Advertisement
ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿ ವಿಶ್ವಾಸ್ (17) ಮೃತನು. ಬೆಂಗಳೂರಿನ ಹನುಮಂತ ನಗರದ ನಿವಾಸಿ ಗೋವಿಂದರಾಜು , ಲಕ್ಷ್ಮಿದಂಪತಿಯ ಪುತ್ರ ವಿಶ್ವಾಸ್, ಎನ್‌ಸಿಸಿ ಕ್ಯಾಂಪ್ ನಿಮಿತ್ತ ಸಹಪಾಠಿಗಳೊಂದಿಗೆ ರಾಮಗೊಂಡ್ಲು ಗ್ರಾಮಕ್ಕೆ ಬಂದಿದ್ದ ವೇಳೆ ದುರಂತ ಸಂಭವಿಸಿದೆ.
Related Articles
Advertisement
ಸಹಪಾಠಿಗಳಿಂದ ಅಂತಿಮ ದರ್ಶನ: ಜಯನಗರ ನ್ಯಾಷನಲ್‌ಕಾಲೇಜು ಆವರಣದಲ್ಲಿ ಮೃತ ವಿಶ್ವಾಸ್‌ನ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಸಾವಿರಾರು ಸಹಪಾಠಿಗಳು ಅಗಲಿದ ಸ್ನೇಹಿತನಿಗಾಗಿ ಕಂಬಿನಿ ಮಿಡಿದರು. ಈ ವೇಳೆ ಮೃತ ವಿಶ್ವಾಸ್ ಪೋಷಕರು ಮತ್ತು ಸಹಪಾಠಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಜತೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಕಾಲೇಜು ಸುತ್ತ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು.
“ಅಂತ್ಯ ಕ್ರಿಯೆಗಾಗಿ ವಿಶ್ವಾಸ್ ಕುಟುಂಬಕ್ಕೆ ಆಡಳಿತ ಮಂಡಳಿಯಿಂದ 50 ಸಾವಿರ ರೂ. ನೀಡಲಾಗಿದೆ. ಕುಟುಂಬಕ್ಕೆ ಇನ್ನು ಹೆಚ್ಚಿನ ಪರಿಹಾರ ಕೊಡುವ ಸಂಬಂಧ ಚರ್ಚಿಸಲು ಮಂಗಳವಾರ ಆಡಳಿತ ಮಂಡಳಿಯ ಸಭೆ ಕರೆಯಲಾಗಿದೆ. ಮಾನವೀಯತೆ ಆಧಾರದಲ್ಲಿ ಆರ್ಥಿಕ ಸಹಾಯ ಮಾಡಲಿದ್ದೇವೆ,’ ಎಂದು ನಾಗರಾಜ್ ತಿಳಿಸಿದ್ದಾರೆ.
ಸೆಲ್ಫಿ ಮುಖ್ಯವಾಯಿತಾ?: ಎನ್‌ಸಿಸಿ ಕ್ಯಾಂಪ್‌ಗೆ ತೆರಳಿದ್ದ ಮಗನ ಸಾವಿಗೆ ಕಾಲೇಜು ಆಡಳಿತ ಮಂಡಳಿ ಮತ್ತು ಎನ್‌ಸಿಸಿ ಅಧಿಕಾರಿ ಗಿರೀಶ್ ಕಾರಣ ಎಂದು ಆರೋಪಿಸಿ ಮೃತ ವಿದ್ಯಾರ್ಥಿಯ ಪೋಷಕರು ಸೋಮವಾರ ಕಾಲೇಜು ಮುಂದೆ ಪ್ರತಿಭಟಿಸಿದರು. “ನನ್ನ ಮಗ ನೀರಿನಲ್ಲಿ ಬಿದ್ದು ಮೃತಪಟ್ಟರೂ, ಎನ್‌ಸಿಸಿ ಅಧಿಕಾರಿ ಗಿರೀಶ್ ನಮಗೆ ಮಾಹಿತಿ ನೀಡಿಲ್ಲ. ಕಗ್ಗಲಿಪುರ ಠಾಣೆ ಪೊಲೀಸರು ದೂರವಾಣಿ ಮೂಲಕ ಮಗನ ಸಾವಿನ ವಿಚಾರ ತಿಳಿಸಿದರು. ನನ್ನ ಮಗ ಸಾಯುತ್ತಿದ್ದರೂ, ಆತನ ಸ್ನೇಹಿತರಿಗೆ ಸೆಲ್ಫಿ ಮುಖ್ಯವಾಯಿತಾ,’ ಎಂದು ವಿಶ್ವಾಸ್ ಪೋಷಕರು ಆಕ್ರೋಶ ವ್ಯಕಪಡಿಸಿದರು.
ಕ್ಯಾಂಪ್‌ಗೆ ಅನುಮತಿ ಪಡೆದಿರಲಿಲ್ಲ: “ನ್ಯಾಷನಲ್ ಕಾಲೇಜಿನ ಎನ್‌ಸಿಸಿ ಅಧಿಕಾರಿ ಗಿರೀಶ್, ಕ್ಯಾಂಪ್ ನಡೆಸುವ ಬಗ್ಗೆ ಪ್ರಾಂಶುಪಾಲರಿಂದಾಗಲಿ, ಎನ್‌ಸಿಸಿಯ ಹಿರಿಯ ಅಧಿಕಾರಿಯಿಂದಾಗಲೀ ಅನುಮತಿ ಪಡೆದಿಲ್ಲ. ಘಟನೆ ಭಾನುವಾರ ನಡೆದಿದ್ದು, ಸೋಮವಾರ ಬೆಳಗ್ಗೆ 8.30ರ ಸುಮಾರಿಗೆ ಪ್ರಿನ್ಸಿಪಾಲ್‌ರಿಗೆ ಕರೆ ಮಾಡಿ ವಿಶ್ವಾಸ್ ಸಾವಿನ ಮಾಹಿತಿ ನೀಡಿದ್ದಾರೆ. ಯಾರ ಅನುಮತಿ ಪಡೆದು ವಿದ್ಯಾರ್ಥಿಗಳನ್ನು ಕರೆದೊಯ್ದಿರಿ ಎನ್ನುವ ಪ್ರಶ್ನೆಗೆ ಗಿರೀಶ್ ಸ್ವಷ್ಟವಾಗಿ ಉತ್ತರ ನೀಡುತ್ತಿಲ್ಲ.
ಅದೊಂದು ಸ್ವಯಂ ಪ್ರೇರಿತ ಸ್ವತ್ಛತಾ ಕಾರ್ಯ ಎಂದು ಸಬೂಬು ಹೇಳುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುತ್ತಿದ್ದು, ಒಂದೊಮ್ಮೆ ಗಿರೀಶ್ ತಪ್ಪು ಮಾಡಿರುವುದು ಸಾಬೀತಾದರೆ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳುತ್ತೇವೆ,’ ಎಂದು ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ ಪ್ರೊ ಎಸ್.ಎನ್.ನಾಗರಾಜ ರೆಡ್ಡಿ “ಉದಯವಾಣಿ’ಗೆ ತಿಳಿಸಿದ್ದಾರೆ.