Advertisement

Surathkal ಶಬರಿಮಲೆ ಯಾತ್ರೆ ಸಂದರ್ಭ ಹೃದಯಾಘಾತದಿಂದ ಸಾವು

01:27 AM May 19, 2024 | Team Udayavani |

ಸುರತ್ಕಲ್‌: ಕಾಟಿಪಳ್ಳ ಗಣೇಶಪುರ ಬಳಿಯ ನಿವಾಸಿ ಸಂದೀಪ್‌ ಕಾಟಿಪಳ್ಳ (35) ಶಬರಿಮಲೆ ಯಾತ್ರೆ ಕೈಗೊಂಡಿದ್ದ ಸಂದರ್ಭ ಕೇರಳದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

Advertisement

ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಶಬರಿಮಲೆಗೆ ಮಗನ ಹೆಸರಿನಲ್ಲಿ ಹೇಳಿಕೊಂಡಿದ್ದ ಹರಕೆ ಒಪ್ಪಿಸಲು ಶುಕ್ರವಾರ ತೆರಳಿದ್ದರು. ಶನಿವಾರ ಅಯ್ಯಪ್ಪ ಸನ್ನಿಧಿಯಲ್ಲಿ ಹದಿನೆಂಟು ಮೆಟ್ಟಿಲು ಹತ್ತುವಷ್ಟರಲ್ಲಿ ಹೃದಯಾಘಾತಕ್ಕೆ ಒಳಗಾದರು.

ಸಂದೀಪ್‌ ಅವರು ನಿತ್ಯಾನಂದ ಭಜನ ಮಂದಿರದ ಪ್ರಧಾನ ಕಾರ್ಯದರ್ಶಿಯಾಗಿದ್ದು, ಸೇವಾಟ್ರಸ್ಟ್‌ ,ಕೇಸರಿ ಫ್ರೆಂಡ್ಸ್‌ ಸಹಿತ ಸಾಮಾಜಿಕ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದರು. ಎಂಆರ್‌ಪಿಎಲ್‌ನಲ್ಲಿ ಗುತ್ತಿಗೆ ಸೇವೆಯಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next