ನೆಲಮಂಗಲ: ತಾಲೂಕಿನಲ್ಲಿ ಕೋವಿಡ್ 19 ದಿನದಿಂದ ದಿನಕ್ಕೆ ರಣಕೇಕೆ ಹಾಕುತ್ತಿದ್ದು ಜು.7ರ ಹೆಲ್ತ್ ಬುಲೆಟಿನ್ ಪ್ರಕಾರ 61ಕ್ಕೆ ಏರಿಕೆಯಾಗಿದ್ದರೆ 4ಜನ ಮೃತಪಟ್ಟ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ವರ್ತಕರು ಸ್ವಯಂ ಲಾಕ್‌ಡೌನ್‌ಗೆ ಮುಂದಾಗಿದ್ದಾರೆ.
ತಾಲೂಕಿನಲ್ಲಿರುವ ದಿನಸಿ ವರ್ತಕರು, ಔಷಧಿ ವ್ಯಾಪಾ ರಿಗಳ ಸಂಘ, ಜವಳಿ ವರ್ತಕರು, ಛಾಯಾಚಿತ್ರ ಹಾಗೂ ವಿಡಿಯೋಗ್ರಾಫರ್ ಸಂಘ, ಚಿನ್ನ ಬೆಳ್ಳಿ ವರ್ತಕರು ಸೇರಿ ದಂತೆ ವಿವಿಧ ವ್ಯಾಪಾರಿಗಳು ಲಾಕ್‌ಡೌನ್ ಮಾಡಿಕೊಂ ಡಿದ್ದು ಜನರ ಅನುಕೂಲಕ್ಕಾಗಿ ನಿಗದಿತ ಸಮಯದಲ್ಲಿ ಪಟ್ಟಣದಲ್ಲಿ ವಹಿವಾಟು ಮಾಡಲು ನಿರ್ಧರಿಸಿದ್ದಾರೆ.
ಅರ್ಧ ದಿನಬಂದ್: ಜು.9ರಿಂದ ಜು.23ರವರೆಗೂ ಬೆಳಗ್ಗೆ 7ರಿಂದ ಮಧ್ಯಾಹ್ನ 1.30ರವರೆಗೆ ಮಾತ್ರ ವ್ಯಾಪಾರ ವಹಿವಟು ನಡೆಯಲಿದ್ದು ಛಾಯಾಚಿತ್ರ , ವಿಡಿಯೋ ಗ್ರಾಫರ್‌ಗಳು ಹಾಗೂ ಚಿನ್ನಬೆಳ್ಳಿ ಅಂಗಡಿ 15 ದಿನ ಬೆಳಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆವರೆಗೂ ವ್ಯಾಪಾರ , ಜವಳಿಯವರು ಸೋಮವಾರದವರೆಗೂ ಎಲ್ಲಾ ಅಂಗಡಿ ಲಾಕ್ ಮಾಡಲಿದ್ದಾರೆ. ಜು.9ರ ಮಧ್ಯಾಹ್ನದಿಂದ ಅಕ್ಷರಶಃ ತಾಲೂಕು ಸ್ವಯಂಪ್ರೇರಿತ ಬಂದ್ ನಡೆಸಲು ಮುಂದಾಗಿದ್ದಾರೆ.
ಪ್ರಚಾರ: ವರ್ತಕರ ಸಂಘದಿಂದ ಕೋವಿಡ್ 19 ಅರಿವು ಹಾಗೂ ವ್ಯಾಪಾರಕ್ಕೆ ಸಮಯ ನಿಗದಿ ಕುರಿತಾಗಿ ಬುಧವಾರ ಪಟ್ಟಣಾದ್ಯಂತ ಆಟೋ ಮೂಲಕ ಕರಪತ್ರ ಹಂಚಿ ಪ್ರಚಾರ ಮಾಡಲಾಯಿತು.
ಗುಣಮುಖ: 61 ಜನರಲ್ಲಿ ನಗರದ ಕೋವಿಡ್ ಆಸ್ಪತ್ರೆ ಯಲ್ಲಿ 12 ಜನ ಚಿಕಿತ್ಸೆ ಪಡೆಯುತ್ತಿದ್ದರೆ ಪಾಸಿಟಿವ್ ಬಂದ 13 ಜನ ಗುಣಮುಖವಾಗಿ ಹೋಮ್ ಕ್ವಾರಂಟೈನ್‌ನಲ್ಲಿ ಇದ್ದಾರೆ.
ಒಗ್ಗಟ್ಟಿನ ಮಂತ್ರ: ತಾಲೂಕಿನ ವರ್ತಕರ ಸಂಘದ ತಾಲೂಕು ಅಧ್ಯಕ್ಷ ನಾಗರಾಜು, ಛಾಯಾಚಿತ್ರ ಹಾಗೂ ವಿಡಿಯೋ ಗ್ರಾಫರ್‌ಗಳ ಸಂಘದ ತಾಲೂಕು ಅಧ್ಯಕ್ಷ ಬೈರ ನಹಳ್ಳಿಪ್ರಕಾಶ್, ಜವಳಿ ವ್ಯಾಪಾರಿಗಳ ಸಂಘದ ತಾಲೂಕು ಅಧ್ಯಕ್ಷ ಪ್ರಮೋದ್, ಚಿನ್ನಬೆಳ್ಳಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ವೇಣುಗೋಪಾಲ್ ಒಮ್ಮತದ ತೀರ್ಮಾನ ತೆಗೆದುಕೊಂಡಿದ್ದಾರೆ.