Advertisement

ಕೈಗಾರಿಕ ನಿವೇಶನಗಳಿಗೆ ಪ್ರತ್ಯೇಕ ಆಸ್ತಿ ತೆರಿಗೆಗೆ ನಿರ್ಧಾರ

11:00 PM Dec 09, 2021 | Team Udayavani |

ಬೆಂಗಳೂರು:   ಕೆಐಎಡಿಬಿ ಮತ್ತು ಕೆಎಸ್‌ಎಸ್‌ಐಡಿಸಿ ಅಗತ್ಯ ಮೂಲ ಸೌಕರ್ಯಗಳೊಂದಿಗೆ  ಅಭಿವೃದ್ಧಿ ಗೊಳಿಸಿ ಹಂಚಿಕೆ ಮಾಡುವ ಕೈಗಾರಿಕ ನಿವೇಶನಗಳಿಗೆ  ಪ್ರತ್ಯೇಕ ಆಸ್ತಿ ತೆರಿಗೆ ವಿಧಿಸಲು ಕಾಯ್ದೆಗೆ  ತಿದ್ದುಪಡಿ ಮಾಡಲು ರಾಜ್ಯಸಚಿವ ಸಂಪುಟ ಒಪ್ಪಿಗೆ ನೀಡಿದೆ.

Advertisement

ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ  ಜರಗಿದ ಸಚಿವ ಸಂಪುಟ ಸಭೆಯಲ್ಲಿ  ಬಿಬಿಎಂಪಿ ಹೊರತುಪಡಿಸಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ  ಕೈಗಾರಿಕೆಗಳಿಗೆ ಪ್ರತ್ಯೇಕ ಆಸ್ತಿ ತೆರಿಗೆ ದರವನ್ನು ನಿಗದಿಪಡಿಸಲು ಅನುಕೂಲವಾಗುವಂತೆ ಸದ್ಯ ಜಾರಿಯಲ್ಲಿರುವ  “ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ಕಲಂ 94 ಮತ್ತು  ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯ್ದೆ 1976ರ  ಕಲಂ 108’ಕ್ಕೆ ತಿದ್ದುಪಡಿ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಖಾಲಿ ಭೂಮಿಗಳಿಗೆ ಮೂಲ ಬೆಲೆಯ ಶೇ.0.2ಕಿಂತ ಕಡಿಮೆ ಇಲ್ಲದಂತೆ  ಹಾಗೂ 0.5ಕ್ಕಿಂತ ಹೆಚ್ಚಿಲ್ಲದಂತೆ ನಗರ ಸ್ಥಳೀಯ ಸಂಸ್ಥೆಗಳ ಆಸ್ತಿ ತೆರಿಗೆಯನ್ನು  ನಿಗದಿಪಡಿಸಲು ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕ  ಪೌರಸಭೆಗಳ ಅಧಿನಿಯಮ 1964ರ ಕಲಂ 94(1-ಎ) (ಜೆ)ರಡಿ ಬಳಸದ ಹಾಗೂ, ಬಳಸುವ ಉದ್ದೇಶ  ಹೊಂದಿಲ್ಲದ ಖಾಲಿ ಭೂಮಿಗಳಿಗೆ ಆಸ್ತಿ ತೆರಿಗೆ ವಿನಾಯಿತಿ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next