50 ಲಕ್ಷ ರೂ.ಗಿಂತ ಕಡಿಮೆ ವಹಿವಾಟು ಹೊಂದಿರುವ ಕಾಂಪೊಸಿ ಶನ್ ಡೀಲರ್ ಎಂದು ನೋಂದಾಯಿಸಿ ಕೊಂಡಿರುವ ವ್ಯಾಪಾರ ಸ್ಥರು ತಮ್ಮ ಗ್ರಾಹಕರಿಗೆ ಜಿಎಸ್‌ಟಿ ವಿಧಿಸಬಾರದು. ಅಷ್ಟೇ ಅಲ್ಲ, ತಮ್ಮ ಜಿಎಸ್‌ಟಿ ವಿವರವನ್ನು ಇನ್ವಾಯ್ಸನಲ್ಲಿ ಕಡ್ಡಾಯವಾಗಿ ನಮೂದಿಸಬೇಕಿರುತ್ತದೆ. ಸದ್ಯ ಗ್ರಾಹಕರಿಂದ ತೆರಿಗೆಯನ್ನು ಸಂಗ್ರಹಿಸುವ ವ್ಯಾಪಾರಸ್ಥರು ಅದನ್ನು ಸರಕಾರಕ್ಕೆ ಪಾವತಿ ಮಾಡುತ್ತಿಲ್ಲ. ಇದರೊಂದಿಗೆ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲೂ ಕಂದಾಯ ಇಲಾಖೆ ನಿರ್ಧರಿಸಿದೆ.
Advertisement
ಜಿಎಸ್‌ಟಿ ಕಾಂಪೊಸಿಶನ್ ಸ್ಕೀಮ್ ಅಡಿಯಲ್ಲಿ ವ್ಯಾಪಾರಿಗಳೂ ಆಗಿರುವ ಉತ್ಪಾದಕರು ಶೇ.1 ರಷ್ಟು ತೆರಿಗೆ ವಿಧಿಸಿದರೆ ಸಾಕು. ಅಷ್ಟೇ ಅಲ್ಲ, ಈ ಸಾಮಗ್ರಿಯನ್ನು ಖರೀದಿಸುವ ಗ್ರಾಹಕರಿಗೂ ಜಿಎಸ್‌ಟಿ ವಿಧಿಸುವಂತಿಲ್ಲ. ಸುಮಾರು 20 ಲಕ್ಷ ಡೀಲರುಗಳು ಕಾಂಪೊಸಿಶನ್ ಸ್ಕೀಮ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ.