Advertisement

Kundapura ಬೀಜಾಡಿ: ಪತ್ತೆಯಾಗದ ಸಮುದ್ರಪಾಲಾದ ಯುವಕ

12:08 AM Jun 22, 2024 | Team Udayavani |

ಕುಂದಾಪುರ: ಬೀಜಾಡಿ ಬೀಚ್‌ನಲ್ಲಿ ಅಲೆಯಬ್ಬರಕ್ಕೆ ಸಿಲುಕಿ ಬುಧವಾರ ಸಂಜೆ ಸಮುದ್ರಪಾಲಾಗಿದ್ದ ತುಮಕೂರು ಜಿಲ್ಲೆಯ ತಿಪಟೂರಿನ ಟಿ.ಆರ್‌. ಯೋಗೀಶ್‌ (23) ಅವರ ಬಗ್ಗೆ ಶುಕ್ರವಾರವೂ ಸುಳಿವು ಲಭ್ಯವಾಗಿಲ್ಲ.

Advertisement

ಬೆಳಗ್ಗೆ ತ್ರಾಸಿ ಸಮೀಪ ಕಡಲ ಕಿನಾರೆಯಿಂದ 7-8 ನಾಟಿಕಲ್‌ ಮೈಲು ದೂರದಲ್ಲಿ ಮೃತದೇಹವೊಂದು ತೇಲುತ್ತಿದ್ದುದನ್ನು ಮೀನುಗಾರರು ಕಂಡಿದ್ದರು. ಅವರು ತೀರಕ್ಕೆ ಬಂದು ಪೊಲೀಸರಿಗೆ ವಿಷಯ ತಿಳಿಸಿದ್ದು, ಬಳಿಕ ಪೊಲೀಸರು ಮತ್ತು ಕರಾವಳಿ ಕಾವಲು ಪಡೆ ತಂಡ ಹಾಗೂ ಸ್ಥಳೀಯ ಮೀನುಗಾರರು ಬೋಟಿನ ಮೂಲಕ ಹುಡುಕಾಟ ನಡೆಸಿದರೂ ಆ ಮೃತದೇಹ ಮತ್ತೆ ಕಾಣಸಿಕ್ಕಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next