Advertisement

ವಿಐಎಸ್‌ಎಲ್‌ ವಸತಿಗೃಹಗಳ ಬಾಡಿಗೆ ದರ ಇಳಿಕೆ

01:36 PM Aug 11, 2020 | Suhan S |

ಭದ್ರಾವತಿ: ವಿಐಎಸ್‌ಎಲ್‌ ಆಡಳಿತ ಮಂಡಳಿ ನಿವೃತ್ತ ಕಾರ್ಮಿಕರ ವಾಸಕ್ಕೆ ನೀಡಿರುವ ವಾಸದ ಮನೆಗಳ ಬಾಡಿಗೆಯನ್ನು ಪ್ರತಿಶತ ನೂರರಷ್ಟು ಏರಿಸಿರುವುದನ್ನುಕೈಬಿಟ್ಟು ಅದನ್ನು ಶೇ. 50ರಷ್ಟು ಇಳಿಸಬೇಕೆಂದು ಸಂಸದ ಬಿ.ವೈ. ರಾಘವೇಂದ್ರ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಕೆ.ಎಲ್‌. ರಾವ್‌ ಅವರೊಂದಿಗೆ ಮಾತನಾಡಿದರು.

Advertisement

ಸೋಮವಾರ ಇಲ್ಲಿಗೆ ಆಗಮಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾತನಾಡಿದ ಅವರು, ಕೋವಿಡ್ ಸಂಕಷ್ಟದ ಈ ಸ್ಥಿತಿಯಲ್ಲಿ ಬಾಡಿಗೆ ಹೆಚ್ಚಿಸಿರುವ ಕ್ರಮ ಸರಿಯಲ್ಲ. ಕೂಡಲೇ ಹೆಚ್ಚಿಸಿರುವ ಬಾಡಿಗೆ ಆದೇಶವನ್ನು ಹಿಂದೆ ಪಡೆಯುವಂತೆ ಅವರು ಅಧಿಕಾರಿಗಳಿಗೆ ಹೇಳಿದರು. ಸಂಸದರ ಮಾತಿಗೆ ಒಪ್ಪಿದ ಆಡಳಿತ ಮಂಡಳಿ ಹೆಚ್ಚಿಸಿರುವ ಬಾಡಿಗೆಯ ಆದೇಶವನ್ನು ಹಿಂದೆ ಪಡೆಯುವ ಕುರಿತು ಪರಿಶೀಲಿಸುವ ಭರವಸೆ ನೀಡಿದೆ. ಈ ಸಂದರ್ಭದಲ್ಲಿ ಹಾಜರಿದ್ದ ಕಾರ್ಮಿಕರೊಂದಿಗೆ ಸಂಸದರು ಅನೌಪಚಾರಿಕವಾಗಿ ಮಾತನಾಡಿ, ವಿಐಎಸ್‌ ಎಲ್‌ ಕಾರ್ಖಾನೆಗೆ ತಕ್ಷಣಕ್ಕೆ ಅಗತ್ಯವಾದ ಸುಮಾರು 20 ಕೋಟಿ ಬಂಡವಾಳ ಹೂಡುವ ಬಗ್ಗೆ ಸೈಲ್‌ ಚೇರ್ಮನ್‌ ಅವರ ಬಳಿ ಮಾತನಾಡಲಾಗಿದೆ. ಎಂಪಿಎಂ ಕಾರ್ಖಾನೆ ಪುನಶ್ಚೇತನ ಕುರಿತಂತೆ ಖಾಸಗಿಯವರ ಸಹಬಾಗಿತ್ವದಲ್ಲಿ ಪುನರಾರಂಭ ಮಾಡುವ ಚರ್ಚೆ ಪ್ರಗತಿಯಲ್ಲಿದೆ ಎಂದರು.

ವಿಐಎಸ್‌ ಎಲ್‌ ಕಾರ್ಖಾನೆಯ ಮುಖ್ಯ ವ್ಯವಸ್ಥಾಪಕ ವಿಶ್ವನಾಥ್‌, ನಿವೃತ್ತ ಕಾರ್ಮಿಕ ಮುಖಂಡರಾದ ಹನುಮಂತರಾವ್‌, ರಾಮಲಿಂಗಯ್ಯ, ನರಸಿಂಹಮೂರ್ತಿ, ಎಸ್‌.ಎನ್. ಬಾಲಕೃಷ್ಣ, ಚಂದ್ರಹಾಸ, ಕಾರ್ಮಿಕ ಮುಖಂಡರಾದ ಜಗದೀಶ್‌, ಅಮೃತ್‌, ಬಿಜೆಪಿ ಮುಖಂಡರಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧರ್ಮಪ್ರಸಾದ್‌, ಮಂಡಲ ಅಧಕ್ಷ ಪ್ರಭಾಕರ್‌, ಕದಿರೇಶ್‌, ಮಂಗೋಟೆ ರುದ್ರೇಶ್‌, ಮಂಜುನಾಥ್‌ ಕದಿರೇಶ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next