ಉಲ್ಲಂಜೆ: ಕಿನ್ನಿಗೋಳಿ – ಕಟೀಲು ಸಂಪರ್ಕಿಸುವ ಉಲ್ಲಂಜೆ ರಸ್ತೆಯ ಬ್ರಹ್ಮಸ್ಥಾನ ಸಮೀಪದ ರಸ್ತೆಯಲ್ಲಿ ಮಳೆ ನೀರಿಗೆ ರಸ್ತೆಯ ಬದಿಯಲ್ಲಿ ದೊಡ್ಡ ಗಾತ್ರದ ಹೊಂಡ ಉಂಟಾಗಿದ್ದು, ದ್ವಿಚಕ್ರ ಸವಾರರು ಹಾಗೂ ಪಾದಚಾರಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಕೆಲವು ದಿನಗಳಿಂದ ತಡರಾತ್ರಿ ಸುರಿಯುತ್ತಿರುವ ಮಳೆಗೆ ರಸ್ತೆಯ ಬದಿಯಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ದುರಸ್ತಿ ಮಾಡಲು ತೆಗೆದ ಚಿಕ್ಕ ಹೊಂಡ ಈಗ ಸುಮಾರು 6 ಅಡಿಗಿಂತಲೂ ಹೆಚ್ಚು ಆಳವಾಗಿದೆ.
ಪಕ್ಕದಲ್ಲೇ ದೊಡ್ಡ ಚರಂಡಿ ಇದ್ದು ಹುಲ್ಲು ಪೊದೆಗಳಿಂದ ಕೂಡಿದೆ. ವಾಹನ ಚಾಲಕರು ಹತ್ತಿರ ಬರುವ ತನಕ ಹೊಂಡ ಗೋಚರವಾಗುವುದಿಲ್ಲ.
ದುರಸ್ತಿ ಕಾರ್ಯವಾಗಲಿ
ಇದೇ ರಸ್ತೆಯಲ್ಲಿ ಎರಡು ಅಪಾಯಕಾರಿ ಸೇತುವೆಗಳಿದ್ದು ಹಲವಾರು ಅಪಘಾತ ಹಾಗೂ ಮೃತಪಟ್ಟ ಘಟನೆಗಳೂ ನಡೆದಿವೆ. ಪ್ರಾಣಕ್ಕೆ ಎರವಾಗುವ ಮುನ್ನ ಎಚ್ಚೆತ್ತು ದುರಸ್ತಿ ಮಾಡುವ ಕೆಲಸ ಆಗಬೇಕಾಗಿದೆ.