Advertisement

ಸಂವಿಧಾನದ ಮೇಲೆ ಚರ್ಚೆಗೆ ನಿರ್ಧಾರ: ಸ್ಪೀಕರ್‌ ಕಾಗೇರಿ

11:07 PM Mar 01, 2020 | Team Udayavani |

ಬೆಂಗಳೂರು: ಸಂವಿಧಾನ ರಚನಾ ಸಮಿತಿಯು ಸಂವಿಧಾ ನಕ್ಕೆ ಅನುಮೋದನೆ ನೀಡಿ 70 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನ ಮಂಡಲ ಅಧಿವೇಶನದಲ್ಲಿ ಎರಡು ದಿನಗಳ ಕಾಲ ಸಂವಿಧಾನದ ಮೇಲೆ ಚರ್ಚೆಗೆ ನಿರ್ಧ ರಿಸಲಾಗಿದೆ. ಇದೇ ಮೊದಲ ಬಾರಿಗೆ ವಿಧಾನ ಮಂಡಲ ಅಧಿವೇಶನ ಸಂದರ್ಭದಲ್ಲಿ ಸಂವಿಧಾನ ಕುರಿತ ಚರ್ಚೆ ನಿಗದಿಪಡಿಸಲಾಗಿದೆ.

Advertisement

ಕಲಾಪ ಸಲಹಾ ಸಮಿತಿ ಯಲ್ಲೂ ಈ ಕುರಿತು ಚರ್ಚಿಸಿ ಆಡಳಿತ ಹಾಗೂ ಪ್ರತಿಪಕ್ಷ ಒಪ್ಪಿಗೆ ಸೂಚಿ ಸಿವೆ. ಸಂವಿಧಾನ ರಚನಾ ಕರಡು ಸಮಿತಿಯು ಭಾರತದ ಸಂವಿಧಾನಕ್ಕೆ 1946 ನವೆಂಬರ್‌ 26ರಂದು ಒಪ್ಪಿಗೆ ನೀಡಿದ್ದು, 1950ರ ಜ.26ರಿಂದ ಸಂವಿಧಾನ ಜಾರಿಗೆ ಬಂದಿದೆ. ಸಂವಿಧಾನ ಜಾರಿಯಾಗಿ 70 ವರ್ಷ ಪೂರ್ಣ ಗೊಂಡಿರುವ ಹಿನ್ನೆಲೆ ಯಲ್ಲಿ ಸಂವಿಧಾನದ ಆಶಯ, ಉದ್ದೇಶಗಳ ಚರ್ಚೆಗೆ ವಿಧಾನ ಮಂಡಲ ಅಧಿವೇಶನದಲ್ಲಿ ಮಂಗಳವಾರ ಮತ್ತು ಬುಧವಾರ ಅವಕಾಶ ಮಾಡಿಕೊಡ ಲಾಗಿದೆ.

ಸಂವಿಧಾನದ ಪರಿಪಾಲನೆಯಲ್ಲಿ ನಮ್ಮ ಜವಾಬ್ದಾರಿ ಗಳು ಏನು ಎಂಬು ದನ್ನು ಅರಿತುಕೊಳ್ಳಲು ಮತ್ತು ಒಟ್ಟಾರೆಯಾಗಿ ಸಂವಿಧಾನದ ಚರ್ಚೆಯೂ ರಾಜಕೀಯ, ರಾಜಕೀಯ ಪಕ್ಷಗಳ ಚರ್ಚೆಗಿಂತ ಮೇಲ್ಪಟ್ಟಿರಬೇಕು ಎಂಬ ಉದ್ದೇಶದಿಂದ ಅವಕಾಶ ಮಾಡಿಕೊಡಲಾಗಿದೆ ಎಂದು ವಿಧಾನಸಭಾ ಸ್ಪೀಕರ್‌ ವಿಶ್ವೇಶರ ಹೆಗಡೆ ಕಾಗೇರಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next