Advertisement

ಸೆಲೂನ್‌ ಬಂದ್‌ ಮಾಡಲು ನಿರ್ಧಾರ

06:46 AM May 22, 2020 | Suhan S |

ಆಲ್ದೂರು: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ನಂದಿಪುರದ ವೈದ್ಯರೊಬ್ಬರಿಗೆ ಕೋವಿಡ್ ಪಾಸಿಟಿವ್‌ ದೃಢಪಟ್ಟಿದ್ದು ಈ ಹಿನ್ನೆಲೆಯಲ್ಲಿ ಆಲ್ದೂರಿನ ಸವಿತಾ ಸಮಾಜದವರು ಜೂ.2 ರವರೆಗೆ ತಮ್ಮ ಹೇರ್‌ ಡ್ರೆಸಸ್‌ ಶಾಪ್‌ಗ್ಳನ್ನು ಬಂದ್‌ ಮಾಡಲು ತೀರ್ಮಾನ ಕೈಗೊಂಡಿದ್ದಾರೆ.

Advertisement

ಮೂಡಿಗೆರೆ ವೈದ್ಯರ ಕೋವಿಡ್ ಪಾಸಿಟಿವ್‌ ಪ್ರಕರಣ ಜನರಲ್ಲಿ ಆತಂಕ ಹುಟ್ಟಿಸಿದ್ದು ಆಲ್ದೂರು ಸುತ್ತಮುತ್ತಲಿನ ಗ್ರಾಮದವರು ಈ ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದಾರೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಭಂದಿಸಿದಂತೆ ಹಾಂದಿ, ಆಗಳ, ಐದಳ್ಳಿ, ಹೊಲದಬೈಲ್‌ ಗ್ರಾಮದ ಕೆಲ ವ್ಯಕ್ತಿಗಳನ್ನು ಕ್ವಾರಂಟೈನ್‌ ಮಾಡಲಾಗಿದ್ದು ಸಂಪರ್ಕಿತರ ಪಟ್ಟಿ ದೊಡ್ಡದಿದೆ. ಗುರುವಾರ ಚಿಕ್ಕಮಾಗರವಳ್ಳಿ ಗ್ರಾಮದ ಮಹಿಳೆಯೋರ್ವರು ಈ ವೈದ್ಯರ ಪ್ರಾಥಮಿಕ ಸಂಪರ್ಕ ಹೊಂದಿದ್ದರು ಎನ್ನಲಾಗಿದ್ದು ಮುಂಜಾಗ್ರತಾ ಕ್ರಮವಾಗಿ ಆಲ್ದೂರಿನ ಹೇರ್‌ಡ್ರೆಸಸ್‌ ನವರು ಗುರುವಾರ ಸಭೆ ಸೇರಿ ಶುಕ್ರವಾರದಿಂದ ಜೂ. 2 ರವರೆಗೆ ತಮ್ಮ ಶಾಪ್‌ಗ್ಳನ್ನು ಬಂದ್‌ ಮಾಡಲು ತೀರ್ಮಾನಿಸಿದ್ದಾರೆ.

ತಮ್ಮ ಮನೆಗಳ ಬಳಿಯೂ ಯಾರಿಗೂ ಹೇರ್‌ ಕಟ್‌ ಮಾಡುವಂತಿಲ್ಲ . ಶಾಪ್‌ನವರು ಮನೆಗಳಿಗೆ ಹೋಗುವಂತಿಲ್ಲ. ನಿಯಮ ಉಲ್ಲಂಘಿಸಿದರೆ 5000 ಸಾವಿರ ರೂ ದಂಡ ವಿದಿಸಲಾಗುವುದು ಎಂದು ಸವಿತ ಸಮಾಜದವರು ತೀರ್ಮಾನ ಕೈಗೊಂಡಿದ್ದಾರೆ. ಸಂಘದ ಅಧ್ಯಕ್ಷ ಚಂದ್ರಶೇಖರ್‌, ಉಪಾಧ್ಯಕ್ಷ ಮಹೇಶ್‌, ಸುಮಂತ್‌, ಸುಜಿತ್‌, ಅಶೋಕ್‌, ಪದ್ಮನಾಭ್‌ ಸತೀಶ್‌, ಬಾಲಕೃಷ್ಣ, ರಮೇಶ್‌, ಶ್ರೀಧರ್‌, ರವಿ, ಮಧುಕುಮಾರ್‌, ಪ್ರವೀಣ್‌, ಕೌಶಿಕ್‌, ಶಿವಪ್ಪ, ಕೃಷ್ಣ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next