Advertisement
ಅಡಿಕೆ ತೋಟದ ನಿರ್ವಹಣೆಯಲ್ಲಿ ಮುಖ್ಯಭಾಗ ಕೊçಲು, ಔಷಧ ಸಿಂಪಡಣೆ. ತೋಟಕ್ಕೆ ನೀರುಣಿಸಲು, ಗೊಬ್ಬರ ಹಾಕಲು ಪರಿಣಿತ ಕಾರ್ಮಿಕರೇ ಬೇಕೆಂದಿಲ್ಲ. ಆದರೆ ಕೊçಲು, ಔಷಧ ಸಿಂಪಡಣೆಗೆ ಮರ ಹತ್ತಲು ತಿಳಿದಿರುವವರು ಅಗತ್ಯ. ಇಂಥ ಬೆರಳೆಣಿಕೆಯ ಕಾರ್ಮಿಕರು ಆಯಾ ಊರಿನ ಹತ್ತಕ್ಕಿಂತ ಅಧಿಕ ತೋಟಗಳಲ್ಲಿ ನಿಗದಿತ ದಿನದಂತೆ ಕೆಲಸ ನಿರ್ವಹಿಸುತ್ತಾರೆ. ಇವರಿಗೆ ದಿನವೊಂದಕ್ಕೆ 1,700 ರೂ.ನಿಂದ 2 ಸಾ. ರೂ. ತನಕ ವೇತನ ಇದೆ.
Related Articles
ಹವಾಮಾನ ಆಧಾರಿತ ವಿಮೆ ಯೋಜನೆಯಲ್ಲಿ ಅಡಿಕೆ, ಕಾಳುಮೆಣಸು ಬೆಳೆಗಾರರಿಗೆ ಈ ಬಾರಿ ನಿರೀಕ್ಷಿತ ಮೊತ್ತ ಪಾವತಿಯಾಗಿಲ್ಲ. ಕಳೆದ ಬಾರಿಗೆ ಹೋಲಿಸಿದರೆ ಶೇ.40ರಷ್ಟು ಕಡಿಮೆ ಮೊತ್ತ ಜಮೆ ಆಗಿದೆ. ಹಿಂದಿನ ಮಾನದಂಡದ ಪ್ರಕಾರ ವಿಮೆ ಮೊತ್ತ ಪಾವತಿ ಮಾಡಿದರೆ ಕಂಪೆನಿಗೆ ನಷ್ಟ ಉಂಟಾಗುತ್ತದೆ ಎಂಬ ಕಾರಣದಿಂದ ಹೊಸ ನಿಯಮ ರೂಪಿಸಲಾಗಿತ್ತು. ಇದರಿಂದ ಬೆಳೆ ವಿಮೆ ಮೊತ್ತ ಕಡಿಮೆ ಆಗಿದೆ. ಬೆಳೆಗಾರರು ಹೇಳುವ ಪ್ರಕಾರ, ಕಳೆದ ಬಾರಿ ತಾಪಮಾನ ಹಾಗೂ ನೀರಿನ ಕೊರತೆ ಹೆಚ್ಚಾಗಿತ್ತು. ಹವಾಮಾನ ವೈಪರೀತ್ಯದ ಆಧಾರದಲ್ಲೇ ವಿಮೆ ಮೊತ್ತ ನಿರ್ಧಾರವಾಗುವ ಕಾರಣ ಈಗ ಲಭಿಸಿರುವ ಮೊತ್ತ ಅದಕ್ಕೆ ತಕ್ಕುದಾಗಿ ಇಲ್ಲ ಅನ್ನುವ ಕೂಗು ಬೆಳೆಗಾರರದ್ದು. ಹೀಗಾಗಿ ಕಷ್ಟ ಕಾಲದಲ್ಲಿ ಕೈ ಹಿಡಿಯಬೇಕಿದ್ದ ವಿಮೆಯ ಕಥೆಯೂ ಕೈ ಕೊಟ್ಟಿದೆ ಎನ್ನುತ್ತಾರೆ ಅವರು.
Advertisement
ಫಸಲು ಕಡಿಮೆ, ರೋಗ ಮುಂತಾದ ಕಾರಣಗಳಿಂದ ಅಡಿಕೆ ಕ್ನಷಿಕರು ಸಂಕಷ್ಟದಲ್ಲಿದ್ದಾರೆ. ನೆರವಾಗಬೇಕಿದ್ದ ಬೆಳೆ ವಿಮೆಯೂ ಕೈ ಕೊಟ್ಟಿದೆ. ಅಡಿಕೆ ಕೃಷಿಗೆ ತಟ್ಟಿರುವ ಸಮಸ್ಯೆಯು ಬೆಳೆಗಾರ ಮತ್ತು ಕಾರ್ಮಿಕರನ್ನು ಆತಂಕಕ್ಕೆ ತಳ್ಳಿದೆ. ಆದ್ದರಿಂದ ಸರಕಾರ ತತ್ಕ್ಷಣ ಬೆಳೆಗಾರರು ಮತ್ತು ಕಾರ್ಮಿಕರ ನೆರವಿಗೆ ಬರಬೇಕು.– ಎಂ.ವೆಂಕಪ್ಪ ಗೌಡ, ಕೃಷಿಕರು – ಕಿರಣ್ ಪ್ರಸಾದ್ ಕುಂಡಡ್ಕ