Advertisement

Death Anniversary:‌ ಖ್ಯಾತ ಹಿಂದೂ ತತ್ವಜ್ಞಾನಿ ದೇಬೇಂದ್ರನಾಥ್‌ ಟ್ಯಾಗೋರ್ ಬಗ್ಗೆ ಗೊತ್ತಾ?

01:35 PM Jan 19, 2024 | Team Udayavani |

ನವದೆಹಲಿ: ದೇಬೇಂದ್ರನಾಥ್‌(ದೇವೇಂದ್ರನಾಥ್) ಟ್ಯಾಗೋರ್‌ ಬಗ್ಗೆ ಗೊತ್ತಾ…ಇವರು ನೋಬೆಲ್‌ ಸಾಹಿತ್ಯ ಪುರಸ್ಕೃತ ಮಹಾ ವಿದ್ವಾಂಸ ರವೀಂದ್ರನಾಥ್‌ ಟ್ಯಾಗೋರ್‌ ಅವರ ತಂದೆ. ಹಿಂದೂ ತತ್ವಜ್ಞಾನಿ, ಧಾರ್ಮಿಕ, ಸಮಾಜ ಸುಧಾರಕ ದೇಬೇಂದ್ರನಾಥ್‌ ಅವರು 1861ರ ಮೇ 7ರಂದು ಕೋಲ್ಕತಾದಲ್ಲಿ ಜನಿಸಿದ್ದರು.

Advertisement

ಇದನ್ನೂ ಓದಿ:Shimoga; ನನ್ನ ಎದೆ ಸೀಳಿದರೂ ರಾಮನಿದ್ದಾನೆ,ನಾನೂ ಅಯೋಧ್ಯೆಗೆ ಹೋಗುತ್ತೇನೆ: ಪ್ರದೀಪ್ ಈಶ್ವರ್

ಶ್ರೀಮಂತಿಕೆಯಲ್ಲಿ ಬೆಳೆದಿದ್ದ ದೇಬೇಂದ್ರನಾಥ್‌ ಅವರು ಯುವಕರಾಗಿದ್ದಾಗಲೇ ತೀಕ್ಷ್ಣವಾದ ಧಾರ್ಮಿಕ ಚಿಂತನೆಯನ್ನು ಹೊಂದಿದ್ದರು. ಜನವರಿ 19 ಅವರ ಪುಣ್ಯತಿಥಿಯಾಗಿದ್ದು, ಅವರ ಕುರಿತ ಕಿರು ಟಿಪ್ಪಣಿ ಇಲ್ಲಿದೆ…

ದೇಬೇಂದ್ರನಾಥ್‌ ಟ್ಯಾಗೋರ್‌ ಕುರಿತ ಐದು ಕುತೂಹಲಕಾರಿ ಅಂಶಗಳು:

1)ದೇಬೇಂದ್ರನಾಥ್‌ ಟ್ಯಾಗೋರ್‌ ಅವರು ಮನೆಯಲ್ಲೇ ಪ್ರಾಥಮಿಕ ಶಿಕ್ಷಣ ಪಡೆದ ನಂತರ 1827ರಲ್ಲಿ ಆಂಗ್ಲೋ-ಹಿಂದೂ ಕಾಲೇಜ್‌ ಗೆ ನೋಂದಾಯಿಸಿಕೊಂಡಿದ್ದರು. ಕಾಲೇಜು ಶಿಕ್ಷಣದ ನಂತರ ಟ್ಯಾಗೋರ್‌ ತತ್ವಶಾಸ್ತ್ರ ಮತ್ತು ಧರ್ಮದ ಬಗ್ಗೆ ಹೆಚ್ಚಿನ ಒಲವು ತೋರತೊಡಗಿದ್ದರು.

Advertisement

2)ತನ್ನ ಗೆಳೆಯ ರಾಮ ಮೋಹನ್‌ ರಾಯ್‌ ಅವರಿಂದ ದೇಬೇಂದ್ರನಾಥ್‌ ಅವರು ಹೆಚ್ಚಿನ ಪ್ರಭಾವಕ್ಕೊಳಗಾಗಿದ್ದರು. ನಂತರ ಟ್ಯಾಗೋರ್‌ ಪಂಡಿತ್‌ ರಾಮ್‌ ಚಂದ್ರ ವಿದ್ಯಾವಾಗೀಶ್‌ ಅವರ ಮೇಲ್ವಿಚಾರಣೆಯಲ್ಲಿ ತತ್ವರಂಜಿನಿ ಸಭಾವನ್ನು ಹುಟ್ಟುಹಾಕಿದ್ದರು. ನಂತರ ಅದನ್ನು ತತ್ವಬೋಧಿನಿ ಸಭಾ ಎಂದು ಮರುನಾಮಕರಣ ಮಾಡಲಾಯಿತು.

3) 1842ರ ಡಿಸೆಂಬರ್‌ 21ರಂದು ದೇಬೇಂದ್ರನಾಥ್‌ ಅವರು ಬ್ರಹ್ಮ ಸಮಾಜದ ಮೂಲಕ ಸಾಮಾಜಿಕ ಸುಧಾರಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಆರಂಭಿಸಿದ್ದರು. ದೇವೇಂದ್ರನಾಥರು ಪೂಜೆ, ಪುನಸ್ಕಾರಗಳನ್ನು ನಿಲ್ಲಿಸಿ ಮಾಘ ಉತ್ಸವ, ಹೊಸ ವರ್ಷ, ದೀಕ್ಷಾ ದಿನ ಮೊದಲಾದ ಹಬ್ಬಗಳನ್ನು ಪರಿಚಯಿಸಿದ್ದರು.

4)1867ರಲ್ಲಿ ಬಿರ್ಭುಮ್‌ ನಲ್ಲಿ ಭೂಬಂದಗ ಎಂಬ ದೊಡ್ಡ ಭೂಮಿಯನ್ನು ಖರೀದಿಸಿ ಆಶ್ರಮವನ್ನು ಸ್ಥಾಪಿಸಿದ್ದರು. ಈ ಆಶ್ರಮವು ಇಂದಿನ ಪ್ರಸಿದ್ಧ ಶಾಂತಿನಿಕೇತನವಾಗಿದೆ. ದೇಬೇಂದ್ರನಾಥ್‌ ಕೆಲಕಾಲ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. 1851ರ ಅಕ್ಟೋಬರ್‌ 31ರಂದು ಬ್ರಿಟಿಷ್‌ ಇಂಡಿಯನ್‌ ಅಸೋಸಿಯೇಷನ್‌ ಸ್ಥಾಪನೆಯಾದಾಗ ಅವರನ್ನು ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿತ್ತು.

5) ಶಾಂತಿನಿಕೇತನವನ್ನು ಕಿರಿಯ ಪುತ್ರ ರವೀಂದ್ರನಾಥ್‌ ಟ್ಯಾಗೋರ್‌ ಅವರ ಸೂಚನೆಯಂತೆ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯವಾಗಿ ರೂಪುಗೊಂಡಿತ್ತು. ದೇಬೇಂದ್ರನಾಥ್‌ ಟ್ಯಾಗೋರ್‌ ಅವರು ಶಾರದಾ ಸುಂದರಿ ದೇವಿಯನ್ನು ವಿವಾಹವಾಗಿದ್ದರು. ದಂಪತಿಗೆ ದ್ವಿಜೇಂದ್ರನಾಥ್‌ ಟ್ಯಾಗೋರ್‌, ಸತ್ಯೇಂದ್ರನಾಥ್‌ ಟ್ಯಾಗೋರ್‌, ರವೀಂದ್ರನಾಥ್‌ ಟ್ಯಾಗೋರ್‌ ಸೇರಿದಂತೆ

Advertisement

Udayavani is now on Telegram. Click here to join our channel and stay updated with the latest news.

Next