Advertisement

ವಿಷಾಹಾರ ಸೇವಿಸಿ ಒಂದೇ ಕುಟುಂಬದ ನಾಲ್ವರ ಸಾವು

06:00 AM Dec 22, 2018 | |

ಚಿತ್ರದುರ್ಗ/ದಾವಣಗೆರೆ: ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ಯಲ್ಲಿ ವಿಷ ಪ್ರಸಾದ ಸೇವಿಸಿ 16 ಮಂದಿ ಅಸುನೀಗಿದ ಪ್ರಕರಣದ ಕಹಿ ನೆನಪು ಮಾಸುವ ಮುನ್ನವೇ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹುಲಿತೊಟ್ಟಿಲು ಗ್ರಾಮದಲ್ಲಿ ಗುರುವಾರ ರಾತ್ರಿ ವಿಷಾಹಾರ ಸೇವಿಸಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ.

Advertisement

ಮನೆಯ ಯಜಮಾನ ವೃದಟಛಿ ಚಿತ್ತಪ್ಪ (80), ಮಗ ಶಶಿಧರ್‌ (45), ಮಗಳು ಮೂಕಿ ಭಾಗ್ಯಮ್ಮ (32) ಹಾಗೂ ಸೊಸೆ ಹೇಮಲತಾ (35) ಮೃತರು. ಈ ಪೈಕಿ ಚಿತ್ತಪ್ಪ ಚಿತ್ರದುರ್ಗದಲ್ಲಿ ಹಾಗೂ ಇನ್ನುಳಿದವರು ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತ ಹೇಮಲತಾ ಮಕ್ಕಳಾದ ಮುದ್ದುರಾಜ್‌(14), ಅಜೇಯಕುಮಾರ್‌ (14) ಮತ್ತು ಮೃತ ಭಾಗ್ಯಮ್ಮಳ ಪುತ್ರಿ ಸುಮಾ (13) ಸ್ಥಿತಿ ಗಂಭೀರವಾಗಿದ್ದು, ದಾವಣಗೆ ರೆಯ ಎಸ್‌ಎಸ್‌ ಹೈಟೆಕ್‌ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಕ್ಕದ ಮನೆಯವರು ಎತ್ತುಗಳಿಗೆ ಆಹಾರವಾಗಿ ನೀಡಲು ಕೊಟ್ಟಿದ್ದ ಜೋಳದ ಹಿಟ್ಟಿನಲ್ಲಿ ಮಾಡಿದ ಮುದ್ದೆಯನ್ನು ಬೆಳಗ್ಗೆ
ಮಾಡಿಟ್ಟಿದ್ದ ಅವರೆಕಾಳು ಸಾರಿನೊಂದಿಗೆ ಈ  ಏಳು ಮಂದಿ ಸೇವಿಸಿದ್ದು, ಬಳಿಕ ಅಸ್ವಸ್ಥಗೊಂಡಿದ್ದಾರೆ. ಅಡುಗೆ ಸಿದಟಛಿಪಡಿಸಿದ್ದ ಹೇಮಲತಾ ಕೂಡ ಮೃತಪಟ್ಟಿದ್ದು, ಕೊಳಾಳು ಕೆಂಚಪ್ಪ ದೇಗುಲಕ್ಕೆ ತೆರಳಿದ್ದ ಆಕೆಯ ಪತಿ ಸದಾಶಿವಪ್ಪ ಹುಷಾರಿಲ್ಲದ ಕಾರಣ ಊಟ ಮಾಡದೆ ಪಾರಾಗಿದ್ದಾರೆ. ಗುರುವಾರ ರಾತ್ರಿ 8 ಗಂಟೆಗೆ ಮನೆ ಮಂದಿ ಊಟ ಮಾಡಿ ನಿದ್ರೆಗೆ ಜಾರಿದ್ದು 10 ಗಂಟೆ ವೇಳೆಗೆ ಊಟ ಮಾಡಿದವರಿಗೆ ವಾಂತಿ ಶುರುವಾಯಿತು. ಆಗ ಗ್ರಾಮಸ್ಥರ ಸಹಾಯದೊಂದಿಗೆ ಆ್ಯಂಬುಲೆನ್ಸ್‌ನಲ್ಲಿ ಹಿರಿಯೂರು ಆಸ್ಪತ್ರೆಗೆ ತೆರಳಿದರು. ಪ್ರಕರಣದ ಗಂಭೀರತೆ ಅರಿತ ಅಲ್ಲಿನ ವೈದ್ಯರು ಚಿತ್ರದುರ್ಗ, ದಾವಣಗೆರೆಯ ಜಿಲ್ಲಾಸ್ಪತ್ರೆಗೆ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಿದರು. ಈ ನಡುವೆ ಮುದ್ದೆ ಸಾರು ತಿಂದಿದ್ದು ಅನಾಹುತಕ್ಕೆ ಕಾರಣ ಎಂದು ಮನೆಯೊಡತಿ ಶಾಂತಮ್ಮಜ್ಜಿ ದೂರಿದ್ದಾರೆ.

ವಿಷಾಹಾರವನ್ನು ಪರೀಕ್ಷೆಗಾಗಿ ದಾವಣಗೆರೆ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ. ಐಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
● ಡಾ| ಕೆ.ಅರುಣ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಆಸ್ಪತ್ರೆಯಲ್ಲಿ ದಾಖಲಾಗಿರುವ ಮಕ್ಕಳ ಲಕ್ಷಣ ನೋಡಿದರೆ ಊಟದಲ್ಲಿ ಕ್ರಿಮಿನಾಶಕ ಬೆರೆತಿರಬಹುದು ಎಂಬ ಸಂಶಯವಿದೆ. ಅದೇ
ಆಧಾರದಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಮುದ್ದುರಾಜ್‌ಗೆ ವೆಂಟಿಲೇಟರ್‌ ಅಳವಡಿಸಲಾಗಿದೆ. ಸುಮಾ ಮತ್ತು ಅಜಯ್‌ಗೆ ಐಸಿಯುನಲ್ಲೇ ಚಿಕಿತ್ಸೆ ಕೊಡಲಾಗುತ್ತಿದೆ. ಆಸ್ಪತ್ರೆಯಿಂದಲೇ ಎಲ್ಲಾ ಚಿಕಿತ್ಸಾ ವೆಚ್ಚ ಭರಿಸಲಾಗುತ್ತಿದೆ.

● ಡಾ| ಎನ್‌.ಕೆ. ಕಾಳಪ್ಪನವರ್‌, ಎಸ್‌.ಎಸ್‌.ಆಸ್ಪತ್ರೆ ನಿರ್ದೇಶಕ

Advertisement
Advertisement

Udayavani is now on Telegram. Click here to join our channel and stay updated with the latest news.

Next