ನವದೆಹಲಿ: ಬಜೆಟ್ ಬಳಿಕ ವಿಮೆಯ ಕಂತುಗಳು ಅಗ್ಗವಾಗಲಿದೆಯೇ? ಮಧ್ಯಮ ವರ್ಗದ ಜನರು ಹೀಗೊಂದು ಲೆಕ್ಕಾಚಾರ ಶುರು ಮಾಡಿದ್ದಾರೆ.
ವಿಮೆ ಕಂತುಗಳು ಅಗ್ಗವಾಗುವ ನಿಟ್ಟಿನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕ್ರಮಗಳನ್ನು ಪ್ರಕಟಿಸುವರೇ ಎಂದು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.
ಕೊರೊನಾ ಸೋಂಕು ದೇಶದಲ್ಲಿ ವ್ಯಾಪಿಸಿದ ಬಳಿಕ ಜನರ ಜೀವನಕ್ಕೆ ಒಂದಲ್ಲ ಒಂದು ರೀತಿಯಲ್ಲಿ ತೊಂದರೆ ಉಂಟಾಗಿದೆ. ಅದನ್ನು ನಿವಾರಿಸುವ ನಿಟ್ಟಿನಲ್ಲಿ ಆದಾಯ ತೆರಿಗೆ ಕಾಯ್ದೆಯ 80ಸಿ ನಿಯಮದ ವ್ಯಾಪ್ತಿಯಲ್ಲಿ ಪ್ರತ್ಯೇಕವಾಗಿ ವಿಮೆಯ ಕಂತುಗಳ ಪಾವತಿಯನ್ನು ಉಲ್ಲೇಖಿಸಿ ತೆರಿಗೆ ವಿನಾಯಿತಿ ಪಡೆಯುವ ಕ್ರಮಗಳನ್ನು ಪ್ರಕಟಿಸಬೇಕು ಎಂಬ ಬೇಡಿಕೆ ವ್ಯಕ್ತವಾಗಿದೆ. ಇದರ ಜತೆಗೆ ವಿಮೆ ಕಂತಿನ ಜತೆಗೆ ಜಿಎಸ್‌ಟಿಯೂ ಸೇರ್ಪಡೆಯಾಗುವುದರಿಂದ ವಿಮೆಯ ಮೊತ್ತ ಹೆಚ್ಚಾಗುತ್ತದೆ.
ಇದನ್ನೂ ಓದಿ:ಉಡುಪಿ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ಪ್ರಕರಣ: ನಗರಸಭೆಯಿಂದ ಯಾತ್ರಿ ನಿವಾಸಕ್ಕೆ ನೋಟಿಸ್
ಶೇ.18 ಜಿಎಸ್‌ಟಿಯನ್ನು ವಿಮೆ ಕಂತಿನ ಮೊತ್ತದ ಜತೆಗೆ ಸೇರುವುದರಿಂದ ಪಾವತಿ ಮಾಡಬೇಕಾಗಿರುವ ಒಟ್ಟು ಮೊತ್ತ ಏರಿಕೆಯಾಗುತ್ತದೆ. ತೆರಿಗೆ ಪ್ರಮಾಣ ಇಳಿಕೆ ಮಾಡುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜೀವ ವಿಮೆ ಹೂಡಿಕೆ ಪ್ರಮಾಣ ಹೆಚ್ಚಾಗಲಿದೆ ಎನ್ನುತ್ತಾರೆ ವಿಶ್ಲೇಷಕರು.