ಉಡುಪಿ: ಬಿಜೆಪಿ ಉಡುಪಿ ನಗರ-ಇದರ ಆಶ್ರಯದಲ್ಲಿ ಉಡುಪಿ ನಗರ ಮತ್ತು ವಾಲಿಬಾಲ್ ಫ್ರೆಂಡ್ಸ್ ಹನುಮಂತನಗರ ಇವರ ಸಹಭಾಗಿತ್ವದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆ ಪ್ರಯುಕ್ತ ರಾಷ್ಟ್ರಮಟ್ಟದ ಆಯ್ದ ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ “ಅಟಲ್ ಟ್ರೋಫಿ’ ನಿಟ್ಟೂರು ಸಿಲಾಸ್ ಇಂಟರ್ ನ್ಯಾಶನಲ್ ಶಾಲೆಯ ಮೈದಾನದಲ್ಲಿ ಡಿ. 25ರಂದು ರಾತ್ರಿ 8ಕ್ಕೆ ನಡೆಯಲಿದೆ. ಶಾಸಕ ಕೆ. ರಘುಪತಿ ಭಟ್ ಅವರು ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಇದನ್ನು ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಕೂಟವನ್ನು ಉದ್ಘಾಟಿಸಲಿದ್ದಾರೆ. ರಾಷ್ಟ್ರೀಯ ಮೋರ್ಚಾ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಭಾಗವಹಿಸಲಿದ್ದಾರೆ. ಇದರಲ್ಲಿ ಕೇರಳ, ತೆಲಂಗಾಣ, ಮಹಾರಾಷ್ಟ್ರ, ಹೈದರಾಬಾದ್, ಕರ್ನಾಟಕ ಸಹಿತ ಆಯ್ದ 9 ತಂಡಗಳು ಭಾಗವಹಿಸಲಿವೆ.
ಮಹಿಳಾ ಮತ್ತು 22ರ ವಯೋಮಿತಿಯ ಜಿಲ್ಲಾ ಮಟ್ಟದ ವಾಲಿಬಾಲ್ ಪ್ರದರ್ಶನ ಪಂದ್ಯಗಳು ಆಹ್ವಾನಿತ ತಂಡಗಳ ನಡುವೆ ನಡೆಯಲಿವೆ ಎಂದರು.
ಇದನ್ನೂ ಓದಿ:ವಿಜಯ್ ಹಜಾರೆ ಟ್ರೋಫಿ-2021: ಕರ್ನಾಟಕ ವಿರುದ್ಧ ಮುಗ್ಗರಿಸಿದ ಮುಂಬಯಿ
ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ್, ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರೋಷನ್ ಶೆಟ್ಟಿ, ನಗರಸಭಾ ಸದಸ್ಯ ಸಂತೋಷ್ ಜತ್ತನ್, ವಾಲಿಬಾಲ್ ಫ್ರೆಂಡ್ಸ್ ಹನುಮಂತನಗರ ಇದರ ಅಧ್ಯಕ್ಷ ದಿನೇಶ್ ಕುಂದರ್, ಮೂಡುಬೆಟ್ಟು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿಶ್ವನಾಥ್ ಪೂಜಾರಿ ಉಪಸ್ಥಿತರಿದ್ದರು.