Advertisement
ಕಲಬುರಗಿಯ ತೊಗರಿ ಬೇಳೆ ಇಡೀ ದೇಶದಲ್ಲಿಯೇ ಅತ್ಯುತ್ತಮ ಎಂಬುದಾಗಿ ಹೆಸರು ಪಡೆದಿದೆ. ಇಲ್ಲಿಯ ತೊಗರಿ ಬೇಳೆ ತಮಿಳುನಾಡು, ಪುದುಚೇರಿಯಲ್ಲದೆ ರಾಜ್ಯದ ದಕ್ಷಿಣ ಕರ್ನಾಟಕ ಭಾಗಕ್ಕೂ ಸರಬರಾಜಾಗುತ್ತದೆ. ಆದರೆ ಈ ಸಾಗಾಣಿಕೆ ಮೇಲೆ ಶೇ.5ರಷ್ಟು ಜಿಎಸ್‌ಟಿ ವಿಧಿಸಿರುವುದು ಸಾಗಾಣಿಕೆ ಇಳಿಮುಖವಾಗಲು ಕಾರಣವಾಗಿದೆ. ಕಳೆದ ವರ್ಷ 2016ರ ಏಪ್ರಿಲ್‌ದಿಂದ ಆಗಸ್ಟ್ ವರೆಗೆ ಕಲಬುರಗಿಯಿಂದಲೇ 4.73 ಲಕ್ಷ ಕ್ವಿಂಟಲ್ ತೊಗರಿ ಬೇಳೆ ಸರಬರಾಜು ಆಗಿತ್ತು. ಪ್ರಸಕ್ತ 3.64 ಕ್ವಿಂಟಲ್ ಮಾತ್ರ ಸರಬರಾಜು ಆಗಿದೆ.
Related Articles
Advertisement
ಬ್ರಾÂಂಡೆಡ್ ತೊಗರಿ ಬೇಳೆ ಹಿಂತೆಗೆತ:ಪ್ಯಾಕ್ಡ್ ಹಾಗೂ ನೋಂದಾಯಿತ ತೊಗರಿ ಬೇಳೆ ಮೇಲೆ ಶೇ.5ರಷ್ಟು ಜಿಎಸ್‌ಟಿ ವಿಧಿಸಿದ್ದರಿಂದ ತೆರಿಗೆಯಿಂದ ಪಾರಾಗಲು ವ್ಯಾಪಾರಿಗಳು ತಮ್ಮ ನೋಂದಣಿಯನ್ನೇ ವಾಪಸ್ ಪಡೆದಿದ್ದಾರೆ. ಕಲಬುರಗಿಯ 250 ದಾಲ್‌ಮಿಲ್‌ಗಳಲ್ಲಿ 6 ವ್ಯಾಪಾರಿಗಳು ಪ್ಯಾಕ್ಡ್ ಹಾಗೂ ನೋಂದಾಯಿತ ತೊಗರಿ ಬ್ರಾÂಂಡೆಡ್ ಹೊಂದಿದ್ದರು. ಈ ಆರು ವ್ಯಾಪಾರಿಗಳು ನೋಂದಣಿ ಸಂಖ್ಯೆಯನ್ನು ವಾಪಸ್ಸು ಪಡೆದಿದ್ದಾರೆ. ಹೀಗಾಗಿ ಬ್ರಾÂಂಡೆಡ್ ನೋಂದಾಯಿತ ತೊಗರಿ ಮಾರಾಟ ನಿಂತು ಹೋಗಿದೆ. ಶೇ.5ರಷ್ಟು ಜಿಎಸ್‌ಟಿಯಿಂದ ಪಾರಾಗಲು ತಮ್ಮ ನೋಂದಣಿಯನ್ನೇ ವಾಪಸ್ ಪಡೆದಿರುವುದಾಗಿ ವ್ಯಾಪಾರಿ ಚಂದ್ರಶೇಖರ ನಡಾರ್ ತಿಳಿಸಿದ್ದು, ಇವರ ಡೋವೋ ಪ್ಯಾಕ್ಡ್ ನೋಂದಾಯಿತ ತೊಗರಿ ಬೇಳೆ ಮಾರಾಟ ನಿಂತು ಹೋಗಿದೆ.