ಮುಂಬೈ: ಯಾವುದೇ ರೀತಿಯ ಸಾಲದ ಬಿಕ್ಕಟ್ಟು ಇಲ್ಲವೇ ಇಲ್ಲ. ಈ ಬಗ್ಗೆ ಇರುವ ವರದಿಗಳು ಆಧಾರ ರಹಿತ ಎಂದು ಅದಾನಿ ಗ್ರೂಪ್ ಶನಿವಾರ ಸ್ಪಷ್ಟಪಡಿಸಿದೆ.
ಇದಲ್ಲದೆ 2028ರ ಒಳಗಾಗಿ ಮೆಟಲ್ಸ್, ಗಣಿ, ಡೇಟಾ ಸೆಂಟರ್, ವಿಮಾನ ನಿಲ್ದಾಣಗಳು, ಸರಕು ಸಾಗಣೆ ಉದ್ದಿಮೆಗಳನ್ನು 2028ರ ಒಳಗಾಗಿ ಸ್ವತಂತ್ರ ಸಂಸ್ಥೆಗಳನ್ನಾಗಿ ವಿಭಾಗಿಸಲು ಚಿಂತನೆ ನಡೆಸಲಾಗಿದೆ ಎಂದು ಅದಾನಿ ಗ್ರೂಪ್‌ನ ಮುಖ್ಯ ಹಣಕಾಸು ಅಧಿಕಾರಿ ಜುಗ್‌ಶೇಂದರ್ ಸಿಂಗ್ ಹೇಳಿದ್ದಾರೆ.
ಸ್ವತಂತ್ರವಾಗಿ ಪ್ರತಿಯೊಂದು ವಿಭಾಗವೂ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವ ಸಾಮರ್ಥ್ಯ ಇರಬೇಕು. 2025ರಿಂದ 2028ರ ಒಳಗಾಗಿ ಉತ್ತಮ ಆಡಳಿತ ನಿರ್ವಹಣೆ ಮಾಡುವ ತಂಡವನ್ನೂ ಹೊಂದಿರಬೇಕಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಅದಾನಿ ಗ್ರೂಪ್ 2022 ಮಾ.31ಕ್ಕೆ ಮುಕ್ತಾಯವಾದ ವಿತ್ತೀಯ ವರ್ಷದಲ್ಲಿ 2.2 ಶತಕೋಟಿ ರೂಪಾಯಿ ಸಾಲ ಹೊಂದಿದೆ. ಒಟ್ಟಾರೆಯಾಗಿ ಹೇಳುವುದಿದ್ದರೆ ಶೇ.40 ಸಾಲದ ಪ್ರಮಾಣ ಹೆಚ್ಚಾಗಿದೆ. ಆದರೆ, ಯಾವುದೇ ತೊಂದರೆ ಇಲ್ಲ ಎಂದು ಸಿಂಗ್ ಹೇಳಿದ್ದಾರೆ.