ನವ ದೆಹಲಿ : ಕಳೆದ ತಿಂಗಳಿನಲ್ಲಿ ಕೆಲವು ತೃಣಮೂಲ ಕಾರ್ಯಕರ್ತರಿಂದ ಥಳಿಸಲ್ಪಟ್ಟಿದ್ದರೆಂದು ಹೇಳಲಾದ ಬಿಜೆಪಿಯ ಕಾರ್ಯಕರ್ತನೋರ್ವರ ತಾಯಿ ಶೋವಾ ಮಜುಂದಾರ್ ಅವರು ಇಂದು(ಮಾ. 29) ನಿಧನರಾಗಿದ್ದಾರೆ.
ಪಶ್ಚಿಮ ಬಂಗಾಳ ಈಗಾಗಲೇ ಕೆಟ್ಟ ರಾಜಕೀಯ ವಾತಾವರಣವನ್ನು ಹೊಂದಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನೆಚ್ಚಿನ ಘೋಷಣೆಯಾದ “ಮಾ, ಮತಿ, ಮನುಷ್” 85 ವರ್ಷದ ಸಾವಿನೊಂದಿಗೆ ರಕ್ತಸಿಕ್ತವಾಗಿದೆ ಎಂದು ವಿರೋಧ ಪಕ್ಷ ಅಭಿಪ್ರಾಯ ಪಟ್ಟಿದೆ.
ಓದಿ : ಏಪ್ರಿಲ್ 2ರಿಂದ ಓದು-ಬರಹ ಅಭಿಯಾನ ಆರಂಭ: ಸಚಿವ ಸುರೇಶ್ ಕುಮಾರ್
“ಟಿಎಂಸಿ ಗೂಂಡಾಗಳಿಂದ ಕ್ರೂರವಾಗಿ ಥಳಿಸಲ್ಪಟ್ಟ ಬಂಗಾಳದ ಮಗಳು ಶೋವಾ ಮಜುಂದಾರ್ ಜಿ ಅವರ ನಿಧನದ ಬಗ್ಗೆ ಬೇಸರವಾಗಿದೆ. ಅವರ ಕುಟುಂಬದ ನೋವು ಮಮತಾ ದೀದಿಯನ್ನು ದೀರ್ಘಕಾಲ ಕಾಡುತ್ತದೆ. ಬಂಗಾಳ ರಾಜ್ಯ ಹಿಂಸಾಚಾರ ರಹಿತಕ್ಕಾಗಿ ಹೋರಾಡಲಿದೆ, ಬಂಗಾಳ ನಮ್ಮ ಸಹೋದರಿಯರು ಮತ್ತು ತಾಯಂದಿರ ರಕ್ಷಣೆಗಾಗಿ ಹೋರಾಡಲಿದೆ.” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ನಂದಿಗ್ರಾಮದಲ್ಲಿ ಚುನಾವಣೆ ಮತ ಪ್ರಚಾರ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಅಮಿತ್ ಶಾ ಅವರು ಪದೇ ಪದೆ ಯಾಕೆ ಬಂಗಾಳದ ಬಗ್ಗೆ ಮಾತನ್ನೆತ್ತುತ್ತಾರೆ ಎಂದು ತಿಳಿಯದು. ರಾಜ್ಯದಲ್ಲಿ ಎಂದಿಗೂ ನಾವು ಹಿಂಸಾಚಾರಕ್ಕೆ ಪ್ರಚೋದನೆಯನ್ನು ನೀಡುವುದಿಲ್ಲ. ಮಹಿಳೆಯರ ಮೇಲೆ ಹಿಂಸಾಚಾರ ಮಾಡಲು ನಾವು ಪ್ರೋತ್ಸಾಹ ನೀಡುವುದಿಲ್ಲ. ನನ್ನ ಸಹೋದರಿಯರ ಮೇಲೆ ಹಾಗೂ ತಾಯಂದಿರ ಮೇಲೆ ಹಿಂಸಾಚಾರ ಮಾಡಲು ನಾನು ಎಂದಿಗೂ ಪ್ರಚೋದಿಸಿಲ್ಲ. ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಅತ್ಯಾಚಾರ ಮತ್ತು ಕೊಲೆ ನಡೆದಾಗ ಯಾಕೆ ಶಾ ಮೌನ ತಾಳಿದ್ದರು..? ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನು, ಈ ಬಗ್ಗೆ ಟ್ವೀಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಟಿ ಎಮ್ ಸಿ ವಕ್ತಾರ ಡೆರೆಕ್ ಓ’ಬ್ರಿಯೆನ್, ಶೋವಾ ಮಜುಂದಾರ್ ಅವರ ಸಾವು ದುರಂತ. ದುರದೃಷ್ಟಕರ ಸಂಗತಿಯೆಂದರೆ, ಘಟನೆಯು ತನಿಖೆಯಲ್ಲಿದ್ದಾಗ ಗೃಹ ಸಚಿವರು ಅದರ ಬಗ್ಗೆ ವಿವರಿಸಲು ಮುಂದಾಗುತ್ತಾರೆ. ಅವರು ಪೊಲೀಸ್ ಪಡೆ ಮತ್ತು ಕೇಂದ್ರದ ಬಹು ಏಜೆನ್ಸಿಗಳ ಮುಖ್ಯಸ್ಥರಾಗಿದ್ದಾರೆ. ಭಾರತದ ತನಿಖಾ ಪ್ರಕ್ರಿಯೆಗೆ ಅವರು ಸ್ವಲ್ಪವಾದರೂ ಗೌರವವನ್ನು ತೋರಿಸಬೇಕಲ್ಲವೇ..? ಎಂದು ಅವರು ಹೇಳಿದ್ದಾರೆ.
ಓದಿ : ಹೋಳಿ ಶುಭಾಶಯದ ಜತೆ ಗೋಮುಖಾಸನದ ಪ್ರಯೋಜನ ತಿಳಿಸಿದ ನಟಿ ಮಲೈಕಾ