Advertisement

9200 ಹೆಕ್ಟೇರ್‌ನಲಿ ಸಸಿ ನೆಡಲು ನಿರ್ಧಾರ

05:13 PM Jun 09, 2020 | Team Udayavani |

ಹಾನಗಲ್ಲ: ಪರಿಸರ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಅರಣ್ಯ ಇಲಾಖೆ 9200 ಹೆಕ್ಟೇರ್‌ ಅರಣ್ಯ ಪ್ರದೇಶದಲ್ಲಿ ಗಿಡಗಳನ್ನು ನೆಡಲು ನಿರ್ಧರಿಸಲಾಗಿದೆ ಎಂದು ಶಾಸಕ ಸಿ.ಎಂ. ಉದಾಸಿ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ 4 ಅಡಿ ಎತ್ತರದ ವಿವಿಧ ತಳಿಯ 1.55 ಲಕ್ಷ ಗಿಡಗಳನ್ನು ನೆಡಲಾಗುತ್ತಿದೆ. ಗಿಡದ ಆರೈಕೆಯನ್ನು ಮೂರು ವರ್ಷ ಪ್ರತಿ ಗಿಡಕ್ಕೆ 100 ರೂ. ನಂತೆ ವೆಚ್ಚ ಮಾಡಲಾಗುತ್ತಿದ್ದು, ಒಟ್ಟಿ 1.55 ಕೋಟಿ ರೂ ವೆಚ್ಚದಲ್ಲಿ ಗಿಡಗಳನ್ನು ಸಂರಕ್ಷಿಸಲಾಗುವುದು. ಕಳೆದ ವರ್ಷದಲ್ಲಿ ನೆಟ್ಟ ಸಸಿಗಳಲ್ಲಿ ಶೇ. 90 ರಷ್ಟು ಗಿಡಗಳು ಬದುಕುಳಿದಿದ್ದು, ಶೇ. 10 ರಷ್ಟು ಗಿಡಗಳನ್ನು ಈ ವರ್ಷ ನೆಟ್ಟು ಸರಿಪಡಿಸಲಾಗುವುದು ಎಂದರು.

ಹಾನಗಲ್ಲ ತಾಲೂಕಿನ ರೈತರಿಗೆ 2020 ನೇ ಸಾಲಿನಲ್ಲಿ ಹೆಬ್ಬೇವು, ಮಹಾಘನಿ, ಸಿಲವರೋಕ್‌, ಸಾಗವಾನಿ, ಲಿಂಬು, ನುಗ್ಗೆ, ಬಿದಿರು, ಶ್ರೀಗಂಧ ಜಾತಿಯ ಒಟ್ಟು 77800 ಸಸಿಗಳನ್ನು ರಿಯಾಯತಿ ದರದಲ್ಲಿ ವಿತರಿಸಲಾಗುತ್ತಿದೆ ಎಂದರು. ಕಳೆದ ಸಾಲಿನಲ್ಲಿ ರೈತರಿಗೆ ವಿತರಿಸಿದ ಸಸಿಗಳಲ್ಲಿ ಬದುಕುಳಿದ ಸಸಿಗಳಿಗೆ ಸ್ಥಳಿಕ ತಪಾಸಣೆ ವರದಿ ಆಧಾರದ ಮೇಲೆ ಒಟ್ಟು 538 ಫಲಾನುಭವಿಗಳಿಗೆ 51.38 ಲಕ್ಷ ರೂಗಳನ್ನು ರೈತರ ಖಾತೆಗೆ ಜಮಾ ಮಾಡಲಾಗಿದೆ. ಇದರೊಂದಿಗೆ ಕಾಡು ಪ್ರಾಣಿಗಳ ದಾಳಿಯಿಂದ ಬೆಳೆ ನಾಶ ಹಾಗೂ ಸಾಕು ಪ್ರಾಣಿ ಹಾನಿಗೆ ಸಂಬಂ ಸಿದಂತೆ ಒಟ್ಟು 73 ಫಲಾನುಭವಿಗಳಿಗೆ 2.54 ಲಕ್ಷ ರೂ ಪರಿಹಾರ ಧನ ವಿತರಿಸಲಾಗಿದೆ ಎಂದರು.

ಹಾನಗಲ್ಲ ಕುಮಾರೇಶ್ವರ ಸಸ್ಯೋದ್ಯಾನ ನಿರ್ವಹಣೆ ಮತ್ತು ದುರಸ್ತಿಗೆ ಮತ್ತೆ 8 ಲಕ್ಷ ರೂ ಅನುದಾನ ಮಂಜೂರಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next