Advertisement

Kundapura ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ

12:54 AM May 18, 2024 | Team Udayavani |

ಕುಂದಾಪುರ: ಮಹಿಳೆ ಯೊಬ್ಬರ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಮನೆಯ ಒಳಗಿನ ಶೌಚಾಲಯದ ಬಳಿ ಪತ್ತೆಯಾದ ಘಟನೆ ಗೋಪಾಡಿ ಗ್ರಾಮದ ಮೂಡು ಗೋಪಾಡಿಯಲ್ಲಿ ನಡೆದಿದೆ.

Advertisement

ಮೂಡು ಗೋಪಾಡಿಯ ಅರಸರ ಬೆಟ್ಟುವಿನ ನಿವಾಸಿ ಜಯಂತಿ ಶೆಟ್ಟಿ (61) ಅವರ ಮೃತದೇಹ ಮನೆಯೊಳಗೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರು ಅಸ್ವಸ್ಥತೆಯಿಂದ ಬಳಲುತ್ತಿರುವ ಪುತ್ರಿ ಪ್ರಗತಿ ಅವರೊಂದಿಗೆ ವಾಸಿಸುತ್ತಿದ್ದರು.

3-4 ದಿನಗಳಿಂದ ಜಯಂತಿ ಅವರ ಮನೆಯಿಂದ ವಿಪರೀತ ವಾಸನೆ ಬರುತ್ತಿರುವುದಾಗಿ ಸಹೋದರ ಜಯ ಕುಮಾರ್‌ ಅವರಿಗೆ ಸ್ಥಳೀಯರು ತಿಳಿಸಿದ್ದರು. ಅದರಂತೆ ಅವರು ಮನೆಗೆ ಭೇಟಿ ನೀಡಿದಾಗ ಜಯಂತಿ ಅವರ ಮೃತದೇಹವು ಮನೆಯ ಒಳಗಿನ ಶೌಚಾಲಯದ ಬಳಿ ಬಿದ್ದಿದ್ದು, ಕೊಳೆತ ಸ್ಥಿತಿಯಲ್ಲಿತ್ತು. ಇನ್ನು ಪ್ರಗತಿ ಅವರು ಮನೆಯ ಅಡುಗೆ ಕೋಣೆಯಲ್ಲಿ ಅಸ್ವಸ್ಥತೆಯಿಂದ ಮಲಗಿದ್ದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.

ಜಯಂತಿ ಅವರಿಗಿದ್ದ ಅನಾರೋಗ್ಯ ದಿಂದ 3-4 ದಿನಗಳ ಹಿಂದೆ ಮೃತಪಟ್ಟಿರಬಹುದಾಗಿದೆ. ಘಟನ ಸ್ಥಳಕ್ಕೆ ಕುಂದಾಪುರ ಎಸ್‌ಐ ವಿನಯ್‌ ಎಸ್‌. ಕೊರ್ಲಹಳ್ಳಿ ಹಾಗೂ ಪೊಲೀಸ್‌ ಸಿಬಂದಿ ಭೇಟಿ ನೀಡಿದ್ದಾರೆ. ಮನೆಯ ಎರಡೂ ಕಡೆಯ ಬಾಗಿಲನ್ನು ಒಳಗಿನಿಂದ ಹಾಕಿದ್ದು, ಅದನ್ನು ಒಡೆದು ಆಹಾರವಿಲ್ಲದೆ ಅಸ್ವಸ್ಥತೆ ಯಿಂದ ಮಲಗಿದ್ದ ಪ್ರಗತಿ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸುವಲ್ಲಿ ಪೊಲೀಸರು ಸಹಕರಿಸಿ ದರು. ಸಹೋದರ ಜಯಕುಮಾರ್‌ ಅವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next