Advertisement
ಪ್ರಬಲ ತ್ರಿಕೋನ ಸ್ಪರ್ಧೆ ನಡೆಯಲಿರುವ ಕಾಸರಗೋಡು ಲೋಕಸಭಾ ಮಂಡಲದಲ್ಲಿ ಎಡರಂಗ ಅಭ್ಯರ್ಥಿಯನ್ನು ಘೋಷಿಸಿದೆ. ಬಿ.ಜೆ.ಪಿ. ಮತ್ತು ಐಕ್ಯರಂಗದ ಅಭ್ಯರ್ಥಿಗಳ ಆಯ್ಕೆಯ ಪ್ರಕ್ರಿಯೆ ಸಕ್ರಿಯವಾಗಿದೆ.
Related Articles
Advertisement
ಎಡರಂಗ ಪ್ರಚಾರದಲ್ಲಿ ಮುಂದಿದ್ದು ಎಲ್ಲ 20 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಿದ ಬಳಿಕ ಇದೀಗ ಆಯಾ ಲೋಕಸಭಾ ಮಂಡಲಗಳಲ್ಲಿ ಸಮಾವೇಶದ ಸಿದ್ಧತೆಯಲ್ಲಿದೆ. ಬಿ.ಜೆ.ಪಿ. ಮತ್ತು ಐಕ್ಯರಂಗಗಳ ಅಭ್ಯರ್ಥಿಗಳ ಆಯ್ಕೆಯ ಸಭೆ ನಡೆಯುತ್ತಿದೆ. ಬಿ.ಜೆ.ಪಿ. ಚುನಾವಣೆಗೆ ಮುನ್ನವೇ ಕಾರ್ಯಕರ್ತರ ಸಭೆಯನ್ನು ನಡೆಸಿ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಮುಂದಾಗಿದೆ.
ಎಡರಂಗದ ವತಿಯಿಂದ ಗೋಡೆಬರಹ ಇನ್ನಿತರ ಪ್ರಚಾರ ನಡೆಯುತ್ತಿದೆ.ಬಿ.ಜೆ.ಪಿ.ನಾಯಕರ ಮತ್ತು ಕಾರ್ಯಕರ್ತರ ವತಿಯಿಂದ ಮನೆ ಮನೆ ಸಂಪರ್ಕ,ಮನೆ ಮನೆಗಳಲ್ಲಿ ಧ್ವಜ ಮತ್ತು ಪಕ್ಷದ ಚಿಹ್ನೆಯ ಸ್ಟಿಕ್ಕರ್ ಅಂಟಿಸುವ ಕೆಲಸ ನಡೆಯುತ್ತಿದೆ.
ದೇಶದಾದ್ಯಂತ ವಿಪಕ್ಷಗಳು ಮಹಾಘಟಬಂಧನ್‌ಗೆ ಕಾಂಗ್ರೆಸ್ ಮತ್ತು ಸಿ.ಪಿ.ಎಂ. ಪರಸ್ಪರ ಕೈಜೋಡಿಸಲಿವೆ.ಆದರೆ ಕೇರಳದಲ್ಲಿ ಉಭಯ ರಂಗಗಳು ಪರಸ್ಪರ ಸ್ಪರ್ಧೆಗೆ ಸಜ್ಜಾಗಿವೆೆ. ಆದರೆ ಗೆದ್ದ ಬಳಿಕ ದಿಲ್ಲಿಯಲ್ಲಿ ಎಡರಂಗ ಮತ್ತು ಐಕ್ಯರಂಗಗಳು ಪರಸ್ಪರ ಒಟ್ಟಾಗಿ ಕೈ ಜೋಡಿಸಲಿವೆ.
ಹೆಚ್ಚಿನ ಕಡೆಗಳಲ್ಲಿ ಹೆಚ್ಚಿನೆಲ್ಲÉ ಎಡರಂಗದ ಹಾಲಿ ಸಂಸದರಿಗೆ ಟಿಕೆಟ್ ನೀಡಿದರೆ ಕಾಸರಗೋಡಿನಲ್ಲಿ ಸೋಲುವ ಭಯದಿಂದ ಹಾಲಿ ಸಂಸದರನ್ನು ಕೈ ಬಿಟ್ಟಿದೆ ಎಂಬುದಾಗಿ ಐಕ್ಯರಂಗ ಹೇಳಿದರೆ, ಹಾಲಿ ಸಂಸದರಿಗೆ ಆರೋಗ್ಯದ ಪ್ರಶ್ನೆಯಿಂದ ಅನಿವಾರ್ಯವಾಗಿ ಕೈಬಿಡಲಾಗಿದ್ದು ಯುವ ನಾಯಕತ್ವಕ್ಕೆ ಟಿಕೆಟ್ ನೀಡಲಾಗಿದೆ.ಹಿಂದಿನ ಬಾರಿಗಿಂತಲೂ ಈ ಬಾರಿ ಇಲ್ಲಿ ಅತ್ಯಧಿಕ ಮತದಿಂದ ಗೆಲ್ಲುವ ವಿಶ್ವಾಸ ಎಡರಂಗ ನಾಯಕರದು.ಅಲ್ಲದೆ ಈ ಹಿಂದೆ 15 ಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ 12 ಬಾರಿಯೂ ಗೆಲುವು ಎಡರಂಗದ ಪಾಲಾಗಿತ್ತು.
ಮಂಜೇಶ್ವರ, ಕಾಸರಗೋಡು, ಉದುಮ, ಹೊಸದುರ್ಗ, ತೃಕ್ಕರಿಪ್ಪುರ, ಪಯ್ಯನ್ನೂರು ಮತ್ತು ಕಲ್ಯಾಶ್ಯೆರಿ ಏಳು ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 13,24,384 ಮತದಾರರಿದ್ದು ಇದರಲ್ಲಿ 6,87,696 ಮಹಿಳೆಯರು ಮತ್ತು 6,36,689 ಪುರುಷರು ಮತ್ತು ಈರ್ವರು ಮಂಗಳಮುಖೀ ಮತದಾರರನ್ನು ಹೊಂದಿದ ಕೇÒತ್ರದಲ್ಲಿ ಮಹಿಳಾ ಮತದಾರರ ಮೇಲುಗೈಯಾಗಿದೆ.ಇದೀಗ ಬಿರು ಬಿಸಿಲಿನ ಬೇಸಗೆಯಲ್ಲಿ ಚುನಾವಣೆ ಘೋಷಣೆಯಾಗಿ ಮುಂದಿನ ದಿನಗಳಲ್ಲಿ ಚುನಾವಣೆಯ ಕಾವು ಮತ್ತು ಬಿಸಿಲಿನ ಕಾವು ಇನ್ನಷ್ಟು ಏರಲಿದೆ.