Advertisement
ಕುಟ್ಟದ ನಿವಾಸಿ, ಟ್ಯಾಕ್ಸಿ ಚಾಲಕ ಮಣಿ (48) ಅವರು ಬುಧವಾರ ಮುಂಜಾನೆ ಹೃದಯಾಘಾತಕ್ಕೆ ಒಳಗಾಗಿ ತಾವೇ ವಾಹನ ಚಲಾ ಯಿಸಿಕೊಂಡು ಕುಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದಿದ್ದರು. ಆದರೆ ಅಲ್ಲಿ ವೈದ್ಯರು ಹಾಗೂ ಶುಶ್ರೂಷಕಿಯರು ಇಲ್ಲದ ಕಾರಣ ಸಕಾಲದಲ್ಲಿ ಚಿಕಿತ್ಸೆ ಲಭಿಸಿರಲ್ಲ. ಸ್ಥಳದಲ್ಲಿದ್ದ ಯುವಕರು ಅವರನ್ನು ಉಪಚರಿಸಿ ಖಾಸಗಿ ವೈದ್ಯರ ಬಳಿಗೆ ಕರೆದೊಯ್ದರಾದರೂ, ಅವರು ಕೊನೆಯುಸಿರೆಳೆದರು.
ಸಾರ್ವಜನಿಕರು ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆದುಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ತಾಲೂಕು ವೈದ್ಯಾಧಿಕಾರಿ ಡಾ| ಯತಿರಾಜ್ ಅವರು ಪ್ರತಿಭಟನಕಾರರೊಂದಿಗೆ ಮಾತನಾಡಿ, ಈಗ ವಾರದ ಎರಡು ದಿನ ಕುಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಾ| ಸತೀಶ್ ಅವರನ್ನು ವಾರದ ಎಲ್ಲ ದಿನಗಳಲ್ಲೂ ಇಲ್ಲಿ ಮುಂದುವರಿಸಲಾಗುವುದು. ಹುದಿಕೇರಿ, ಬಾಳೆಲೆ ಹಾಗೂ ಶ್ರೀಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಪ್ರತಿ ಎರಡು ದಿನಗಳಿಗೊಮ್ಮೆ ರಾತ್ರಿ ಪಾಳಿಯಲ್ಲಿ ಈ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವಂತೆ ಮಾಡುವುದಾಗಿ ಭರವಸೆ ನೀಡಿದರು.