Advertisement

ಸದ್ಯ ವಿದೇಶ ವಿಮಾನವಿಲ್ಲ; ಇನ್ನೂ ಆರು ದೇಶಗಳಿಗೆ ವಿಸ್ತರಣೆಗೊಂಡ ವಂದೇ ಭಾರತ್ ವಿಷನ್

08:02 AM Jun 01, 2020 | Hari Prasad |

ಹೊಸದಿಲ್ಲಿ: ಕೋವಿಡ್ ಲಾಕ್‌ ಡೌನ್‌ನಿಂದಾಗಿ ಕಳೆದ 2 ತಿಂಗಳಿಂದಲೂ ಸ್ಥಗಿತಗೊಂಡಿರುವ ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನ ಸೇವೆ ಸದ್ಯಕ್ಕಂತೂ ಪುನರಾರಂಭವಾಗುವುದಿಲ್ಲ.

Advertisement

ಜೂನ್‌ 30ರ ಮಧ್ಯರಾತ್ರಿಯವರೆಗೂ ಅಂತಾರಾಷ್ಟ್ರೀಯ ವಿಮಾನ ಸಂಚಾರವನ್ನು ರದ್ದುಗೊಳಿಸಿ ಶನಿವಾರ ರಾತ್ರಿ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಘೋಷಣೆ ಹೊರಡಿಸಿದೆ.

ಲಾಕ್‌ಡೌನ್‌ 5.0 ಕುರಿತು ಕೇಂದ್ರ ಗೃಹ ಇಲಾಖೆಯ ಮಾರ್ಗ ಸೂಚಿ ಹೊರಬಿದ್ದ ಬೆನ್ನಲ್ಲೇ ಡಿಜಿಸಿಎ ಈ ಘೋಷಣೆ ಮಾಡಿದೆ. ಭಾರತಕ್ಕೆ ಬರುವ ಮತ್ತು ದೇಶದಿಂದ ಹೊರಡುವ ವಿಮಾನಗಳ ಸೇವೆ ಕುರಿತು ಮುಂದಿನ ದಿನಗಳಲ್ಲಿ ವಿದೇಶ ವಿಮಾನ ಯಾನ ಕಂಪೆನಿಗಳಿಗೆ ಮಾಹಿತಿ ನೀಡಲಾಗುವುದು ಎಂದೂ ತಿಳಿಸಿದೆ.

ಏರ್‌ ಲಿಫ್ಟ್: ‘ವಂದೇಭಾರತ್‌’ ಏರ್‌ಲಿಫ್ಟ್ ನಿಂದ ಇದುವರೆಗೆ 45,000 ಮಂದಿ ಭಾರತಕ್ಕೆ ಮರಳಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ವಕ್ತಾರ ಅನುರಾಗ್‌ ಶ್ರೀವಾಸ್ತವ ಮಾಹಿತಿ ನೀಡಿದ್ದಾರೆ.

ವಿದೇಶದಲ್ಲಿ ಅತಂತ್ರರಾಗಿದ್ದ ಭಾರತೀಯರಿಗೆ ನೆರವಾಗಲು ಕೇಂದ್ರ ಸರಕಾರ ಮೇ 7, ಮೇ 16ರಿಂದ ಎರಡು ಹಂತದ ಮೆಗಾ ಏರ್‌ಲಿಫ್ಟ್ ಆರಂಭಿಸಿತ್ತು.

Advertisement

ಇದರಲ್ಲಿ 8,069 ವಲಸೆ ಕಾರ್ಮಿಕರು, 7,656 ವಿದ್ಯಾರ್ಥಿಗಳು, 5,107 ಉದ್ಯೋಗಿಗಳು ಭಾರತಕ್ಕೆ ಆಗಮಿಸಿದ್ದಾರೆ.
ಒಟ್ಟು 3,08,200 ಭಾರತೀಯ ಪ್ರಜೆ ಗಳು ತಾಯ್ನಾಡಿಗೆ ಮರಳಲು ನೋಂದಣಿ ಮಾಡಿಸಿಕೊಂಡಿದ್ದು, ವಿಮಾನ ಹಾಗೂ ಹಡಗುಗಳ ಮೂಲಕ ಅವರನ್ನು ಸ್ಥಳಾಂತರಿಸಲಾಗುತ್ತಿದೆ.

ಇದುವರೆಗೆ 429 ಏರ್‌ ಇಂಡಿಯಾ ವಿಮಾನಗಳು, 60 ದೇಶಗಳಿಗೆ ಹಾರಾಟ ನಡೆಸಿದೆ. ಭಾರತಕ್ಕೆ ಮರಳುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ವಿಮಾನಗಳನ್ನು ಏರ್‌ಲಿಫ್ಟ್ ಗೆ ಬಳಸಿಕೊಳ್ಳಲು ಸರಕಾರ ನಿರ್ಧ ರಿಸಿದೆ.

ಮತ್ತೆ 6 ದೇಶಗಳಿಗೆ ವಿಮಾನ: ಜೂ.4- 6ರ ನಡುವೆ ಒಟ್ಟು 6 ದೇಶಗಳಿಗೆ ‘ವಂದೇ ಭಾರತ್‌’ ವಿಮಾನಗಳು ಹಾರಾಟ ನಡೆಸಲಿವೆ.

Advertisement

Udayavani is now on Telegram. Click here to join our channel and stay updated with the latest news.

Next