Advertisement

3ಹೊಸ ತರಕಾರಿ ಸಂಗ್ರಹ ಕೇಂದ್ರ ಸ್ಥಾಪನೆಗೆ ನಿರ್ಧಾರ

12:23 PM Dec 23, 2017 | |

ಬೆಂಗಳೂರು: ಚಿಕ್ಕಬಳ್ಳಾಪುರ, ಚನ್ನಪಟ್ಟಣ ಮತ್ತು ಮಾಗಡಿ ತಾಲೂಕುಗಳಲ್ಲಿ ಒಟ್ಟು 4 ಎಕರೆ ಜಾಗದಲ್ಲಿ ಹಣ್ಣು, ತರಕಾರಿ ಖರೀದಿ ಹಾಗೂ ಸಂಗ್ರಹಣಾ ಕೇಂದ್ರ ಮತ್ತು ಶೀತಲೀಕರಣ ಘಟಕ ಸ್ಥಾಪಿಸಲು ಹಾಪ್‌ಕಾಮ್ಸ್‌ ಮುಂದಾಗಿದ್ದು, ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

Advertisement

ಮಾಲ್‌ಗ‌ಳು, ಹಣ್ಣು-ತರಕಾರಿ ಮಳಿಗೆಗಳು, ಆನ್‌ಲೈನ್‌ ಕಂಪನಿಗಳಿಂದಾಗಿ ಹಾಪ್‌ಕಾಮ್ಸ್‌ಗೆ ಹಣ್ಣು ಮತ್ತು ತರಕಾರಿ ಮಾರಾಟದಲ್ಲಿ ಪೈಪೋಟಿ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯನ್ನು ಅಭಿವೃದ್ಧಿಪಡಿಸಿ, ಪೈಪೋಟಿಗೆ ಸಜ್ಜಾಗುವ ನಿಟ್ಟಿನಲ್ಲಿ ಹಾಪ್‌ಕಾಮ್ಸ್‌ ತಯಾರಿ ನಡೆಸುತ್ತಿದೆ. ಅದಕ್ಕಾಗಿ ಸಂಸ್ಥೆಗೆ ಸೇರಿದ್ದ ಚಿಕ್ಕಬಳ್ಳಾಪುರದ ನಂದಿಕ್ರಾಸ್‌ ಸಮೀಪದ ವಿಆರ್‌ಎಸ್‌ಫಾರಂ ಬಳಿ (1.30 ಎಕರೆ), ಚನ್ನಪಟ್ಟಣದ ವಂದರಾಗುಪ್ಪೆ (1 ಎಕರೆ ) ಹಾಗೂ ಮಾಗಡಿಯ ತಿಪ್ಪಸಂದ್ರ (1 ಎಕರೆ) ಜಾಗದಲ್ಲಿ ಅತ್ಯಾಧುನಿಕ ಶೀತಲೀಕರಣ ಮತ್ತು
ಹಣ್ಣು- ತರಕಾರಿ ಸಂಗ್ರಹಣಾ ಕೇಂದ್ರ ಸ್ಥಾಪಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ 25 ಕೋಟಿ ರೂ.ಗಳ ಅನುದಾನ ನೀಡುವಂತೆ ಹಾಪ್‌ಕಾಮ್ಸ್‌ ಸರ್ಕಾರವನ್ನು ಕೋರಿದೆ.

ಸಂಗ್ರಹಣೆ ವಿಕೇಂದ್ರೀಕರಣ: ಪ್ರಸ್ತುತ ಮಾಲೂರು, ದೊಡ್ಡಬಳ್ಳಾಪುರ, ಕೋಲಾರ, ಸರ್ಜಾಪುರದಲ್ಲಿ ಹಣ್ಣು-ತರಕಾರಿ ಸಂಗ್ರಹಣಾ ಕೇಂದ್ರ ಇದೆ. ಚನ್ನಪಟ್ಟಣದಲ್ಲಿ ಬಾಳೆಕಾಯಿ ಸಂಗ್ರಹಣಾ ಕೇಂದ್ರವಿದೆ. ಜನರ ಅನುಕೂಲಕ್ಕಾಗಿ ಆಯಾ ತಾಲೂಕುಗಳಲ್ಲೇ ಹಣ್ಣು, ತರಕಾರಿ ಖರೀದಿ, ಸಂಗ್ರಹಣಾ ಕೇಂದ್ರ ಮತ್ತು ಅವುಗಳನ್ನು ಸಂರಕ್ಷಿ ಸಲುಶೀತಲೀ ಕರಣ ಘಟಕ ಸ್ಥಾಪಿಸಲು ಸರ್ಕಾರ ಯೋಜನೆ ರೂಪಿಸಿದೆ. ಇದರಿಂದ ಸಂಗ್ರಹಣಾ ಸಾಮರ್ಥ್ಯ ಹೆಚ್ಚುತ್ತದೆ. ಸಂಗ್ರಹಣಾ ಕೇಂದ್ರದಿಂದ ಕಡಿಮೆ ಅವಧಿಯಲ್ಲಿ ತರಕಾರಿ- ಹಣ್ಣುಗಳನ್ನು
ಮಳಿಗೆಗಳಿಗೆ ಪೂರೈಸಲು ಸಾಧ್ಯವಾಗುತ್ತದೆ ಎಂದು ಸಂಸ್ಥೆ ಅಧ್ಯಕ್ಷ ಎ.ಎಸ್‌.ಚಂದ್ರೇಗೌಡ ತಿಳಿಸಿದ್ದಾರೆ.

100 ಟನ್‌ ಮಾರಾಟ ಗುರಿ: ಪ್ರತಿ ದಿನ ನಗರದಲ್ಲಿರುವ ಸುಮಾರು 270 ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ 55ರಿಂದ 60 ಟನ್‌ ತರಕಾರಿ ಮಾರಾಟವಾಗುತ್ತದೆ. ಸೋಮವಾರದಲ್ಲಿ 85ರಿಂದ 100 ಟನ್‌ ತರಕಾರಿ, 500 ಕೆಜಿಗೂ ಅಧಿಕ ಹಣ್ಣುಗಳ ಮಾರಾಟ ನಡೆಯುತ್ತದೆ. ಈ ಪ್ರಮಾಣವನ್ನು ಹೆಚ್ಚು ಮಾಡುವ ಉದ್ದೇಶ ಹಾಪ್‌ಕಾಮ್ಸ್‌ಗಿದೆ. ಪ್ರತಿ ದಿನ 100ರಿಂದ 120 ಟನ್‌ ತರಕಾರಿ ಮಾರಾಟ ಮಾಡುವ ಗುರಿ ಇದೆ. ಖಾಸಗಿ ತರಕಾರಿ, ಹಣ್ಣುಗಳ ಮಳಿಗೆಗಳಿಗೆ ಪೈಪೋಟಿ ನೀಡುವ ಉದ್ದೇಶದಿಂದ ದೊಡ್ಡಬಳ್ಳಾಪುರ, ಮಾಗಡಿ,
ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಇತ್ಯಾದಿ ಕಡೆಗಳಲ್ಲಿ ಹಾಪ್‌ಕಾಮ್ಸ್‌ ವ್ಯಾಪ್ತಿ ವಿಸ್ತರಿಸಲು ನಿರ್ಧರಿಸಿದೆ. ರೈತರು ಬೆಳೆದ ತರಕಾರಿ-ಹಣ್ಣುಗಳನ್ನು ಲಾಲ್‌ಬಾಗ್‌ ನಲ್ಲಿರುವ ಹಾಪ್‌ಕಾಮ್ಸ್‌ ಕೇಂದ್ರಕ್ಕೆ ತರುವ ಬದಲು ತಮ್ಮ ತಾಲೂಕುಗಳಲ್ಲಿ ಸ್ಥಾಪಿಸಲಿರುವ ಸಂಗ್ರಹಣಾ ಕೇಂದ್ರಕ್ಕೆ ತಲುಪಿಸಿದರೆ ಸಂರಕ್ಷಿಸಲು ಸಾಧ್ಯ ಎಂದು ಹಾಪ್‌ಕಾಮ್ಸ್‌ ವ್ಯವಸ್ಥಾಪಕ ನಿರ್ದೇಶಕ ಬಿ.ವಿಶ್ವನಾಥ್‌ ತಿಳಿಸಿದ್ದಾರೆ.

ತೋಟೋತ್ಪನ್ನಗಳ ಪ್ರದರ್ಶನ ಇಂದು ಬೆಂಗಳೂರು: ತೋಟಗಾರಿಕಾ ಬೆಳೆಗಳನ್ನು ಯುವ ಜನತೆಗೆ ಪರಿಚಯಿಸುವ ದೃಷ್ಟಿಯಿಂದ ಹಾಪ್‌ಕಾಮ್ಸ್‌ ಸಂಸ್ಥೆ ಡಿ. 23ರಿಂದ 25ರವರಗೆ ಲಾಲ್‌ ಬಾಗ್‌ನಲ್ಲಿ ಸಾಂಪ್ರದಾಯಕ ತೋಟೋತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಏರ್ಪಡಿಸಿದೆ. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಹಾಪ್‌ಕಾಮ್ಸ್‌ ಅಧ್ಯಕ್ಷ ಎ.ಎಸ್‌. ಚಂದ್ರಶೇಖರ್‌, ಲಾಲ್‌ಬಾಗ್‌ನ ಗಾಜಿನ ಮನೆ ಮುಂಭಾಗ ಇರುವ ಮಳಿಗೆ ಬಳಿ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದ್ದು, ಬೆಳಗ್ಗೆ 11 ಗಂಟೆಗೆ ತೋಟಗಾರಿಕೆ ಇಲಾಖೆಯ ಆಯುಕ್ತ ಪ್ರಭಾಷ್‌ ಚಂದ್ರ ರೇ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು. ಬೆಳಗ್ಗೆ 11.30ಕ್ಕೆ ಲಾಲ್‌ಬಾಗ್‌ ತೋಟಗಾರಿಕಾ ಮಾಹಿತಿ ಕೇಂದ್ರದಲ್ಲಿ ತಜ್ಞರಿಂದ ಸದಸ್ಯ ರೈತರಿಗೆ ಸಾಂಪ್ರದಾಯಿಕ ಬೆಳೆಗಳಾದ ರೋಸ್‌ ಆನಿಯನ್‌, ಬೆಂಗಳೂರು ನೀಲಿ ದ್ರಾಕ್ಷಿ ಸೇರಿದಂತೆ ಇನ್ನಿತರ ತೋಟಗಾರಿಕೆ ಬೆಳೆಗಳ ಕುರಿತು ವಿಚಾರಗೋಷ್ಠಿ ಏರ್ಪಡಿಸಲಾಗಿದೆ ಎಂದರು. ಹಾಪ್‌ ಕಾಮ್ಸ್‌
ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ವಿಶ್ವನಾಥ್‌ ಮಾತನಾಡಿದರು.

Advertisement

ಚಿಕ್ಕಬಳ್ಳಾಪುರ, ಮಾಗಡಿ, ಚನ್ನಪಟ್ಟಣದಲ್ಲಿ ಹಾಪ್‌ಕಾಮ್ಸ್‌ಗೆ ಸೇರಿದ ಜಾಗವಿದೆ. ಅದನ್ನು ರೈತರಿಗೆ ಅನುಕೂಲವಾಗುವಂತೆ ಬಳಕೆ
ಮಾಡಿಕೊಳ್ಳಲು ಸಂಸ್ಥೆ ತೀರ್ಮಾನಿಸಿದೆ. ತರಕಾರಿ, ಹಣ್ಣು ಖರೀದಿ ಮತ್ತು ಸಂಗ್ರಹಣಾ ಕೇಂದ್ರವನ್ನು ಅತ್ಯಾಧುನಿಕ ವ್ಯವಸ್ಥೆಯಲ್ಲಿ ನಿರ್ಮಾಣ ಮಾಡಬೇಕೆಂದಿದೆ. ಅದಕ್ಕಾಗಿ 25 ಕೋಟಿ ರೂ. ವೆಚ್ಚದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದೆ.
 ●ಎ.ಎಸ್‌.ಚಂದ್ರೇಗೌಡ, ಅಧ್ಯಕ್ಷ, ಹಾಪ್‌ಕಾಮ್‌

Advertisement

Udayavani is now on Telegram. Click here to join our channel and stay updated with the latest news.

Next