೂ ಇಂಡಿಯಾ 75′ ಎಂಬ ವರದಿಯಲ್ಲಿ ಸೂಚಿಸಿದೆ. 

ಅಲ್ಲದೆ, ರಾಷ್ಟ್ರ ಹಾಗೂ ರಾಜ್ಯಗಳ ಮಟ್ಟದಲ್ಲಿ 60ಕ್ಕೂ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು ಅವುಗಳ ಬದಲಿಗೆ ರಾಷ್ಟ್ರಮಟ್ಟದಲ್ಲಿ ಕೇವಲ ಒಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಅದರಲ್ಲಿ ಅಭ್ಯರ್ಥಿಯು ತೋರುವ ಸಾಧನೆ ಹಾಗೂ ಆತನ ಆಸಕ್ತಿಗಳ ಆಧಾರದ ಮೇಲೆ ನೇಮಕಾತಿಯಾಗಬೇಕು ಎಂದೂ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಜತೆಗೆ, ಕೆಳ ಹಂತದ ನ್ಯಾಯಾಲಯಗಳಲ್ಲಿನ ನ್ಯಾಯಾಧೀಶರು ಹಾಗೂ ನ್ಯಾಯಾಂಗ ಅಧಿ ಕಾರಿಗಳನ್ನು ನೇಮಿಸಲು ರಾಷ್ಟ್ರಮಟ್ಟದಲ್ಲಿ ಪ್ರವೇಶ ಪರೀಕ್ಷೆ ನಡೆಸಬೇಕೆಂದೂ ಆಯೋಗ ಸಲಹೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next