ನವದೆಹಲಿ: ದೇಶದಲ್ಲಿ 2018ರಿಂದ 2020ರ ಅವಧಿಯಲ್ಲಿ ರಸ್ತೆ ಅಪಘಾತಗಳು ಮತ್ತು ಅದರಿಂದಾಗುವ ಸಾವಿನ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡುಬಂದಿದೆ.
2018ರಲ್ಲಿ 4.67 ಲಕ್ಷ ಅಪಘಾತವಾಗಿ, 1.51 ಲಕ್ಷ ಜನರು ಸಾವನ್ನಪ್ಪಿದ್ದರೆ, 2020ರಲ್ಲಿ 3.66 ಲಕ್ಷ ಅಪಘಾತಗಳು ಸಂಭವಿಸಿದ್ದು, 1.31 ಲಕ್ಷ ಜನರು ಸಾವನ್ನಪ್ಪಿದ್ದಾರೆ.
ಈ ಅಂಶಗಳನ್ನೊಳಗೊಂಡ ವರದಿಯನ್ನು ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವಾಲಯವು ಲೋಕಸಭೆಗೆ ಕೊಟ್ಟಿದೆ.
2020ರಲ್ಲಿ ಅತಿ ಹೆಚ್ಚು ಅಪಘಾತಗಳಾದ ರಾಜ್ಯಗಳ ಪಟ್ಟಿಯಲ್ಲಿ 45,484 ಅಪಘಾತಗಳೊಂದಿಗೆ ತಮಿಳುನಾಡು ಮೊದಲನೇ ಸ್ಥಾನದಲ್ಲಿದೆ. 34,178 ಅಪಘಾತ ಕಂಡಿರುವ ಕರ್ನಾಟಕ ಈ ಪಟ್ಟಿಯ 4ನೇ ಸ್ಥಾನದಲ್ಲಿದೆ.
ಹಾಗೆಯೇ 2020ರಲ್ಲಿ ಅಪಘಾತದಿಂದಾಗಿ ಅತಿ ಹೆಚ್ಚು ಜನರು ಸಾವನ್ನಪ್ಪಿದ ಪಟ್ಟಿಯಲ್ಲಿ 19,149 ಸಾವಿನೊಂದಿಗೆ ಉತ್ತರ ಪ್ರದೇಶ ಮೊದಲನೇ ಸ್ಥಾನದಲ್ಲಿದ್ದರೆ, 9,760 ಸಾವಿನೊಂದಿಗೆ ಕರ್ನಾಟಕ ನಾಲ್ಕನೇ ಸ್ಥಾನ ಪಡೆದಿದೆ.
ರಸ್ತೆ ಅಪಘಾತ ನಿಯಂತ್ರಣಕ್ಕೆ ಸರ್ಕಾರ ತೆಗೆದುಕೊಂಡಿರುವ ವಿವಿಧ ಕಾಮಗಾರಿಗಳನ್ನೂ ಇಲಾಖೆಯು ಲೋಕಸಭೆಗೆ ತಿಳಿಸಿದೆ.