Advertisement

ಕುಗ್ಗಿದ ಏರೋ ಇಂಡಿಯಾ ಉತ್ಸಾಹ

06:28 AM Feb 20, 2019 | Team Udayavani |

ಬೆಂಗಳೂರು: ಬೆಂಗಳೂರಿನ ಏರೋ ಇಂಡಿಯಾ ಶೋ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಡೆದ ವಿಮಾನ ದುರಂತವು ವೈಮಾನಿಕ ಪ್ರದರ್ಶನ ತಂಡಗಳ ಉತ್ಸಾಹವನ್ನೇ ಉಡುಗಿಸಿದೆ. ವೈಮಾನಿಕ ಪ್ರದರ್ಶನಕ್ಕಾಗಿ ದೇಶ-ವಿದೇಶಗಳಿಂದ ವಿಮಾನಗಳು ಈಗಾಗಲೇ ಯಲಹಂಕ ವಾಯುನೆಲೆಯಲ್ಲಿ ಬಂದಿಳಿದಿವೆ.

Advertisement

ಆಯಾ ವಿಮಾನಗಳ ಪೈಲಟ್‌ಗಳೂ ಸಜ್ಜಾಗಿದ್ದಾರೆ. ಕಳೆದ ಕೆಲ ದಿನಗಳಿಂದ ನಡೆಸಿದ ಯಶಸ್ವಿ ತಾಲೀಮುಗಳ ಮೂಲಕ ಪ್ರದರ್ಶನಕ್ಕೆ ಸಿದ್ಧ ಎಂಬುದನ್ನೂ ತೋರಿಸಿದ್ದಾರೆ. ಇನ್ನೇನು ಅಧಿಕೃತ ಪ್ರದರ್ಶನ ನಡೆಯಬೇಕು ಎನ್ನುವಷ್ಟರಲ್ಲಿ ಈ ಘಟನೆ ಸಂಭವಿಸಿದೆ.

ಇದರಿಂದ ಸೂರ್ಯಕಿರಣ ಹೊರಗುಳಿಯುವುದು ಮಾತ್ರವಲ್ಲ; ಉಳಿದ ತಂಡಗಳ ಮಾನಸಿಕ ಸ್ಥೈರ್ಯವನ್ನೂ ಕುಗ್ಗಿಸುವಂತೆ ಮಾಡಿದೆ. ಈ ಬಾರಿ ಸುಮಾರು 30 ವೈಮಾನಿಕ ಪ್ರದರ್ಶನಗಳು ನಡೆಯಲಿವೆ. ಅದರಲ್ಲಿ ಸೂರ್ಯಕಿರಣ ಕೂಡ ಒಂದಾಗಿತ್ತು. ಈಗ ಅದರಲ್ಲಿ ಎರಡು ವಿಮಾನಗಳು ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಒಬ್ಬ ಪೈಲಟ್‌ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಇಂತಹ ಸಾಹಸ ಪ್ರದರ್ಶನಗಳಲ್ಲಿ ಪ್ರಾಣ ಪಣಕ್ಕಿಟ್ಟು ಅಖಾಡಕ್ಕಿಳಿಯುವುದರಿಂದ ಇದು ಸಾಮಾನ್ಯ ಎಂಬಂತೆ ಕಂಡರೂ, ಆ ತಂಡದ ಸಹೋದ್ಯೋಗಿಗಳಲ್ಲಿ ಸಹಜವಾಗಿ ಶೋಕ ಮಡುಗಟ್ಟುವಂತೆ ಮಾಡಿದೆ. ಅದೇ ರೀತಿ, ಉಳಿದ ಪೈಲಟ್‌ಗಳನ್ನು ಮಾನಸಿಕವಾಗಿ ಕುಗ್ಗಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next