ಬಸವಕಲ್ಯಾಣ: ಸಂವಿಧಾನದ ಪ್ರಕಾರಸರ್ಕಾರ ಜಂಗಮ ಸಮಾಜಕ್ಕೆ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡಬೇಕು. ಇಲ್ಲದಿದ್ದರೆ ಮುಂಬರುವ ಬಸವಕಲ್ಯಾಣ ಉಪಚುನಾವಣೆ ಬಹಿಷ್ಕರಿಸಲು ಸಮಾಜದ ಮುಖಂಡರಿಂದ ಒಮ್ಮತದನಿರ್ಣಯ ಕೈಗೊಳ್ಳಲಾಗಿದೆ ಎಂದು ಸಮಾಜದ ಮುಖಂಡ ರವೀಂದ್ರ ಸ್ವಾಮಿ ಹೇಳಿದರು.
ನಗರದ ಆರ್ಯ ಸಮಾಜಭವನದಲ್ಲಿ ಬೀದರ್ ಜಿಲ್ಲಾ ಬೇಡ ಜಂಗಮ ಸಮಾಜದವತಿಯಿಂದ ಆಯೋಜನೆ ಮಾಡಿದಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕಾನೂನು ಹೋರಾಟದ ಮುಖಾಂತರ ಈಗಾಗಲೇ ಜಾತಿಪ್ರಮಾಣಪತ್ರ ಪಡೆದಿದ್ದೇನೆ. ಅದೇರೀತಿ ಸಮಾಜದಲ್ಲಿ ತುಳಿತಕ್ಕೊಳಗಾದಬೇಡ ಜಂಗಮ ಸಮಾಜಬಾಂಧವರಿಗೆ ಪರಿಶಿಷ್ಟ ಜಾರಿ ಪ್ರಮಾಣಪತ್ರ ನೀಡುವವರೆಗೂ ಹೋರಾಟ ಮುಂದುವರೆಸಲಾಗುವುದು ಎಂದರು.
ಬೇಡ ಜಂಗಮ ಸಮಾಜದ ಸಂಸ್ಥೆಯ ಜಿಲ್ಲಾಧ್ಯಕ್ಷ ಡಾ| ಬಸವರಾಜ ಸ್ವಾಮಿ ಮಾತನಾಡಿ, ಬೇಡ ಜಂಗಮ ಪ್ರಮಾಣ ಪತ್ರ ನೀಡಲು ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ.ಒಂದು ವೇಳೆ ಜಾತಿ ಪ್ರಮಾಣ ಪತ್ರ ನೀಡದೆ ಹೋದರೆ ಬೇಡಜಂಗಮ ಸಮಾಜದ ರಾಜ್ಯಮಟ್ಟದಸಮಾವೇಶವನ್ನು ಬಸವಕಲ್ಯಾಣದಲ್ಲಿಹಮ್ಮಿಕೊಳ್ಳುವ ಮೂಲಕ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ನ್ಯಾಯವಾದಿ ನಾಗೇಂದ್ರ ಸ್ವಾಮಿ ಮಾತನಾಡಿದರು. ಡಾ| ಎಸ್.ಸಿ. ಕಳ್ಳಿಮಠ, ಮಲ್ಲಯ್ಯ ಸ್ವಾಮಿ, ಪಂಚಾಕ್ಷರಿ ಜಿ ಹಿರೇಮಠ,ನ್ಯಾಯವಾದಿಗಳಾದ ರೇಣುಕಾ ಮಠಪತಿ, ಬಸಯ್ಯ ಟೆಂಗಿಮಠ, ವೈಜಿನಾಥ ವಡ್ಡೆ, ಶಾಂತವೀರ ಪೂಜಾರಿ,ವರದಯ್ಯ ಸ್ವಾಮಿ ಶ್ರೀಕಾಂತ ಸ್ವಾಮಿ, ಶಿವಲಿಂಗಯ್ಯ ಸ್ವಾಮಿ, ಬೂದಯ್ಯ ಮಠಪತಿ, ಸದಾನಂದ ಕಣಜೆ, ರಾಕೇಶ ಪುರವಂತ, ರೇವಣಸಿದ್ದಯ್ಯ ಮಠಪತಿ,ಬಸವರಾಜ ಸ್ವಾಮಿ ಬಟಗೇರಾ,ರವಿ ಸ್ವಾಮಿ ಮಹಾಂತಯ್ಯ ಸ್ವಾಮಿ, ಪ್ರಭುಲಿಂಗಯ್ಯ ಟಂಕಸಾಲಿಮಠ ಇದ್ದರು.
ನಂತರ ಬೇಡ ಜಂಗಮ ಸಮಾಜಕ್ಕೆ ಬೇಡ ಜಂಗಮ ಪ್ರಮಾಣ ಪತ್ರ ನೀಡಬೇಕೆಂದು ಉಪ ತಹಶೀಲ್ದಾರ್ ಶಿವಾನಂದ ಮೇತ್ರೆ ಮುಖಾಂತರ ಸಿಎಂ ಬಿಎಸ್‌ವೈ ಅವರಿಗೆ ಮನವಿ ಸಲ್ಲಿಸಿದರು.