Advertisement

ಖ್ಯಾತ ನಟ ನಾಗಾರ್ಜುನ್ ಫಾರಂ ಹೌಸ್ ನಲ್ಲಿ ಶವ ಪತ್ತೆ, ಪೊಲೀಸ್ ತನಿಖೆ ಆರಂಭ

10:05 AM Sep 21, 2019 | Nagendra Trasi |

ಹೈದರಾಬಾದ್: ಟಾಲಿವುಡ್ ನ ಜನಪ್ರಿಯ ನಟ ನಾಗಾರ್ಜುನ್ ಗೆ ಸೇರಿದ್ದ ಹೈದರಾಬಾದ್ ನ ಹೊರವಲಯದಲ್ಲಿರುವ ಫಾರಂ ಹೌಸ್ ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಕೊಳೆತ ಶವ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಪೊಲೀಸರ ಮಾಹಿತಿ ಪ್ರಕಾರ, ಫಾರಂ ಹೌಸ್ ನಲ್ಲಿನ ಜಮೀನಿನಲ್ಲಿನ ಬೆಳೆಯನ್ನು ನೋಡಿಕೊಂಡು ಬರಲು ನಟ ನಾಗಾರ್ಜುನ್ ಕೆಲಸದಾಳುಗಳನ್ನು ಕಳುಹಿಸಿದ್ದ ಸಂದರ್ಭದಲ್ಲಿ ಅಪರಿಚಿತ ಶವ ಪತ್ತೆಯಾಗಿದೆ ಎಂದು ವಿವರಿಸಿದ್ದಾರೆ.

ಪಾಪಿರೆಡ್ಡಿಗುಡಾ ಗ್ರಾಮದಲ್ಲಿರುವ ಫಾರಂ ಹೌಸ್ ನ ಕೋಣೆಯಲ್ಲಿ ಈ ಶವ ಪತ್ತೆಯಾಗಿದೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಕೇಶಂಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಇತ್ತೀಚೆಗೆ ಫಾರಂ ಹೌಸ್ ಗೆ ಭೇಟಿ ಕೊಟ್ಟಿದ್ದೇವೆ. ಕಳೆದ ವರ್ಷ 40 ಎಕರೆ ಕೃಷಿ ಭೂಮಿಯನ್ನು ಖರೀದಿಸಿದ್ದೇವು. ಅದರಲ್ಲಿ ವಿವಿಧ ಬೆಳೆಗಳನ್ನು ಬೆಳೆದಿದ್ದೇವೆ. ಜಮೀನು ಹಾಗೂ ಬೆಳೆ ನಿರ್ವಹಣೆಗೆ ಹಲವು ಅನುಭವಿ ಕೆಲಸಗಾರರನ್ನು ನೇಮಕ ಮಾಡಲಾಗಿತ್ತು ಎಂದು ನಾಗಾರ್ಜುನ ಹಾಗೂ ಕುಟುಂಬದವರು ತಿಳಿಸಿರುವುದಾಗಿ ಪೊಲೀಸರು ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next