Advertisement

ಡಿ.10: ದುಬೈ ದಸರಾ- ದಸರಾ ಪೋಸ್ಟರ್‌ ಮತ್ತು ಜೆರ್ಸಿ ಅನಾವರಣ

12:39 PM Dec 09, 2023 | Team Udayavani |

ಅಬುಧಾಬಿ: ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಪ್ರಯುಕ್ತ ಹೆಮ್ಮೆಯ ದುಬೈ ಕನ್ನಡ ಸಂಘವು ಆಯೋಜಿಸಿರುವ 6ನೇ ವರ್ಷದ ದುಬೈ ದಸರಾ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕೋತ್ಸವ ಕಾರ್ಯಕ್ರಮದ ಪೋಸ್ಟರ್‌ ಮತ್ತು ಜರ್ಸಿಯನ್ನು ಇತ್ತೀಚೆಗೆ ಯೂನಿಕ್‌ ವರ್ಲ್ಡ್ ಸೆಂಟರ್‌ನಲ್ಲಿ ಸಂಘದ ಪದಾಧಿಕಾರಿಗಳು ಮತ್ತು ದಸರಾ ಕಾರ್ಯಕ್ರಮಕ್ಕೆ ಸ್ವಯಂ ಸೇವಕರಾಗಿ ಸೇರಲು ಆಗಮಿಸಿದವರು ಜತೆ ಸೇರಿ ಬಿಡುಗಡೆಗೊಳಿಸಿದರು. ಸಭೆಯ ಅಧ್ಯಕ್ಷತೆಯನ್ನು ಸಂಘದ ಉಪಾಧ್ಯಕ್ಷರಾದ ಹಾದಿಯ ಮಂಡ್ಯ ಅವರು ವಹಿಸಿಕೊಂಡಿದ್ದರು.

Advertisement

ಸಂಘದ ಸಮಿತಿ ಸದಸ್ಯರಾದ ವಿಷ್ಣುಮೂರ್ತಿ ಮೈಸೂರು ಅವರು ಸ್ವಯಂ ಸೇವಕರಾಗಲು ಆಗಮಿಸಿದವರಿಗೆ ಸ್ವಾಗತ ಕೋರಿದರು. ಸಭೆಯಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಸುದೀಪ್‌ ದಾವಣಗೆರೆ, ಮುಖ್ಯ ಕಾರ್ಯದರ್ಶಿ ರಫೀಕಲಿ ಕೊಡಗು, ಸಮಿತಿ ಸದಸ್ಯರುಗಳಾದ ಅನಿತಾ ಬೆಂಗಳೂರು, ವರದರಾಜ್‌ ಕೋಲಾರ, ಅಕ್ರಮ್‌ ಕೊಡಗು, ನಜೀರ ಮಂಡ್ಯ, ಪ್ರತಾಪ್‌ ಮಡಿಕೇರಿ ಮುಂತಾದವರು ಉಪಸ್ಥಿತರಿದ್ದರು. ದಸರಾ ಕಾರ್ಯಕ್ರಮವು ಡಿ.10ರಂದು ಎಥಿಸಲಾತ್‌ ನ್ಪೋìಟ್ಸ್‌ ಅಕಾಡೆಮಿಯಲ್ಲಿ ಬೆಳಗ್ಗೆ ನಡೆಯಲಿದ್ದು ಸಂಜೆ ತಾಯ್ನಾಡಿನಿಂದ ಆಗಮಿಸುವ ಹೆಸರಾಂತ ಕಲಾವಿದರಿಂದ ಸಂಗೀತ ಸಂಜೆ ಮೂಡಿಬರಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಪ್ರಶಸ್ತಿ ಪ್ರದಾನ
ದಸರಾ ಕಾರ್ಯಕ್ರಮದ ಕೇಂದ್ರಬಿಂದುವಾದ “ದುಬೈ ಕ್ರೀಡಾ ರತ್ನ ಪ್ರಶಸ್ತಿಯನ್ನು ಮಾಜಿ ಭಾರತೀಯ ವಿಶೇಷ ಚೇತನ ಕ್ರೀಡಾತಾರೆ ಡಾ| ಮಾಲತಿ ಹೊಳ್ಳ ಅವರಿಗೆ ಮತ್ತು ಭಾರತದ ಮಾಜಿ ಕ್ರಿಕೆಟ್‌ ಆಟಗಾರ ದೊಡ್ಡ ಗಣೇಶ್‌ ಅವರಿಗೆ ಪ್ರದಾನ ಮಾಡಲಾಗುವುದು. ಅಶ್ವಿ‌ನಿ ನಾಚಪ್ಪ, ಡಾ| ಸಿ.ಹೊನ್ನಪ್ಪ ಗೌಡ, ಎಸ್‌.ವಿ. ಸುನಿಲ್‌ ಈ ಪ್ರಶಸ್ತಿಯ ಪೂರ್ವ ಪುರಸ್ಕೃತರು.

ದುಬೈ ದಸರಾ ಪ್ರಯುಕ್ರ ವಿವಿಧ ಕ್ರೀಡೆಗಳನ್ನು ಆಯೋಜಿಸುವುದರ ಮೂಲಕ ಮಕ್ಕಳು, ಮಹಿಳೆಯರು ಮತ್ತು ಪುರುಷರ ಎಲ್ಲ ವಯಸ್ಕರಿಗೂ ಕ್ರೀಡಾ ರಂಜನೆಯ ಅವಕಾಶ ಮಾಡಿಕೊಟ್ಟಿದ್ದಾರೆ ಹಾಗೂ ಅಂತ್ಯಾಕ್ಷರಿ, ಕನ್ನಡ ರಸಪ್ರಶ್ನೆ, ಗೊಂಬೆ ಸ್ಪರ್ಧೆ, ಕವಿಗೋಷ್ಠಿ ಸಾಹಿತ್ಯಾಸಕ್ತರ ಮನ ತಣಿಸಲಿವೆ ಹಾಗೆ ರಂಗೋಲಿ ಸ್ಪರ್ಧೆ ಮತ್ತು ದಸರಾ ಗೊಂಬೆ ಸ್ಪರ್ಧೆ ಸಾಂಸ್ಕೃತಿಕ‌ ರಂಜನೆ ನೀಡಲಿದೆ.

ಡಿ.10ಎಂದು ದುಬೈನ ಎಟಿಸಲಾತ್‌ ಅಕಾಡೆಮಿಯಲ್ಲಿ ನಡೆಯುವ ಕ್ರೀಡೋತ್ಸವಕ್ಕೆ ಎಲ್ಲ ಕ್ರೀಡಾಪಟುಗಳು ಮತ್ತು ಸಾಂಸ್ಕೃತಿಕ ಸ್ಪರ್ಧೆಯ ಸ್ಪರ್ಧಿಗಳು ಕಾತುರದಿಂದ ತಮ್ಮ ಪ್ರತಿಭೆಯನ್ನು ತೋರಲು ಕಾತುರರಾಗಿದ್ದಾರೆ. ಚಂದನವನದ ತಾರೆಗಳಾದ ಹೇಮಂತ್‌, ಹರ್ಷವರ್ಧನ್‌, ರಾಹುಲ್‌ ಡಿಟ್ಟೋ , ದಿವ್ಯಾ ಅವರುಗಳು ಸಂಗೀತ ಸಂಜೆ ಮೂಲಕ ರಂಜಿಸಲಿದ್ದಾರೆ. ದುಬೈಯ ರಾಜಮನೆತನದವರು ಅತಿಥಿಗಳಾಗಿ ಸಮಾರಂಭಕ್ಕೆ ಆಗಮಿಸಲು ಸಮ್ಮತಿಸಿ ತಮ್ಮ ಅಪೂರ್ವ ಬೆಂಬಲ ಸೂಚಿಸಿದ್ದಾರೆ.

Advertisement

ಸಭೆಯಲ್ಲಿ ಅಧ್ಯಕ್ಷ ಮಧು ದಾವಣಗೆರೆ, ಉಪಾಧ್ಯಕ್ಷೆ ಹಾದಿಯ ಮಂಡ್ಯ, ಮಮತಾ ಮೈಸೂರು, ಪಲ್ಲವಿ ದಾವಣಗೆರೆ, ವಿಷ್ಣುಮೂರ್ತಿ ಮೈಸೂರು, ಡಾ| ಸವಿತಾ ಮೈಸೂರು, ಶಂಕರ್‌ ಬೆಳಗಾವಿ, ಮೊಹಿದ್ದೀನ್‌ ಹುಬ್ಬಳ್ಳಿ, ವರದರಾಜ್‌ ಕೋಲಾರ , ಚೇತನ್‌ ಬೆಂಗಳೂರು, ಸ್ವಾತಿ ಚಿತ್ರದುರ್ಗ, ಹಾದಿ ಕುಂದಾಪುರ, ರಜಿನಿ ಬೆಂಗಳೂರು ಮತ್ತು ಉಪಸಮಿತಿ ಸದಸ್ಯರು ಉಪಸ್ಥಿತರಿದ್ದು ಈ ಕಾರ್ಯಕ್ರಮಕ್ಕೆ ಯುಎಇ ದೇಶದ ಎಲ್ಲ ಕನ್ನಡಿಗರಿಗೆ ಆತ್ಮೀಯ ಸ್ವಾಗತ ಕೋರಿದರು.

 

Advertisement

Udayavani is now on Telegram. Click here to join our channel and stay updated with the latest news.

Next