Advertisement

ಅವ್ಯವಹಾರ ತನಿಖೆಗೆ ಸಮಿತಿ ರಚಿಸಲು ನಿರ್ಧಾರ

06:03 PM Mar 13, 2018 | Team Udayavani |

ಚಿಕ್ಕಮಗಳೂರು: ಉದ್ಯೋಗ ಖಾತ್ರಿ ಯೋಜನೆಯ ಜಾಬ್‌ ಕಾರ್ಡ್‌ಗಳ ಮುದ್ರಣ ಟೆಂಡರ್‌ನಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ತನಿಖೆಗೆ ಸಮಿತಿಯೊಂದನ್ನು ರಚಿಸಲು ಜಿಲ್ಲಾ ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.

Advertisement

ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಚೈತ್ರಶ್ರೀ ಮಾಲತೇಶ್‌ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ವಿಚಾರ ಪ್ರಸ್ತಾಪಿಸಿದ ಸದಸ್ಯ ಶರತ್‌ ಕೃಷ್ಣಮೂರ್ತಿ, ಉದ್ಯೋಗ ಖಾತ್ರಿ ಯೋಜನೆಯ ಜಾಬ್‌ ಕಾರ್ಡ್‌ಗಳನ್ನು ಮುದ್ರಿಸಲು ಫೆ.17 ರಂದು ಟೆಂಡರ್‌ ಕರೆಯಲಾಗಿದೆ. ಟೆಂಡರ್‌ ತೆರೆಯಲು ಮಾ.3 ಕೊನೆಯ ದಿನವಾಗಿತ್ತು. ಈ ಅವಧಿ ಮುಗಿಯುವ ಮೊದಲೆ ಚಿಕ್ಕಮಗಳೂರು ಹಾಗೂ ಕಡೂರು ತಾಲೂಕು ಪಂಚಾಯತ್‌ ಗಳಿಗೆ ಜಾಬ್‌ ಕಾರ್ಡ್‌ಗಳು ಬಂದಿವೆ. ಟೆಂಡರ್‌ ಅವಧಿ ಪೂರ್ಣಗೊಳ್ಳುವ ಮೊದಲೆ ಈ ಎರಡೂ ಕಚೇರಿಗಳಿಗೆ ಕಾರ್ಡ್‌ಗಳು ಬಂದದ್ದು ಹೇಗೆ? ಈ ಬಗ್ಗೆ ಎರಡೂ ತಾಲೂಕು ಪಂಚಾಯತ್‌ಗಳ ಕಾರ್ಯನಿರ್ವಹಣಾಧಿಕಾರಿಗಳನ್ನು ವಿಚಾರಿಸಿದರೆ ಕಾರ್ಡ್‌ಗಳು ಬಂದಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ ಎನ್ನುತ್ತಾರೆ. ಈ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು.

ಕಡೂರು ತಾಲೂಕು ಪಂಚಾಯತ್‌ಗೆ 20 ಸಾವಿರ ಹಾಗೂ ಚಿಕ್ಕಮಗಳೂರು ತಾಲೂಕು ಪಂಚಾಯತ್‌ಗೆ 16 ಸಾವಿರ ಜಾಬ್‌ ಕಾಡ್‌
ìಗಳು ಬಂದಿವೆ ಎಂದು ಕೆಲವು ಜಾಬ್‌ ಕಾಡ್‌ ìಗಳನ್ನು ಸಭೆಯಲ್ಲಿ ಪ್ರದರ್ಶಿಸಿದರಲ್ಲದೆ, ಈ ಜಾಬ್‌ ಕಾರ್ಡ್‌ಗಳು ಜನವರಿ ತಿಂಗಳಲ್ಲೆ
ಬಂದಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಸಿ.ಇ.ಒ. ಸಿ.ಸತ್ಯಭಾಮಾ, ಟೆಂಡರ್‌ನಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಬೆಂಗಳೂರಿನ ಮುದ್ರಣ ಸಂಸ್ಥೆಯೊಂದು ಒಂದು ಕಾರ್ಡಿಗೆ 4.32 ರೂ. ದರದಲ್ಲಿ ಟೆಂಡರ್‌ ಸಲ್ಲಿಸಿತ್ತು. ಈ  ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಈವರೆಗೂ ಟೆಂಡರ್‌ಗೆ ಅನುಮತಿ ನೀಡಿಲ್ಲ. ಜಾಬ್‌ ಕಾರ್ಡ್‌ಗಳಿಗೆ ತೀವ್ರ ಬೇಡಿಕೆ ಇದ್ದ ಹಿನ್ನೆಲೆಯಲ್ಲಿ ಸರ್ಕಾರಿ ಮುದ್ರಣಾಲಯದಲ್ಲಿ ವೆಚ್ಚವಾಗದೆ ಉಳಿದಿದ್ದ ಜಾಬ್‌ ಕಾರ್ಡ್‌ಗಳನ್ನು
ಕಳುಹಿಸಿಕೊಡುವಂತೆ ತಾವು ಮೌಖೀಕವಾಗಿ ಕೋರಿದ್ದ ಹಿನ್ನೆಲೆಯಲ್ಲಿ ಅಲ್ಲಿಂದ ಜಾಬ್‌ ಕಾಡ್‌ ìಗಳನ್ನು ಕಳುಹಿಸಿಕೊಡಲಾಗಿದೆ ಎಂದರು.

ಒಂದು ಸಣ್ಣ ಪತ್ರ ಬಂದರೂ ಅವುಗಳಿಗೆ ಇಲಾಖೆಗಳಲ್ಲಿ ದಾಖಲೆಗಳನ್ನು ಇಡಲಾಗುತ್ತದೆ. ಸಹಸ್ರಾರು ಕಾರ್ಡ್‌ಗಳು ಬಂದದ್ದಕ್ಕೆ ಯಾವುದೇ ದಾಖಲೆ ಇಲ್ಲವೆಂದರೆ ಹೇಗೆ ಎಂದು ಪ್ರಶ್ನಿಸಿದರು. ಇದಕ್ಕೆ ಎಲ್ಲ ಸದಸ್ಯರೂ ಸಹಮತ ವ್ಯಕ್ತಪಡಿಸಿದರು. ಮಹೇಶ್‌ ಒಡೆಯರ್‌ ಮಾತನಾಡಿ, ಜಿ.ಪಂ. ಸಿ.ಇ.ಒ. ಅವರು ಒಳ್ಳೆಯ ಅಧಿಕಾರಿ. ಆದರೆ ತಮ್ಮ ಕೈಕೆಳಗೆ ಕೆಲಸ ಮಾಡುವ ಎಲ್ಲರನ್ನೂ ನಂಬಬೇಡಿ. ಬೇರೆಯವರನ್ನು ಉಳಿಸುವ ಭರದಲ್ಲಿ ನೀವು ಸಿಲುಕಿಕೊಳ್ಳಬೇಡಿ. ಈ ಪ್ರಕರಣದ ತನಿಖೆ ನಡೆಸಲು ಸದಸ್ಯರು ಹಾಗೂ
ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸೋಣ ಎಂಬ ಸಲಹೆ ನೀಡಿದಾಗ, ಅದಕ್ಕೆ ಸರ್ವಾನುಮತದ ಒಪ್ಪಿಗೆ ದೊರೆಯಿತು.

ಸಿ.ಇ.ಒ. ವಿರುದ್ಧ ಅಸಮಾಧಾನ : ಇದೇ  ಸಂದರ್ಭದಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕ ಮಾಡಿಕೊಳ್ಳುವ
ವಿಚಾರದಲ್ಲಿಯೂ ಕೆಲವೊಂದು ಸಂದೇಹಗಳಿವೆ ಎಂದು ಮಾಜಿ ಉಪಾಧ್ಯಕ್ಷ ರಾಮಸ್ವಾಮಿ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿ.ಇ.ಒ. ಸಿ.ಸತ್ಯಭಾಮಾ, ನೇಮಕಾತಿ ವಿಚಾರದಲ್ಲಿ ಎಲ್ಲವೂ ಪಾರದರ್ಶಕವಾಗಿ ನಡೆದಿದೆ. ಸದಸ್ಯರು ಬೇಸ್‌ಲೆಸ್‌ ಆಗಿ ಆರೋಪ
ಮಾಡಬಾರದು ಎಂದರು. ಬೇಸ್‌ಲೆಸ್‌ ಪದ ಬಳಕೆಗೆ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಯಾವುದೇ ಸದಸ್ಯರೂ ವಿನಾಕಾರಣ ಆರೋಪ ಮಾಡುವುದಿಲ್ಲ. ನೇಮಕಾತಿ ಪ್ರಕ್ರಿಯೆ ನಡೆಯುತ್ತಿರುವ ಬಗ್ಗೆ ಜಿ.ಪಂ. ಅಧ್ಯಕ್ಷರಿಗಾಗಲಿ, ಉಪಾಧ್ಯಕ್ಷರಿಗಾಗಲಿ
ಮಾಹಿತಿ ಇಲ್ಲವೆಂದರೆ ಹೇಗೆ. ಈ ರೀತಿ ನಡೆದಾಗ ಅನುಮಾನ ಮೂಡುವುದು ಸಹಜ. ಸಿ.ಇ.ಒ. ಅವರು ಯಾವುದೇ ಹೇಳಿಕೆ ನೀಡುವಾಗ ಪದ ಬಳಕೆಯ ಬಗ್ಗೆ ಎಚ್ಚರವಹಿಸಬೇಕೆಂದು ಹೇಳಿದರು. 

Advertisement

ಶಿಷ್ಟಾಚಾರ ಪಾಲನೆ ಇಲ್ಲ : ಸದಸ್ಯ ಶರತ್‌ ಕೃಷ್ಣಮೂರ್ತಿ ಮಾತನಾಡಿ, ಕಡೂರು ತಾಲೂಕಿನಲ್ಲಿ ಶುದ್ಧ ಗಂಗಾ ಘಟಕ ಕಾಮಗಾರಿಗೆ
ಶಂಕುಸ್ಥಾಪನೆ ನೆರವೇರಿಸಲಾಗಿದೆ. ಆದರೆ ಜಿ.ಪಂ. ಸದಸ್ಯರಾದ ತಮ್ಮ ಗಮನಕ್ಕೆ ತಂದಿಲ್ಲ ಎಂದು ದೂರಿದರು. ಪಂಚಾಯತ್‌
ರಾಜ್‌ ಇಲಾಖೆ ಎಇಇ ಮಾತನಾಡಿ, ಈ ಶಂಕುಸ್ಥಾಪನೆಯನ್ನು ಇಲಾಖೆ ವತಿಯಿಂದ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು. ಶರತ್‌
ಕೃಷ್ಣಮೂರ್ತಿ ಮಾತನಾಡಿ, ಕೇವಲ ಶಾಸಕರು ಹಾಗೂ ಜೆಡಿಎಸ್‌ ಕಾರ್ಯಕರ್ತರು ಹೋಗಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಈಗ ಇಲಾಖೆಯ ವತಿಯಿಂದ ಮತ್ತೂಮ್ಮೆ ಶಂಕುಸ್ಥಾಪನೆ ಮಾಡಿ ಎಂದು ಒತ್ತಾಯಿಸಿದರು. ಯಾವುದೇ ಇಲಾಖೆಗಳೂ
ಶಿಷ್ಟಾಚಾರ ಪಾಲಿಸುತ್ತಿಲ್ಲ ಎಂದು ಸದಸ್ಯರು ಆರೋಪಿಸಿದಾಗ, ಇದನ್ನು ಸಹಿಸಲು ಸಾಧ್ಯವಿಲ್ಲ. ಪ್ರತಿ ಸಭೆಯಲ್ಲೂ ಈ ಬಗ್ಗೆ ಚರ್ಚೆ
ನಡೆಯುತ್ತಿದೆ. ಮುಂದೆ ಈ ರೀತಿ ಆದಲ್ಲಿ ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷೆ
ಚೈತ್ರಶ್ರೀ ಮಾಲತೇಶ್‌ ಎಚ್ಚರಿಸಿ ಪ್ರಕರಣಕ್ಕೆ ತೆರೆ ಎಳೆದರು.

Advertisement

Udayavani is now on Telegram. Click here to join our channel and stay updated with the latest news.

Next